ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ಐಪಿಎಲ್ ಫ್ರಾಂಚೈಸಿಯ ವೇಗದ ಬೌಲರ್ ಡೇವಿಡ್ ಪೇನ್, ಕಾಲಿನ ಹಿಮ್ಮಡಿಯ (Ankle) ಗಾಯದ ಕಾರಣದಿಂದಾಗಿ ಈ ಬಾರಿಯ ಲೀಗ್‌ನ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ ಎಂದು ತಂಡ ಖಚಿತಪಡಿಸಿದೆ.
ತಂಡದ ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ಈ ಸೀಸನ್‌ನಲ್ಲಿ ಇದುವರೆಗೆ ಒಂದು ಪಂದ್ಯವನ್ನೂ ಆಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೇವಲ ಎರಡು ದಿನಗಳ ಹಿಂದೆಯಷ್ಟೇ ಇಂಗ್ಲೆಂಡ್‌ನ ಮತ್ತೊಬ್ಬ ವೇಗಿ ಬ್ರೈಡನ್ ಕಾರ್ಸ್ ಕೂಡ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಕೈಗೆ ಗಾಯ ಮಾಡಿಕೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಅವರ ಬದಲಿಗೆ ದಿಲ್ಶನ್ ಮಧುಶಂಕ ತಂಡ ಸೇರಿಕೊಂಡಿದ್ದರೂ ಸಹ, ಲೀಗ್‌ನ ಮಧ್ಯಭಾಗದಲ್ಲಿ ಇಂತಹ ಸರಣಿ ಗಾಯಗಳು ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ ಎಂಬುದು ಕಹಿ ಸತ್ಯ.
ವಾಸ್ತವವಾಗಿ ಡೇವಿಡ್ ಪೇನ್ ತಂಡದ ಮೊದಲ ಆಯ್ಕೆಯಾಗಿರಲಿಲ್ಲ. ಆಸ್ಟ್ರೇಲಿಯಾದ ಜ್ಯಾಕ್ ಎಡ್ವರ್ಡ್ಸ್ ಗಾಯಗೊಂಡಾಗ ಅವರ ಬದಲಿಗೆ ಪೇನ್ ತಂಡಕ್ಕೆ ಬಂದಿದ್ದರು. ಈ ಸೀಸನ್‌ನಲ್ಲಿ ಪೇನ್ ಆಡಿದ್ದು ಕೇವಲ ಎರಡು ಪಂದ್ಯಗಳನ್ನು ಮಾತ್ರ:3 ಓವರ್‌ಗಳಲ್ಲಿ 35 ರನ್ ನೀಡಿ ರಜತ್ ಪಾಟಿದಾರ್ ಮತ್ತು ಜಿತೇಶ್ ಶರ್ಮಾ ಅವರ ವಿಕೆಟ್ ಪಡೆದಿದ್ದರು. ಆದರೆ ಅಂತಿಮವಾಗಿ SRH ಸೋಲನ್ನಪ್ಪಿತ್ತು.
2 ಓವರ್‌ಗಳಲ್ಲಿ 35 ರನ್ ನೀಡಿ ದುಬಾರಿಯಾಗಿದ್ದರು, ಯಾವುದೇ ವಿಕೆಟ್ ಪಡೆದಿರಲಿಲ್ಲ. ಆದರೆ ಈ ಪಂದ್ಯವನ್ನು SRH ಗೆದ್ದುಕೊಂಡಿತ್ತು.
ಪೇನ್ ಅವರ ಬದಲಿಗೆ ತಂಡ ಯಾರನ್ನು ಆಯ್ಕೆ ಮಾಡಲಿದೆ ಎಂಬುದು ಇನ್ನೂ ಕುತೂಹಲಕಾರಿಯಾಗಿದೆ.








