ಬೆಂಗಳೂರು: ಮೈಸೂರಿನ ಕೆ ಆರ್ ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣಗೆ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈಗ ಈ ಜಾಮೀನು ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಎಸ್ಐಟಿ ಅರ್ಜಿ ಸಲ್ಲಿಸಿದೆ. ಹೀಗಾಗಿ ಶಾಸಕ ಹೆಚ್.ಡಿ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾದಂತೆ ಆಗಿದೆ.
ಮಹಿಳೆ ಅಪಹರಣ ಪ್ರಕರಣದಲ್ಲಿ ಜಾಮೀನು ಸೆಷನ್ಸ್ ಕೋರ್ಟ್ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನು ರದ್ದುಗೊಳಿಸುವಂತೆ ಎಸ್ಐಟಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಎಸ್ಐಟಿ ಶಾಸಕ ಹೆಚ್.ಡಿ ರೇವಣ್ಣ ಜಾಮೀನು ಅರ್ಜಿ ರದ್ದುಕೋರಿ ಸಲ್ಲಿಸಿರುವಂತ ಅರ್ಜಿಯನ್ನು ಹೈಕೋರ್ಟ್ ಮೇ.31ರಂದು ವಿಚಾರಣೆ ನಡೆಸೋ ಸಾಧ್ಯತೆ ಇದೆ.
ಅಂದಹಾಗೇ ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಂಧನಕ್ಕೆ ಒಳಗಾಗಿ, ಜೈಲು ಪಾಲಾಗಿದ್ದರು. ಈ ಬಳಿಕ ಅವರಿಗೆ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದೀಗ ಜಾಮೀನು ರದ್ದು ಕೋರಿ ಹೈಕೋರ್ಟ್ ಗೆ ಎಸ್ಐಟಿ ಅರ್ಜಿ ಸಲ್ಲಿಸಿದೆ.
BREAKING: ದೆಹಲಿ ಗಲಭೆ ಪ್ರಕರಣ: ‘ಉಮರ್ ಖಾಲಿದ್’ಗೆ ಜಾಮೀನು ನಿರಾಕರಿಸಿದ ಕೋರ್ಟ್ | Delhi Riots conspiracy case
BREAKING : ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ ಬಳಿದ ಪುಂಡರು : ಮೂವರ ಬಂಧನ