ಹೈದರಾಬಾದ್: ಕ್ಯಾಬಿನ್ ಮತ್ತು ಕಾಕ್ಪಿಟ್ನಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಬುಧವಾರ ರಾತ್ರಿ ಗೋವಾದಿಂದ ಬರುತ್ತಿದ್ದ ಸ್ಪೈಸ್ಜೆಟ್ ವಿಮಾನವು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಘಟನೆ ಕುರಿತು ವಿಮಾನಯಾನ ನಿಯಂತ್ರಕ ಡಿಜಿಸಿಎ ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಜಿಸಿಎ ಅಧಿಕಾರಿ ಪ್ರಕಾರ, ʻಸ್ಪೈಸ್ಜೆಟ್ ಕ್ಯೂ 400 ವಿಮಾನ ವಿಟಿ-ಎಸ್ಕ್ಯೂಬಿ (ಗೋವಾ- ಹೈದರಾಬಾದ್) 86 ಜನರನ್ನು ಹೊತ್ತೊಯ್ಯುತ್ತಿತ್ತು. ಕಾಕ್ಪಿಟ್ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪ್ರಯಾಣಿಕರು ತುರ್ತು ನಿರ್ಗಮನದ ಮೂಲಕ ಕೆಳಗಿಳಿದರು. ವಿಮಾನದಿಂದ ಇಳಿಯುವಾಗ ಒಬ್ಬ ಪ್ರಯಾಣಿಕನಿಗೆ ಕಾಲುಗಳ ಮೇಲೆ ಸಣ್ಣ ಗೀರುಗಳು ಉಂಟಾಗಿವೆ. ಉಳಿದ ಎಲ್ಲರೂ ಸೇಫ್ ಆಗಿದ್ದಾರೆʼ ಎಂದು ತಿಳಿಸಿದ್ದಾರೆ.
ಸ್ಪೈಸ್ಜೆಟ್ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಹೊಗೆ ತುಂಬಿದ ಕ್ಯಾಬಿನ್ನ ಫೋಟೋ ಮತ್ತು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುತ್ತಿರುವ ವಿಮಾನದ ಎರಡು ವೀಡಿಯೊಗಳನ್ನು ಟ್ವೀಟ್ ಮಾಡುವ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
@narendramodi @PMOIndia @flyspicejet @PilotSpicejet @SpiceJetRBLX @JM_Scindia Respected sir or to whomsoever it may concern.
Night we were returning to hyd from goa within the ✈️ (Spicejet),suddenly there was smoke all around inside the plane starting from nagpur to hyderabad… pic.twitter.com/zZa9OUmJib— Srikanth Mulupala (@SrikanthMulupal) October 13, 2022