ಡೆಹ್ರಾಡೂನ್: ಡೆಹ್ರಾಡೂನ್ನಲ್ಲಿ ರಸ್ತೆ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತು ಸಂಚಾರ ನಿಲ್ಲಿಸಿ ಮದ್ಯ ಸೇವಿಸಿ ಪೊಲೀಸರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಪ್ರಭಾವಿ ಬಾಬಿ ಕಟಾರಿಯಾ(Social Media Influencer Bobby Kataria) ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇತ್ತೀಚೆಗಷ್ಟೇ ವಿಮಾನದೊಳಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಧೂಮಪಾನ ಮಾಡಿ ಕಾನೂನು ಉಲ್ಲಂಘಿಸಿದಕ್ಕಾಗಿ ಸುದ್ದಿಯಲ್ಲಿದ್ದರು.
ಬಾಬಿ ಕಟಾರಿಯಾ ಗುರ್ಗಾಂವ್ ನಿವಾಸಿಯಾಗಿದ್ದು, ಅವರು Instagram ನಲ್ಲಿ 6.30 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
View this post on Instagram
ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸ್ ಪ್ರಕರಣ ಅಥವಾ ಎಫ್ಐಆರ್ ದಾಖಲಿಸಲಾಗಿದೆ.
ಜಿಲ್ಲಾ ನ್ಯಾಯಾಲಯದಿಂದ ಬಾಬಿ ಕಟಾರಿಯಾ ವಿರುದ್ಧ ಪೊಲೀಸರು ಜಾಮೀನು ರಹಿತ ವಾರಂಟ್ ಪಡೆದಿದ್ದಾರೆ ಎಂದು ಎಸ್ಎಚ್ಒ ರಾಜೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಕೇರಳ ಮೂಲದ ಸೇನಾಧಿಕಾರಿಯ ಮೃತದೇಹ ನದಿಯಲ್ಲಿ ಪತ್ತೆ
Breaking news: ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: 9 ಬಿಜೆಪಿ ಕಾರ್ಯಕರ್ತರ ಬಂಧನ