ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ( Union minister Smriti Irani ) ಅವರು ಭಾನುವಾರ ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿ’ಸೋಜಾ ( Congress leaders Pawan Khera, Jairam Ramesh, Netta D’ Souza ) ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
‘ಸಿದ್ದರಾಮಯ್ಯ ಆಡಳಿತ, ನೀತಿ ನಿರ್ಧಾರʼ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ‘ವಿಪಕ್ಷ ನಾಯಕ’ ಏನ್ ಮಾತನಾಡಿದ್ರು ಗೊತ್ತಾ.?
“ಲಿಖಿತ ಬೇಷರತ್ ಕ್ಷಮೆಯಾಚಿಸಿ” ಮತ್ತು ಆರೋಪಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳುವಂತೆ ಇರಾನಿ ಅವರು ಲೀಗಲ್ ನೋಟಿಸ್ ನಲ್ಲಿ ಸೂಚಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಕಾಂಗ್ರೆಸ್ ತನ್ನ ಮಗಳ ಚಾರಿತ್ರ್ಯವನ್ನು ವಧೆ ಮಾಡಿದೆ. “ಸಾರ್ವಜನಿಕವಾಗಿ ವಿರೂಪಗೊಳಿಸಿದೆ” ಎಂದು ಶ್ರೀಮತಿ ಇರಾನಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಯಾವುದೇ ತಪ್ಪಿಗೆ ಪುರಾವೆಗಳನ್ನು ತೋರಿಸುವಂತೆ ಕಾಂಗ್ರೆಸ್ಗೆ ಸವಾಲು ಹಾಕಿದರು. ಕ್ಷಮೆ ಯಾಚಿಸದೇ ಇದ್ದರೇ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಹೋರಾಟ ನಡೆಸೋದಾಗಿಯೂ ಎಚ್ಚರಿಕೆ ನೀಡಿದ್ದಾರೆ.