ವಿಜಯಪುರ : ನಡೆದಾಡುವ ದೇವರು , ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಸಾಲು ಸಾಲಾಗಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲು ಸಿದ್ದತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಆಶ್ರಮದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಹೆಚ್ಚಿನ ಸಂಖ್ಯೆುಯಲ್ಲಿ ಆಶ್ರಮದ ಆವರಣದಲ್ಲಿ ನೆರೆದಿದ್ದ ಭಕ್ತರನ್ನು ಹೊರಕ್ಕೆ ಕಳುಹಿಸಲಾಗಿದ್ದು. ಇದೀಗ ಸಾಲು ಸಾಲಾಗಿ ಶ್ರೀಗಳ ದರ್ಶನಕ್ಕೆ ಭಕ್ರರಿಗೆ ಅವಕಾಶ ನೀಡಲು ಸಿದ್ದತೆ ನಡೆಸಲಾಗುತ್ತಿದೆ. ಆಶ್ರಮದ ಮುಂದೆ ಭಕ್ತರು ಕಣ್ಣೀರು ಹಾಕುತ್ತಿದ್ದು, ಶ್ರೀಗಳು ಗುಣಮುಖರಾಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.
ಆಶ್ರಮದ ಸುತ್ತಾಮುತ್ತಾ ಪೊಲೀಸರು ಲೈಟ್ ಅಳವಡಿಕೆ ಮಾಡಿದ್ದು, ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಎಲ್ಲಾ ಕಡೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. . ಆಶ್ರಮಕ್ಕೆ ವಿಐಪಿ, ಮಠಾಧೀಶರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಆಶ್ರಮದ ಮೊದಲ ಮಹಡಿಯಲ್ಲಿ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದಾರೆ.
ಇನ್ನೂ, ಆವರಣದಲ್ಲಿ ವೇದಿಕೆಯೊಂದನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕಬ್ಬಿಣದ ರಾಡ್ ಬಳಸಿ ವೇದಿಕೆ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಸ್ವಾಮೀಜಿ ವಿಶ್ರಾಂತಿ ಕೊಠಡಿಯ ಕೆಳಗೆ ವೇದಿಕೆ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ.ಸಿದ್ದೇಶ್ವರ ಶ್ರೀಗಳ ನಾಡಿಮಿಡಿತದಲ್ಲಿ ಸ್ವಲ್ಪ ಏರುಪೇರು ಆಗಿದೆ. ಉಸಿರಾಟದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತಿದೆ. ಹೀಗಾಗಿ ಆಕ್ಸಿಜನ್ ಕೊಡಲಾಗುತ್ತಿದೆ. ಸಿದ್ದೇಶ್ವರ ಸ್ವಾಮೀಜಿಯವರ ಪಲ್ಸ್, ಬಿಪಿ, ಸ್ವಲ್ಪ ಕಡಿಮೆಯಾಗಿದೆ. ಅವರು ಬೆಳಗ್ಗೆಯಿಂದಲೂ ಆಹಾರವನ್ನು ಸೇವಿಸಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸಿದ್ದೇಶ್ವರ ಶ್ರೀಗಳು ಬೇಗನೇ ಗುಣಮುಖರಾಗಲಿ ಎಂದು ಭಕ್ತರು ಹಲವು ಕಡೆ ಪೂಜೆ, ವಿವಿಧ ಹರಕೆ ಸಲ್ಲಿಸುತ್ತಿದ್ದಾರೆ.
‘ಪಕ್ಕದ್ಮನೆಯಲ್ಲಿ ಗಂಡು ಹುಟ್ಟಿದಾಗ ಪೇಡೆ ಹಂಚಿದ್ರೆ ಉಪಯೋಗ ಇಲ್ಲ’ : ಕಾಂಗ್ರೆಸ್ ಗೆ ಪ್ರಲ್ಹಾದ್ ಜೋಶಿ ಟಾಂಗ್