ಬೆಂಗಳೂರು: 2013ರಿಂದ ಸಿದ್ದರಾಮಯ್ಯ ( Siddaramaiah ) ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ( Congress Government ) ನುಡಿದಂತೆ ನಡೆದಿತ್ತು. ಆದರೆ ಈ ಸರ್ಕಾರ ಕೋಮುವಾದದ ಹೆಸರಲ್ಲಿ ಸಮಾಜವನ್ನು ಹೊಡೆದು ಭ್ರಷ್ಟಾಚಾರ, ಬೆಲೆ ಏರಿಕೆ ಮೂಲಕ ಅಧಿಕಾರ ನಡೆಸುತ್ತಿದೆ. ಈ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ಎಲ್ಲ ಯುವಕರು ಕೈ ಜೋಡಿಸಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ( Youth Congress president Nalapad ) ಹೇಳಿದ್ದಾರೆ.
ನಗರದಲ್ಲಿ ಇಂದು ಭಾರತ ಜೋಡೋ ಯಾತ್ರೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಜ್ಯ ಯುವ ಕಾಂಗ್ರೆಸ್ ಪಾಲಿಗೆ ಇಂದು ಅತಿ ಮುಖ್ಯವಾದ ದಿನ. ನಮ್ಮ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಈ ವಿಚಾರವಾಗಿ ಮಾತನಾಡುತ್ತಿದ್ದರು. ನಾನು ಯುವಕರ ಧ್ವನಿಯಾಗಬೇಕು ಎಂದು ಈ ಕಾರ್ಯಕ್ರಮ ರೂಪಿಸಲು ನಿರ್ದೇಶನ ನೀಡಿದ್ದರು. ಪ್ರತಿ ಯುವಕರ ಕಷ್ಟಕ್ಕೆ ಸ್ಪಂದಿಸಿ ಅವರ ಕೈ ಹಿಡಿಯಲು ಈ ಕಾರ್ರಕ್ರಮ ಹಮ್ಮಿಕಂಡಿದ್ದೇವೆ ಎಂದರು.
ಹೀಗಾಗಿ ನಾವು ಯುವ ದೃಷ್ಟಿ, ಉದ್ಯೋಗ ಸೃಷ್ಟಿ ಎಂಬ 2 ಕಾರ್ಯಕ್ರಮ ಆಯೋಜಿಸಿದ್ದೇವೆ. ನಮ್ಮ ಕಾರ್ಯಕಾರಣಿ ಸಭೆ ಆದಾಗ, ಯುವ ಉದ್ಯೋಗ ಸೃಷ್ಟಿ ಆಪ್ ಉದ್ಘಾಟಿಸಿದ್ದರು. ಅದರ ಮೂಲಕ 41 ಸಾವಿರಕ್ಕೂ ಹೆಚ್ಚು ಜನ ಹೆಸರು ನೋಂದಣಿ ಮಾಡಿದ್ದಾರೆ. ಈಗ ವೆಬ್ ಸೈಟ್ ಮೂಲಕ ರಾಜ್ಯದ ಯಾವುದೇ ಯುವಕ ಎಲ್ಲೇ ಇದ್ದರೂ ಈ ವೆಬ್ ಸೈಟ್ ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಭಾರತ ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಮಾಡುತ್ತಿದ್ದಾರೆ. ಸೆ.30ರಂದು ರಾಜ್ಯದಲ್ಲಿ ಪಾದಯಾತ್ರೆ ಆರಂಭವಾಗಲಿದ್ದು, 21 ದಿನ ಯಾತ್ರೆ ನಡೆಯಲಿದೆ. ಈ ಪೈಕಿ 2 ದಿನ ರಾಹುಲ್ ಗಾಂಧಿ ಅವರು ನಿರುದ್ಯೋಗಿ ಯುವಕರ ಜತೆ ಸಂವಾದ ನಡೆಸಲಿದ್ದಾರೆ. ರಾಹುಲ್ ಗಾಂಧಿ ಅವರೇ ಅವರ ಕಷ್ಟ ಆಲಿಸಿ, ಆ ನಿರುದ್ಯೋಗಿ ಯುವಕರ ಧ್ವನಿಯಾಗಿ, ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನೀವು ನಿಮ್ಮ ಧ್ವನಿಯನ್ನು ಅವರ ಮುಂದೆ ಹೇಳಿಕೊಂಡರೆ, ಅವರು ಕರ್ನಾಟಕ ರಾಜ್ಯದ ಯುವಕರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದರು.
ದೇಹದಲ್ಲಿ ಕೊಲೆಸ್ಟ್ರಾಲ್ & ಸಕ್ಕರೆ ನಿಯಂತ್ರಿಸಲು ಆವಕಾಡೊ ಹಣ್ಣು ರಾಮಬಾಣ : ಸಂಶೋಧನೆ | Avocado fruit benefits