ಯುಕೆ: ಇದುವರೆಗೂ ಡೇಟಿಂಗ್ನಲ್ಲಿ ಇರದ ಒಂಟಿ ವ್ಯಕ್ತಿಯೊಬ್ಬ ತನಗಾಗಿ ಗೆಳತಿಯನ್ನು ಹುಡುಕಲು ಬೃಹತ್ ಬಿಲ್ಬೋರ್ಡ್ನಲ್ಲಿ ಜಾಹೀರಾತು ನೀಡಿರುವ ಘಟನೆ ಯುಕೆಯಲ್ಲಿ ನಡೆದಿದ್ದು, ಇದೀಗ ಅದರ ಎಲ್ಲೆಡೆ ವೈರಲ್ ಆಗುತ್ತಿದೆ.
ಲೀಡ್ಸ್ನ 23 ವರ್ಷದ ಎಡ್ ಚಾಪ್ಮನ್ ತನ್ನ ಜೀವನದುದ್ದಕ್ಕೂ ಏಕಾಂಗಿಯಾಗಿಯೇ ದಿನ ಕಳೆದಿದ್ದಾನೆ. ಇದೀಗ ಡೇಟಿಂಗ್ ಮಾಡಲು ನಿರ್ಧರಿಸಿ ಗೆಳತಿಯನ್ನು ಹುಡುಕಲು ಡೇಟಿಂಗ್ ಅಪ್ಲಿಕೇಶನ್ಗಳ ಮೊರೆ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಗೆಳತಿಯನ್ನು ಹುಡುಕುವಲ್ಲಿ ಎಡ್ ಚಾಪ್ಮನ್ ವಿಫಲವಾದ.
ಇದರಿಂದ ಬೇಸರಕ್ಕೊಳಗಾದ ಎಡ್ ಚಾಪ್ಮನ್ ತನ್ನ ಅದೃಷ್ಟ ಪರೀಕ್ಷಿಸಲು ವಾಹನಗಳು ಓಡಾಡುವ ಮಾರ್ಗದಲ್ಲಿ ದೈತ್ಯ ಬಿಲ್ಬೋರ್ಡ್ನಲ್ಲಿ ಡೇಟಿಂಗ್ ಬಗ್ಗೆ ಜಾಹೀರಾತು ಫಲಕ ನಿರ್ಮಿಸಿದರು. ಇದೀಗ ಜಾಹೀರಾತು ಫಲಕವನ್ನು ಹಾಕಿದಾಗಿನಿಂದ 18 ರಿಂದ 48 ವರ್ಷ ವಯಸ್ಸಿನ ಮಹಿಳೆಯರು ನನ್ನ ಸಂದೇಶವನ್ನು ಸ್ವೀಕರಿಸಿದ್ದಾರೆ. ಈಗ ನಾನು ನಾಲ್ವರು ಮಹಿಳೆಯರೊಂದಿಗೆ ಮಾತನಾಡುತ್ತಿದ್ದೇನೆ. ಅವರೆಲ್ಲರೂ ನನ್ನೊಂದಿಗೆ ಡೇಟಿಂಗ್ಗೆ ಹೋಗಲು ಉತ್ಸುಕರಾಗಿದ್ದಾರೆ. ಅವರೊಂದಿಗೆ ನನ್ನ ಮೊದಲ ಡೇಟಿಂಗ್ ಏರ್ಪಡಿಸಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಎಡ್ ಚಾಪ್ಮನ್.
ಬಿಲ್ಬೋರ್ಡ್ನ ವಿನ್ಯಾಸವನ್ನು ನಾನೇ ಮಾಡಿದ್ದೇನೆ. ಅದರಲ್ಲಿ ನನ್ನ ಸ್ವಂತ ಚಿತ್ರವನ್ನು ಹಾಕಿದ್ದೇನೆ. ಈ ಜಾಹೀರಾತು ಫಲಕಕ್ಕಾಗಿ £ 425 (Rs 40,000) ಪಾವತಿಸಿದ್ದೇನೆ ಎಂದಿದ್ದಾರೆ.
BIGG NEWS : ಕರ್ನಾಟಕದ ಸಾರಿಗೆ ಬಸ್ ಟಿಕೆಟ್ ನಲ್ಲಿ `ಜೈ ಮಹಾರಾಷ್ಟ್ರ’ ಪ್ರಿಂಟ್!
BIG NEWS : ಡಿವೋರ್ಸ್ ವಾಪಸ್: ದಾಂಪತ್ಯ ಜೀವನ ಮುಂದುವರೆಸಲು ನಟ ಧನುಷ್ & ಐಶ್ವರ್ಯಾ ರಜನಿಕಾಂತ್ ನಿರ್ಧಾರ!