ನವದೆಹಲಿ: ತಾಂತ್ರಿಕ ತೊಂದರೆಯಿಂದ ಸುದ್ದಿಯಾಗಿದ್ದಂತ ಸ್ಪೈಸ್ ಜೆಟ್ ( SpiceJet )ವಿಮಾನಯಾನ ಸಂಸ್ಥೆಗೆ DGCA ಬಿಗ್ ಶಾಕ್ ನಿಡಿದೆ. ಇಂದಿನಿಂದ ಎಂಟು ವಾರಗಳವರೆಗೆ ಅನುಮೋದಿತ ಬೇಸಿಗೆ ವೇಳಾಪಟ್ಟಿಯ ಶೇ. 50ರಷ್ಟು ಸ್ಪೈಸ್ ಜೆಟ್ ನಿರ್ಗಮನವನ್ನು ನಿರ್ಬಂಧಿಸಿ ಆದೇಶಿಸಿದೆ. ಹೀಗಾಗಿ ಇಂದಿನಿಂದ ಒಂದು ವಾರಗಳ ಕಾಲ ಶೇ.50ರಷ್ಟು ವಿಮಾನಗಳು ಮಾತ್ರವೇ ಯಾನ ನಡೆಸಲಿವೆ.
ಈ ಕುರಿತಂತೆ ಡಿಜಿಸಿಎ ಆದೇಶ ಹೊರಡಿಸಿದ್ದು, ಸ್ಪೈಸ್ ಜೆಟ್ ಸಲ್ಲಿಸಿದ ವಿವಿಧ ಸ್ಥಳ ಪರಿಶೀಲನೆಗಳು, ತಪಾಸಣೆಗಳು ಮತ್ತು ಶೋಕಾಸ್ ನೋಟಿಸ್ಗೆ ಪ್ರತ್ಯುತ್ತರವನ್ನು ಗಮನದಲ್ಲಿಟ್ಟುಕೊಂಡು ಸ್ಪೈಸ್ ಜೆಟ್ನ ನಿರ್ಗಮನಗಳ ಸಂಖ್ಯೆಯನ್ನು ಈ ಆದೇಶದ ದಿನಾಂಕದಿಂದ 8 ವಾರಗಳವರೆಗೆ ಬೇಸಿಗೆ ಶೆಡ್ಯೂಲ್ 2022 ರ ಅಡಿಯಲ್ಲಿ ಅನುಮೋದಿಸಲಾದ ನಿರ್ಗಮನಗಳ ಸಂಖ್ಯೆಯ 50% ಕ್ಕೆ ಸೀಮಿತಗೊಳಿಸಿದೆ.
In view of findings of various spot checks, inspections & reply to show cause notice submitted by SpiceJet number of departures of SpiceJet is restricted to 50% of the number of departures approved under Summer Schedule 2022 for 8 weeks from the date of issue of this order: DGCA pic.twitter.com/nkeN4dVCBz
— ANI (@ANI) July 27, 2022