ನವದೆಹಲಿ : ಉದ್ಯೋಗ ಭವಿಷ್ಯ ನಿಧಿ (EPF) ಕೊಡುಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪ್ರಮುಖ ಬದಲಾವಣೆಯನ್ನ ಮಾಡಲಿದೆ ಎಂದು ವರದಿಯಾಗಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮೆಯಲ್ಲಿ ಒಂದೇ ಕೊಡುಗೆ ನೀಡಲು ಅವಕಾಶ ಮಾಡಿಕೊಡಲಾಗುತ್ತೆ ಎಂದು ವರದಿಯಾಗಿದೆ. ಅದ್ರಂತೆ, ಸಾಮಾಜಿಕ ಭದ್ರತೆ ಪಾವತಿಗಳನ್ನ ಸರಳೀಕರಿಸಲು ಮತ್ತು ಒಂದೇ ಖಾತೆಗೆ ಹಣವನ್ನ ಜಮಾ ಮಾಡಲು ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ. ಪ್ರಸ್ತುತ, ಉದ್ಯೋಗ ಭವಿಷ್ಯ ನಿಧಿ ಸಂಸ್ಥೆ (EPFO) ಮತ್ತು ನೌಕರರ ವಿಮಾ ನಿಗಮ (ESIC) ಗೆ ಪ್ರತ್ಯೇಕವಾಗಿ ಕೊಡುಗೆ ನೀಡುತ್ತಿದೆ.

ಹತ್ತರಿಂದ ಇಪ್ಪತ್ತು ಉದ್ಯೋಗಿಗಳಿರುವ ಸಣ್ಣ ಕಂಪನಿಗಳ ಕೊಡುಗೆ ವ್ಯವಸ್ಥೆಯಲ್ಲಿ ಸರಕಾರ ಬದಲಾವಣೆ ತರಲಿದೆ. ಆದ್ರೆ, ಅದಕ್ಕೂ ಮೊದಲು ತಜ್ಞರ ಸಮಿತಿಯು ಇದನ್ನ ಮೊದಲು ಪರಿಶೀಲಿಸಿ ಅನುಮೋದಿಸುತ್ತದೆ. ವೇತನದ ಶೇ.10-12ರಷ್ಟು ಹಣವನ್ನು ವಿಮೆ, ಭವಿಷ್ಯ ನಿಧಿ, ಪಿಂಚಣಿ ಮತ್ತಿತರ ಸೌಲಭ್ಯಗಳಿಗಾಗಿ ಠೇವಣಿ ಇಡಬೇಕು ಎಂದು ವರದಿಯಾಗಿದೆ. ಈ ನೀತಿಯನ್ನ ಜಾರಿಗೆ ತರಲು ಈಗಾಗಲೇ ಉದ್ಯೋಗಿಗಳು, ಉದ್ಯೋಗದಾತರು, ಇಪಿಎಫ್ಒ ಮತ್ತು ಇಎಸ್ಐಸಿ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಅದ್ರಂತೆ, “ಮೊದಲು ನಾವು ತಜ್ಞರ ಸಮಿತಿಯನ್ನ ನೇಮಿಸುತ್ತೇವೆ. ಅವರು ಕೊಡುಗೆಯ ಏಕೀಕೃತ ದರವನ್ನ ನಿರ್ಧರಿಸುತ್ತಾರೆ. ಬಳಿಕ ಕಾರ್ಮಿಕ ಇಲಾಖೆ ಸೂಚನೆ ನೀಡಲಿದೆ” ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.

ಸಾಮಾಜಿಕ ಭದ್ರತಾ ಕಾಯ್ದೆ-2020 ರ ಪ್ರಕಾರ, ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಬದಲಾವಣೆಗಳನ್ನ ಮಾಡಲು ಮತ್ತು ಹೊಸದನ್ನ ರೂಪಿಸಲು ಸರ್ಕಾರವು ಎಲ್ಲಾ ಅಧಿಕಾರಗಳನ್ನ ಹೊಂದಿದೆ. ಪ್ರಸ್ತುತ, 10 ಅಥವಾ ಅದಕ್ಕಿಂತ ಹೆಚ್ಚು ಜನರನ್ನ ನೇಮಿಸಿಕೊಳ್ಳುವ ಸಣ್ಣ ಉದ್ಯಮಗಳು ಆರೋಗ್ಯ ವಿಮೆಗಾಗಿ ESIC ಯೋಜನೆಗೆ ಕೊಡುಗೆ ನೀಡುತ್ತವೆ. ಅದು ಕೂಡ ಪಿಂಚಣಿ ಮತ್ತು ವಿಮಾ ಉದ್ದೇಶಗಳಿಗಾಗಿ 20ಕ್ಕಿಂತ ಹೆಚ್ಚು ಜನರು EPFOನಲ್ಲಿ ಠೇವಣಿ ಇಟ್ಟರೆ.

ಪ್ರಸ್ತುತ 20 ಸದಸ್ಯರ ಮಿತಿಯನ್ನ 10 ಸದಸ್ಯರಿಗೆ ಇಳಿಸಿ ಅವರನ್ನ ಇಪಿಎಫ್ಒ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಆಶಿಸುತ್ತಿದೆ. ಇದು ಸಂಭವಿಸಿದಲ್ಲಿ, ಅನೇಕ ಉದ್ಯೋಗಿಗಳಿಗೆ ಲಾಭವಾಗುತ್ತದೆ. ಉದ್ಯೋಗದಾತನು ಉದ್ಯೋಗಿಯ ಸಂಬಳದ 3.25 ಪ್ರತಿಶತದವರೆಗೆ ಕೊಡುಗೆ ನೀಡುತ್ತಾನೆ ಮತ್ತು ಉದ್ಯೋಗಿ ESIC ನಿಧಿಗೆ 0.75 ಪ್ರತಿಶತದವರೆಗೆ ಕೊಡುಗೆ ನೀಡುತ್ತಾನೆ. ಇನ್ನು ಇಪಿಎಫ್ಒ ಉದ್ಯೋಗಿ ಸಾಮಾನ್ಯ ವೇತನದ ಶೇಕಡಾ 12ರಷ್ಟು ಕೊಡುಗೆ ನೀಡುತ್ತಾನೆ.

 

BIGG NEWS : ‘ಹುಲಿ’ ಸಮೀಪ ತೆರಳಿ ನಟಿಮಣಿ ಫೋಟೋ ಕ್ಲಿಕ್ ; ವಾಹನ ಚಾಲಕ, ಅಧಿಕಾರಿಗಳಿಗೆ ನೋಟಿಸ್, ತನಿಖೆ ಆರಂಭ

‘ಉಬರ್’ ಹೊಸ ಸುರಕ್ಷತಾ ವೈಶಿಷ್ಟ್ಯ ; ಈಗ ಚಾಲಕರು ‘ಅನಿರೀಕ್ಷಿತ ಮಾರ್ಗ’ ತೆಗೆದುಕೊಂಡ್ರೆ ಪ್ರಯಾಣಿಕರಿಗೆ ನೋಟಿಫಿಕೇಶ್.!

Hair Care: ಚಳಿಗಾಲದಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗಿದ್ಯಾ? ಹಾಗಾದ್ರೆ ಈ ಮೂರು ಎಣ್ಣೆಗಳಿಂದ ಮಸಾಜ್ ಮಾಡಿ

Share.
Exit mobile version