ನವದೆಹಲಿ: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಶ್ರೀ ಶಾರದಾ ಮಠ ಮತ್ತು ರಾಮಕೃಷ್ಣ ಶಾರದಾ ಮಿಷನ್ ಅಧ್ಯಕ್ಷ ಪ್ರವ್ರಾಜಿಕಾ ಭಕ್ತಿಪ್ರಣಾ ( President of Sri Sarada Math and Ramakrishna Sarada Mission, Pravrajika Bhaktiprana ) ಅವರು ನಿನ್ನೆ ನಿಧನರಾಗಿರುವುದಾಗಿ ತಿಳಿದು ಬಂದಿದೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
BIG NEWS : ʻಪ್ರತಿ ಕರೆನ್ಸಿಯ ಎದುರು ಭಾರತೀಯ ರೂಪಾಯಿ ಪ್ರಬಲವಾಗಿದೆʼ: ಕೇಂದ್ರ ನಿರ್ಮಲಾ ಸೀತಾರಾಮನ್
ಈ ಕುರಿತಂತೆ ಟ್ವಿಟ್ ಮಾಡಿದ್ದು, ಶ್ರೀ ಶಾರದಾ ಮಠ ಮತ್ತು ರಾಮಕೃಷ್ಣ ಶಾರದಾ ಮಿಷನ್ ನ 4ನೇ ಅಧ್ಯಕ್ಷರಾದ ಪ್ರವ್ರಾಜಿಕಾ ಭಕ್ತಿಪ್ರಣಾ ಮಾತಾ ಜೀ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ನಿಸ್ವಾರ್ಥದಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ ಉದಾತ್ತ ಆತ್ಮವಾಗಿದ್ದರು. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ. ಈ ಭಾರಿ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ಅವಳ ಕುಟುಂಬ ಮತ್ತು ಅನುಯಾಯಿಗಳಿಗೆ ನೀಡಲಿ ಎಂದಿದ್ದಾರೆ.
Saddened by the demise of Pravrajika Bhaktiprana Mata Ji, 4th president of Sri Sarada Math & Ramakrishna Sarada Mission. She was a noble soul who served the society selflessly. May her soul rest in peace. May God grant her family & followers the strength to bear this huge loss. pic.twitter.com/PIlZH4crt9
— Basavaraj S Bommai (@BSBommai) December 12, 2022
ಅಂದಹಾಗೇ 102 ವರ್ಷ ವಯಸ್ಸಾಗಿದ್ದಂತ ಪ್ರವ್ರಾಜಿಕಾ ಭಕ್ತಿಪ್ರಣಾ ಅವರು, ದೀರ್ಘಕಾಲದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಹೀಗಾಗಿ ಅವರು ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಅವರು ಡಿಸೆಂಬರ್ 5 ರಂದು ತೀವ್ರ ಜ್ವರದಿಂದ ದಾಖಲಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಸೆಂಬರ್ 10 ರಂದು, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ನಂತರ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಯಿತು. ಇಂತಹ ಅವರು ನಿನ್ನೆಯ ರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.