ಬೆಂಗಳೂರು: ಮುಂಬರುವ ಚುನಾವಣೆಗಾಗಿ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಮತದಾರರನ್ನು ಸೆಳೆಯಲು ಬಸ್ ಯಾತ್ರೆಯನ್ನು ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ಕೈಗೊಳ್ಳಲು ಯೋಜನೆ ರೂಪಿಸಿದ್ದರು. ಆದ್ರೇ ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಹೀಗಾಗಿ ನಾಳೆ ಇಬ್ಬರು ನಾಯಕರು ಒಟ್ಟಾಗಿ ಒಗ್ಗಟ್ಟು ಪ್ರದರ್ಶನಕ್ಕಾಗಿ ಹುಬ್ಬಳ್ಳಿಗೆ ಒಟ್ಟಾಗಿಯೇ ಪ್ರಯಾಣ ಬೆಳೆಸುತ್ತಿದ್ದಾರೆ.
BIGG NEWS: ಭಾರತ- ಚೀನಾ ಸಂಘರ್ಷಕ್ಕೆ ನೆಹರೂ ಅವರೇ ಕಾರಣ;ಸಿ.ಟಿ ರವಿ ಆರೋಪ
ಇಂದು ನಾಳಿನ ಹುಬ್ಬಳ್ಳಿಯ ಬಸ್ ಯಾತ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ಕರೆ ಮಾಡಿ ಒಟ್ಟಿಗೆ ಹೋಗೋಣ ಎಂಬುದಾಗಿ ಹೇಳಿದರು. ತನ್ನ ಆಪ್ತರ ಜೊತೆಗೆ ಸಭೆ ನಡೆಸುತ್ತಿದ್ದಾಗಲೇ ಬಂದಂತ ಡಿಕೆ ಶಿವಕುಮಾರ್ ಕರೆಗೆ ಉತ್ತರಿಸಿದಂತ ಸಿದ್ಧರಾಮಯ್ಯ, ಆಯ್ತು ಒಟ್ಟಿಗೆ ಹೋಗೋಣ ಎಂದು ತಿಳಿಸಿದ್ದಾರೆ.
ಇನ್ನೂ ನಾಳೆ ಹೆಲಿಕ್ಯಾಪ್ಟರ್ ರೆಡಿಯಾಗಿದೆ. ಅದರಲ್ಲಿಯೇ ಹುಬ್ಬಳ್ಳಿಗೆ ಒಟ್ಟಿಗೆ ಹೋಗೋಣ ಎಂಬುದಾಗಿ ಸಿದ್ಧರಾಮಯ್ಯಗೆ ಡಿಕೆ ಶಿವಕುಮಾರ್ ತಿಳಿಸಿದರು ಎನ್ನಲಾಗಿದೆ. ಇದಕ್ಕೆ ಪೋನ್ ನಲ್ಲಿಯೇ ಸಿದ್ಧರಾಮಯ್ಯ ಡಿಕೆಶಿಗೆ ಓಕೆ ಎಂದಿದ್ದಾರೆ ಎನ್ನಲಾಗಿದೆ.
ಬಸ್ ಯಾತ್ರೆ ಪ್ರತ್ಯೇಕವಾಗಿ ಡಿಕೆ ಶಿವಕುಮಾರ್, ಸಿದ್ಧರಾಮಯ್ಯ ನಡೆಸೋದಕ್ಕೆ ಹೊರಟಿದ್ದರು. ಆದ್ರೇ ಇದರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬರಲಿದೆ ಎಂಬುದಾಗಿ ನಿನ್ನೆ ದೆಹಲಿಯಲ್ಲಿ ನಡೆದಿದ್ದಂತ ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲಿ ಬೇಡ ಎಂಬುದಾಗಿ ಖಡಕ್ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಡಿಕೆಶಿ-ಸಿದ್ಧರಾಮಯ್ಯ ಒಗ್ಗಟ್ಟು ಪ್ರದರ್ಶನಕ್ಕೆ ನಾಳೆ ಹೆಲಿಕ್ಯಾಪ್ಟರ್ ಮೂಲಕ ಒಟ್ಟಿಗೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಒಟ್ಟಿಗೆ ಬಸ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ.