ವಿಜಯಪುರ: ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಅಗಲಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ದೊಡ್ಡಸರಳ ಸಂತವಾಗಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶ್ರೀಗಳು ತುಂಬಾ ಮಾನವೀಯತೆಯಿಂದ ಇದ್ದರು. ಶ್ರೀಗಳನ್ನು ನೋಡಿದವರಿಗೆ ಮಾತ್ರ ಅರಿವಾಗುತ್ತದೆ. ಬಸವಣ್ಣನವರ ತತ್ವವನ್ನು ಪ್ರೀತಿ, ವಿಶ್ವಾಸದಿಂದ ಹಂಚಿದ್ರು. ಶ್ರೀಗಳ ಅಗಲಿಕೆಯಿಂದ ನಾಡಿನ ಜನರಿಗೆ ನಷ್ಟ ಆಗಿದೆ. ಲಕ್ಷಾಂತರ ಭಕ್ತರು, ಅನುಯಾಯಿಗಳಿಗೆ ನೋವಾಗಿದೆ ಎಂದು ಸಿದ್ದರಾಮಯ್ಯ ಭಾವುಕಾಗಿದ್ದಾರೆ.
ಸದ್ಯ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಈ ವೇಳೆ ಭಕ್ತರು ಶ್ರೀಗಳ ದರ್ಶನ ಪಡೆದು ಇಡೀ ಕರುನಾಡೇ ಕಂಬನಿ ಮಿಡಿದಿದೆ.ಶ್ರೀಗಳ ಅಂತಿಮ ದರ್ಶನಕ್ಕೆ ಸಾವಿರಾರು ಭಕ್ತರ ಆಗಮಿಸಿದ್ದಾರೆ. ಪ್ರತಿ ಮೂಲೆ ಮೂಲೆ, ಹಳ್ಳಿಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ಇನ್ನು ಅಪಾರ ಸಂಖ್ಯೆ ಜನರು ಬರುವ ಸಾಧ್ಯತೆ ಇದೆ. ಇನ್ನು ಇಂದು ಸಂಜೆ 5 ಗಂಟೆಗೆ ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಲಿದೆ.
BIGG NEWS: ಶ್ರೀಗಳ ಅಂತಿಮ ದರ್ಶನಕ್ಕೆ ಸಾವಿರಾರು ಭಕ್ತರ ಆಗಮನ; ಕಂಬನಿ ಮಿಡಿಯುತ್ತಿರುವ ಕರುನಾಡು