ನರ್ಮದಾಪುರಂ (ಮಧ್ಯಪ್ರದೇಶ): ಬಾಲಿವುಡ್ ನಟಿ ರವೀನಾ ಟಂಡನ್ ಪ್ರಯಾಣಿಸುತ್ತಿದ್ದ ವಾಹನವೊಂದು ಸಫಾರಿ ವೇಳೆ ಹುಲಿಯ ಸಮೀಪವಿರುವ ವೀಡಿಯೊವನ್ನ ತೋರಿಸಿದ ನಂತ್ರ ಸತ್ಪುರಾ ಹುಲಿ ಮೀಸಲು ಪ್ರದೇಶದ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಕಾಣಿಸಿಕೊಂಡ ಈ ವೀಡಿಯೊದಲ್ಲಿ ಸಫಾರಿ ವಾಹನವು ಹುಲಿಯ ಸಮೀಪಕ್ಕೆ ತಲುಪುವುದನ್ನ ತೋರಿಸಲಾಗಿದೆ. ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿರುವ ಮೀಸಲು ಪ್ರದೇಶದಲ್ಲಿ ಕ್ಯಾಮೆರಾ ಶಟರ್’ಗಳು ಸದ್ದು ಮಾಡುತ್ತಿರುವುದು ಮತ್ತು ಹುಲಿಯೊಂದು ಅವರತ್ತ ಗರ್ಜಿಸುವುದು ಕಂಡುಬಂದಿದೆ.

ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ, ಘಟನೆಯ ಬಗ್ಗೆ ತನಿಖೆಯನ್ನ ಪ್ರಾರಂಭಿಸಿದ್ದೇವೆ ಎಂದು ಅರಣ್ಯದ ಉಪ ವಿಭಾಗೀಯ ಅಧಿಕಾರಿ (ಎಸ್ಡಿಒ) ಧೀರಜ್ ಸಿಂಗ್ ಚೌಹಾಣ್ ಮಂಗಳವಾರ ಹೇಳಿದ್ದಾರೆ.

ನವೆಂಬರ್ 22 ರಂದು ಟಂಡನ್ ಅವರು ಮೀಸಲು ಪ್ರದೇಶಕ್ಕೆ ಭೇಟಿ ನೀಡಿದಾಗ, ಅವ್ರ ವಾಹನ ಹುಲಿಯ ಬಳಿ ತಲುಪಿದ್ದು, ವಾಹನ ಚಾಲಕ ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಇನ್ನು ಮುಂದಿನ ಕ್ರಮಕ್ಕಾಗಿ ತನಿಖಾ ವರದಿಯನ್ನ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಅಂದ್ಹಾಗೆ, ಟಂಡನ್ ಸತ್ಪುರಾ ಹುಲಿ ಮೀಸಲು ಪ್ರದೇಶಕ್ಕೆ ಭೇಟಿ ನೀಡಿದ ಚಿತ್ರಗಳನ್ನ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಹಂಚಿಕೊಂಡಿದ್ದರು.

 

ಕೊರೊನಾದ ಮುಂದಿನ ರೂಪಾಂತರ ‘ಓಮಿಕ್ರಾನ್’ಗಿಂತ ಹೆಚ್ಚು ಮಾರಕ ; ‘ಹೊಸ ಅಧ್ಯಯನ’ದಿಂದ ಶಾಕಿಂಗ್ ಸಂಗತಿ

BREAKING NEWS: ‘ರಾಜ್ಯ ಸರ್ಕಾರ’ದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 30 ಪಿಐ, ಇಬ್ಬರು ನಾನ್ IPS ಅಧಿಕಾರಿಗಳ ವರ್ಗಾವಣೆ

BREAKING NEWS : ‘BCCI’ನಿಂದ ಅಧ್ಯಕ್ಷ ‘ರೋಜರ್ ಬಿನ್ನಿ’ಗೆ ಹಿತಾಸಕ್ತಿ ಸಂಘರ್ಷ ನೋಟಿಸ್ ಜಾರಿ |Conflict of interest notice

Share.
Exit mobile version