ಉತ್ತರಾಖಂಡ: 38 ವರ್ಷಗಳ ಹಿಂದೆ ಸಿಯಾಚಿನ್ನಲ್ಲಿ ಹುತಾತ್ಮರಾದ ಉತ್ತರಾಖಂಡದ ನಿವಾಸಿ ʻಲ್ಯಾನ್ಸ್ ನಾಯಕ್ ಚಂದ್ರಶೇಖರ್ ಹೆರ್ಬೋಲಾʼ ಅವರ ಅಂತ್ಯಕ್ರಿಯೆ ಸಕಲ ಸೇನಾ ಗೌರವಗಳೊಂದಿಗೆ ಉತ್ತರಾಖಂಡ್ನ ರಾಣಿಬಾಗ್ನ ಚಿತ್ರಶಿಲಾ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಯಾರು ಈ ಚಂದ್ರಶೇಖರ್ ಹೆರ್ಬೋಲಾ?
ಮೂಲತಃ ಅಲ್ಮೋರಾ ಜಿಲ್ಲೆಯ ದ್ವಾರಹತ್ನ ಹತ್ತಿಗುರ್ ಬಿಂಟಾ ನಿವಾಸಿಯಾಗಿರುವ ಚಂದ್ರಶೇಖರ್ ಹರ್ಬೋಲಾ ಅವರು 19 ಕುಮಾವ್ ರೆಜಿಮೆಂಟ್ನಲ್ಲಿ ಲಾಂಸಾನಾಯಕ್ ಆಗಿದ್ದರು. ಅವರು 1975 ರಲ್ಲಿ ಸೈನ್ಯಕ್ಕೆ ಸೇರಿದರು. 1984ರಲ್ಲಿ ಸಿಯಾಚಿನ್ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಘರ್ಷಣೆ ನಡೆದಿತ್ತು. ಭಾರತವು ಈ ಕಾರ್ಯಾಚರಣೆಗೆ ಆಪರೇಷನ್ ಮೇಘದೂತ್ ಎಂದು ಹೆಸರಿಸಿತ್ತು.
1984 ರ ಮೇ 29ರಂದು ಸಿಯಾಚಿನ್ನಲ್ಲಿ ಗಸ್ತು ತಿರುಗಲು ಭಾರತದಿಂದ 20 ಸೈನಿಕರ ತುಕಡಿಯನ್ನು ಕಳುಹಿಸಲಾಯಿತು. ಇದರಲ್ಲಿ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಹೆರ್ಬೋಲಾ ಕೂಡ ಸೇರಿದ್ದರು. ಸಿಯಾಚಿನ್ನಲ್ಲಿ ಭಾರಿ ಹಿಮಪಾತದಿಂದ ಕೆಲವು ಸೈನಿಕರು ಸಾವನ್ನಪ್ಪಿದ್ದರು. ಇನ್ನು ಕೆಲವರು ನಾಪತ್ತೆಯಾಗಿದ್ದರು. ನಾಪತ್ತೆಯಾದವರಲ್ಲಿ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಕೂಡ ಒಬ್ಬರು. ಸೈನಿಕರ ಪತ್ತೆಗಾಗಿ ಭಾರತ ಸರ್ಕಾರ ಮತ್ತು ಸೇನೆಯಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು. ಇದರಲ್ಲಿ 15 ಯೋಧರ ಮೃತದೇಹಗಳು ಪತ್ತೆಯಾಗಿದ್ದು, ಐವರು ಯೋಧರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
#WATCH | A patrol of Indian Army recovered the mortal remains of LNk (Late) Chander Shekhar who was missing since 29 May 1984 while deployed at Glacier due to an Avalanche: Northern Command, Indian Army pic.twitter.com/capTnG1APY
— ANI (@ANI) August 15, 2022
ಇದೀಗ 38 ವರ್ಷಗಳ ಬಳಿಕ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ಭಾರತೀಯ ಸೇನೆಯು ಯೋಧನ ಅವಶೇಷವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಯಿತು. ಸೇನಾ ಸಂಖ್ಯೆಯನ್ನು ಹೊಂದಿರುವ ಗುರುತಿನ ಬಿಲ್ಲೆಗಳ ಸಹಾಯದಿಂದ ಯೋಧ ಚಂದ್ರಶೇಖರ್ ಎಂದು ಗುರುತಿಸಲಾಯಿತು. ಕೊನೆಗೂ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ರವಾನಿಸಲಾಗಿದ್ದು, ಅಂತ್ಯಕ್ರಿಯೆ ನಡೆಸಲಾಗಿದೆ.
ಪೊಲೀಸರಿಂದ ರೈಫಲ್ ಕಸಿದುಕೊಂಡು ಪರಾರಿಯಾಗಲು ಯತ್ನ: ಎಲ್ಇಟಿ ಉಗ್ರನ ಹತ್ಯೆ
Good News: ಗ್ರಾಮ ಒನ್ ಗೆ ಇನ್ನಷ್ಟು ಸೇವೆ ಸೇರ್ಪಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ
‘ನಾನು ಕ್ರಿಶ್ಚಿಯನ್, ರಾಷ್ಟ್ರಧ್ವಜಕ್ಕೆ ನಮಸ್ಕರಿಸುವುದಿಲ್ಲ’: ಧ್ವಜಾರೋಹಣ ಮಾಡಲು ನಿರಾಕರಿಸಿದ ಶಾಲಾ ಮುಖ್ಯಶಿಕ್ಷಕಿ