ನವದೆಹಲಿ: ಸೌದಿ ಅರೇಬಿಯಾದ ಜೆಡ್ಡಾದಿಂದ ( Saudi Arabia’s Jeddah ) ಹೊರಟಿದ್ದ ಸ್ಪೈಸ್ ಜೆಟ್ ವಿಮಾನವು ( SpiceJet flight ) ಹೈಡ್ರಾಲಿಕ್ ವೈಫಲ್ಯದಿಂದಾಗಿ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದರು.
ಪೋಷಕರ ಕೈಯಲ್ಲಿನ ಮಗುವಿನ ಮೃತದೇಹ ಕಂಡು ಮರುಗಿದ ಮಾಜಿ ಸಿಎಂ HDK: ತುಮಕೂರು DHOಗೆ ಕರೆಮಾಡಿ ತರಾಟೆ
ಸ್ಪೈಸ್ ಜೆಟ್ ವಿಮಾನ ಎಸ್ಜಿ -306 ಕೋಝಿಕ್ಕೋಡ್ಗೆ ಹಾರುತ್ತಿದ್ದಾಗ ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯದಿಂದಾಗಿ ಕೊಚ್ಚಿಯಲ್ಲಿ ಇಳಿಯಲು ತಿರುಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಸಂಜೆ 6.27ಕ್ಕೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಸಂಜೆ 7.19ಕ್ಕೆ ವಿಮಾನವು ಸುರಕ್ಷಿತವಾಗಿ ಇಳಿದಿರೋದಾಗಿ ತಿಳಿದು ಬಂದಿದೆ.