ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಅವರಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಪಶ್ಚಾತಾಪವಾಗಿದೆ. ಲಿಂಗಾಯತ ಧರ್ಮದ ವಿಚಾರದಲ್ಲಿ ಅನೇಕರು ನನ್ನ ದಾರಿ ತಪ್ಪಿಸಿದ್ದಾರೆ. ಆ ಬಗ್ಗೆ ನನಗೆ ಪಶ್ಚತ್ಥಾಪ ಇರೋದಾಗಿ ಸಿದ್ಧರಾಮಯ್ಯ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಬಾಳೆಹೊನ್ನೂರು ಶ್ರೀಗಳು ಹೇಳಿದ್ದಾರೆ.
ಇಂದು ಸಿದ್ಧರಾಮಯ್ಯ ಅವರು ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಮಠಕ್ಕೆ ಭೇಟಿ ನೀಡಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ರಂಭಾಪುರಿ ಶ್ರೀಗಳು, ನಾನು ಈ ಹಿಂದೆ ಸಿದ್ಧರಾಮಯ್ಯ ಅವರಿಗೆ ಆಹ್ವಾನ ನೀಡಿದ್ದೆ. ಆ ಆಹ್ವಾನದ ಮೇರೆಗೆ ಇಂದು ಕೊಟ್ಟ ಮಾತಿನಂತೆ ಸಿದ್ಧರಾಮಯ್ಯ ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದಾರೆ ಎಂದರು.
‘ಬೆಸ್ಕಾಂ ಗ್ರಾಹಕ’ರಿಗೆ ಬಹುಮುಖ್ಯ ಮಾಹಿತಿ: ನಾಳೆ 8 ಜಿಲ್ಲೆಗಳ ‘ಗ್ರಾಮೀಣ ಪ್ರದೇಶ’ಗಳಲ್ಲಿ ‘ವಿದ್ಯುತ್ ಅದಾಲತ್’
ಇದೇ ವೇಳೆಯಲ್ಲಿ ವೀರಶೈವ ಲಿಂಗಾಯತ ಧರ್ಮದ ವಿಚಾರವಾಗಿಯೂ ಅವರು ಮಾತನಾಡಿದರು. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಸಿದ್ಧರಾಮಯ್ಯನವರಿಗೆ ಪಶ್ಚಾತಾಪವಾಗಿರೋದನ್ನು ಹೇಳಿಕೊಂಡಿದ್ದಾರೆ. ಅವರನ್ನು ದಾರಿತಪ್ಪಿಸಿದ ಬಗ್ಗೆಯೂ ಮಾತನಾಡಿರೋದಾಗಿ ತಿಳಿಸಿದರು.
Janmashtami Special : ಕೃಷ್ಣ ಭಕ್ತರೇ, ವಿಶ್ವದ ಅತಿ ದೊಡ್ಡ ‘ಶ್ರೀಕೃಷ್ಣ ದೇವಾಲಯ’ ಎಲ್ಲಿದೆ.? ಹೇಗಿದೆ ಗೊತ್ತಾ.?