ಅಮೃತಸರ: ಪಂಜಾಬಿನ ಖ್ಯಾತ ಗಾಯಕ ಸಿಧು ಮೂಸ ವಾಲಾ ಹತ್ಯೆಗೈದಿದ್ದಂತ ಆರೋಪಿಗಳ ಭೇಟಿಯನ್ನು ಪೊಲೀಸರು ಮುಂದುವರೆಸಿದ್ದಾರೆ. ಇಂದು ಗ್ಯಾಂಗ್ ಸ್ಟರ್ ಗಳ ಮೇಲೆ ಸಮರ ಸಾರಿರುವಂತ ಪೊಲೀಸರು ಅಮೃತಸರದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ.
ಪಂಜಾಬ್ ನ ಅಮೃತಸರದಲ್ಲಿ ಇಂದು ಗಾಯಕ ಸಿಧು ಮೂಸಲಾವಾ ಹತ್ಯೆಯ ಗ್ಯಾಂಗ್ ಸ್ಟರ್ ಗಳ ಮೇಲೆ ಪೊಲೀಸರು ಎನ್ ಕೌಂಟರ್ ನಡೆಸಿದ್ದಾರೆ. ಅಮೃತ ಸರದ ಅಟಾರಿ ಬಳಿಯಲ್ಲಿ ಗುಂಡಿನ ದಾಳಿಯನ್ನು ಗ್ಯಾಂಗ್ ಸ್ಟರ್ ಗಳ ಮೇಲೆ ನಡೆಸಿದ್ದಾರೆ.
ರಜೆಗೆಂದು ಊರಿಗೆ ಬಂದಿದ್ದ ಬಿಎಸ್ಎಫ್ ಸಿಬ್ಬಂದಿ: ತಂಗಿಯ ನೋಡಲು ಹೋಗುತ್ತಿದ್ದಾಗ ರೈಲಿಗೆ ಡಿಕ್ಕಿಯೊಡೆದು ಸಾವು
ಪೊಲೀಸರು ಹಾಗೂ ಗ್ಯಾಂಗ್ ಸ್ಟರ್ ಗಳ ನಡುವೆ ಅಮೃತ ಸರದ ಅಟಾರಿ ಬಳಿಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿರೋದಾಗಿ ತಿಳಿದು ಬಂದಿದೆ. ಗ್ಯಾಂಗ್ ಸ್ಟರ್ ಗಳಾದಂತ ಅನುರೂಪ್, ಮನ್ ಪ್ರೀತ್ ಗಳನ್ನು ಪೊಲೀಸರು ಸುತ್ತುವರೆದಿದ್ದಾರೆ. ಅಲ್ಲದೇ ಶರಣಾಗುವಂತೆ ಮನವಿ ಮಾಡಿದ್ದಾರೆ.
ಅಂದಹಾಗೇ ಪಂಜಾಬಿ ಗಾಯಕ ಸಿಧು ಮೂಸ ವಾಲಾ ಅವರ ಹತ್ಯೆ ಮೇ.29, 2022ರಂದು ನಡೆದಿತ್ತು. ಈ ಸಂಬಂಧ ಈಗಾಗಲೇ ಹಲವು ಗ್ಯಾಂಗ್ ಸ್ಟರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಕೂಡ ಬಂಧನಕ್ಕೆ ತೆರಳಿದ್ದ ವೇಳೆಯಲ್ಲಿ ಪೊಲೀಸರು ಹಾಗೂ ಗ್ಯಾಂಗ್ ಸ್ಟರ್ ನಡುವೆ ಗುಂಡಿನ ದಾಳಿ ನಡೆದಿದೆ.
BREAKING NEWS: ಮೇಕೆದಾಟು ಅಣೆಕಟ್ಟು ಯೋಜನೆ; ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ಜು. 26 ಮುಂದೂಡಿಕೆ