ಬೆಳಗಾವಿ: ರಾಜ್ಯದ ಜನರು ಬೆಚ್ಚಿ ಬೀಳಿಸುವಂತ ಘಟನೆಯೊಂದು ಬೆಳಗಾವಿ ನಗರದಲ್ಲಿ ( Belagavi City ) ನಡೆದಿದೆ. ಬೆಳಗಾವಿಯಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದಂತ ವಿದ್ಯಾರ್ಥಿಯನ್ನು ( SSLC Student ) ಮಾರಕಾಸ್ತ್ರಗಳಿಂದ ಇರಿದು ಕೊಚ್ಚಿ ಕೊಲೆ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಬಳಿಯಲ್ಲಿ ನಿನ್ನೆಯ ರಾತ್ರಿ ಈ ಘಟನೆ ನಡೆದಿದೆ.
ಬೆಳಗಾವಿಯ ಖಾಸಗಿ ಶಾಲೆಯೊಂದರಲ್ಲಿ ಎಸ್ ಎಸ್ ಎಲ್ ಸಿಯನ್ನು ಪ್ರಜ್ವಲ್ ಶಿವಾನಂದ ಕರಿಗಾರ(16) ಓದುತ್ತಿದ್ದನು. ಈತ ನಿನ್ನೆಯಿಂದ ಕಾಣೆಯಾಗಿರುವ ಬಗ್ಗೆ ಬೆಳಗಾವಿಯ ಕ್ಯಾಂಪ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.
‘ಸಿದ್ದರಾಮಯ್ಯ ಚುನಾವಣೆಗೆ ಎಲ್ಲೇ ಸ್ಪರ್ಧಿಸಿದರೂ ಗೆಲ್ಲಲ್ಲ ಬಿಡಿ’ : ಈಶ್ವರಪ್ಪ ಲೇವಡಿ
ಕಳೆದ ರಾತ್ರಿಯಂದು ಪ್ರಜ್ವಲ್ ನನ್ನು ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ಈ ಹತ್ಯೆಗೆ ಕಾರಣವೇನು ಎನ್ನುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.