ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನರೇ ಎಚ್ಚರ.. ಎಚ್ಚರ..! ಬಿಎಂಟಿಸಿ ಬಸ್ಸಿನಲ್ಲಿ ಇನ್ಮುಂದೆ ಲೇಡಿಸ್ ಸೀಟ್ನಲ್ಲಿ ಕೂತು ಪ್ರಯಾಣಿಸಿದ್ರೆ ನಿಮ್ಮ ಜೇಬಿಗೆ ದಂಡ ಬೀಳುವುದು ಗ್ಯಾರಂಟಿ ಎಂಬ ಮಾಹಿತಿ ಲಭ್ಯವಾಗಿದೆ.
Shocking News : ಮೈಸೂರಿನಲ್ಲಿ ಘೋರ ದುರಂತ : ಬಾವಿಗೆ ಹಾರಿ ದಂಪತಿ ಆತ್ಮಹತ್ಯೆ
ನಗರದ ಜನರ ದಿನ ಬೆಳಗಾದ್ರೆ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾರೆ. ಈ ನಡುವೆ ಕೆಲ ಪ್ರಯಾಣಿಕರು ಸಂಚಾರ ಮಾಡುವ ಭರದಲ್ಲಿಯೋ ಅಥವಾ ತಮ್ಮ ನಿರ್ಲಕ್ಷ್ಯದಿಂದಲೋ ತಾವು ಮಾಡಿದ ಯಡವಟ್ಟಿನಿಂದಲೇ ದಂಡ ಕಟ್ಟಿದರೆ, ಮತ್ತೆ ಕೆಲವರು ಟಿಕೆಟ್ ಪಡೆಯದೇ ಬಿಟ್ಟಿಯಾಗಿ ಸಂಚಾರ ಮಾಡುವ ಕಳ್ಳಾಟದಿಂದ ತಗ್ಲಾಕೊಂಡು ಬಿಎಂಟಿಸಿ ಖಜಾನೆಗೆ ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ಹಣ ತುಂಬಿಸಿದ್ದಾರೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಟಿಕೆಟ್ (Bus Ticket) ರಹಿತ ಪ್ರಯಾಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆಗಸ್ಟ್ನಲ್ಲಿ 2,744 ಪ್ರಯಾಣಿಕರಿಂದ 4.62 ಲಕ್ಷ ರೂಪಾಯಿಗಳನ್ನು ದಂಡದ ಮೂಲಕ ಸಂಗ್ರಹಿಸಿದೆ.
ಬಿಎಂಟಿಸಿ ಬಸ್ನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ ಹಾಗೂ ಸಂಸ್ಥೆಯ ಸಾರಿಗೆ ಆದಾಯ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಯ ತನಿಖಾ ತಂಡ ನಗರದಾದ್ಯಂತ ಆಗಸ್ಟ್ನಲ್ಲಿ 18,972 ಟ್ರಿಪ್ಗಳಲ್ಲಿ ತಪಾಸಣೆ ನಡೆಸಿತ್ತು. ಇದರಲ್ಲಿ 2,625 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ ಒಟ್ಟು 4.50 ಲಕ್ಷ ರೂಪಾಯಿ ದಂಡ (Fine) ವಸೂಲಿ ಮಾಡಿದೆ.
Shocking News : ಮೈಸೂರಿನಲ್ಲಿ ಘೋರ ದುರಂತ : ಬಾವಿಗೆ ಹಾರಿ ದಂಪತಿ ಆತ್ಮಹತ್ಯೆ
ಇಷ್ಟೇ ಅಲ್ಲ ಟಿಕೆಟ್ ರಹಿತ ಪ್ರಯಾಣಿಕರು ಸಂಚಾರ ಮಾಡುತ್ತಿದ್ದ ಬಸ್ಗಳಲ್ಲಿ ಕರ್ತವ್ಯ ನಿರ್ಲಕ್ಷ್ಯ ಆಧಾರದ ಮೇಲೆ ನಿರ್ವಾಹಕರಗಳ ವಿರುದ್ಧವು ಕೂಡ 1,430 ಪ್ರಕರಣಗಳನ್ನು ದಾಖಲು ಮಾಡಲಾಗಿದೆ
ಇದರ ಮಧ್ಯೆ ಮಹಿಳೆಯರಿಗಾಗಿ ಮೀಸಲಿರಿಸಿದ್ದ ಸೀಟ್ಗಳಲ್ಲಿ (Ladies Seat) ಕೂತು ಚೆಕ್ಕಿಂಗ್ ಸ್ಕ್ವಾಡ್ ಕೈಯಲ್ಲಿ ಸಿಕ್ಕಿ ಹಾಕಿಕೊಂಡವರ ಸಂಖ್ಯೆ ಕೂಡ ಕಡಿಮೆ ಇಲ್ಲ. ನಗರದಾದ್ಯಂತ ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ ಪುರುಷ ಪ್ರಯಾಣಿಕರಿಗೂ ದಂಡದ ಬಿಸಿ ಜೋರಾಗಿಯೇ ತಟ್ಟಿದೆ.
119 ಪುರುಷ ಪ್ರಯಾಣಿಕರಿಗೆ ಮಹಿಳೆರ ರಿಸರ್ವ್ ಸೀಟ್ ಬಳಕೆ ಮಾಡಿದಕ್ಕಾಗಿ 11,900 ರೂಪಾಯಿಗಳನ್ನು ಮೋಟಾರು ವಾಹನ ಕಾಯ್ದೆ 1988ರ ಕಲಂ 177 ಮತ್ತು 94ರ ಪ್ರಕಾರ ದಂಡ ವಿಧಿಸಲಾಗಿದೆ.
Shocking News : ಮೈಸೂರಿನಲ್ಲಿ ಘೋರ ದುರಂತ : ಬಾವಿಗೆ ಹಾರಿ ದಂಪತಿ ಆತ್ಮಹತ್ಯೆ