ಚಿಕ್ಕಬಳ್ಳಾಪುರ: ಒಂಟಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊರ್ವನಿಗಾಗಿ ಶೋಧ ನಡೆಸುತ್ತಿದ್ದಾರೆ.
ಜುಲೈ 15ರಂದು ಮನೆಯಲ್ಲಿದ್ದ ಅಂಚನಾ ತುಳಸಿಯಾನ ಎಂಬ ಮಹಿಳೆಯ ಕತ್ತುಕೊಯ್ದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೇವನಹಳ್ಳಿ ಪೊಲೀಸರು ಬಿಹಾರದ ಪಶುಪತಿ ಅಲಿಯಾಸ್ ಪಪಿಯಾ ಹಾಗೂ ಧೀರಜ್ ಕುಮಾರ್ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಯಾಗಿರುವ ಪಶುಪತಿ ಇದೇ ಅಂಚನಾ ತುಳಸಿಯಾನರ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದು ಕಳೆದ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದ. ಮಾಲೀಕರ ಮನೆಯಲ್ಲೇ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದರು. ಇದೀಗ ಇಬ್ಬರು ಪೊಲೀಸರು ಬಂಧಿಸಿದ್ದಾರೆ.