ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದೆ. ಡಿಸೆಂಬರ್ 24ರ ಒಳಗಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದೆ. ಇದರ ಬೆನ್ನಲ್ಲೇ ದೂರುದಾರ ಸ್ನೇಹಮಯಿ ಕೃಷ್ಣ ಎಫ್ಐಆರ್ ದಾಖಲಿಸಲು ಲೋಕಾಯುಕ್ತ ಎಸ್ ಪಿ ಕಾಣಿಸುತ್ತಿಲ್ಲ ಬಹುಶಹ ಸಿಎಂ ಸಿದ್ದರಾಮಯ್ಯ ಅವರೇ ಕಿಡ್ನ್ಯಾಪ್ ಮಾಡಿಸಿರಬಹುದು ಎಂದು ಆರೋಪಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಎಸ್.ಪಿ ವಿರುದ್ಧವೇ ದೂರು ಕೊಡುತ್ತೇನೆ. ಸಿಎಂ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಎಸ್ಪಿ ನಾಪತ್ತೆಯಾಗಿದ್ದಾರೆ. ಫೋನ್ ತೆಗಿತಿಲ್ಲ ಎಸ್ ಪಿ ಕಾಣೆಯಾಗಿದ್ದಾರೆ ಎಂದು ದೂರು ಕೊಡುತ್ತೇನೆ. ಸಿದ್ದರಾಮಯ್ಯ ಕಿಡ್ನಾಪ್ ಮಾಡಿಸಿದ್ದರು ಮಾಡಿರಬಹುದು ಮೈಸೂರಿನಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಮಧ್ಯಾಹ್ನ 3 ಗಂಟೆ ಒಳಗೆ FIR ಹಾಕದಿದ್ದರೆ ಎಸ್ ಪಿ ವಿರುದ್ಧವೇ ದೂರು ನೀಡುತ್ತೇನೆ. ಲೋಕಾಯುಕ್ತ ಎಸ್ ಪಿ ಕಾಣೆಯಾಗಿದ್ದಾರೆ ಅಂತ ಅನಿಸುತ್ತಿದೆ. ಮಧ್ಯಾಹ್ನ 3 ಗಂಟೆ ವರೆಗೆ ಲೋಕಾಯುಕ್ತ ಕಚೇರಿಯಲ್ಲಿ ಇರುತ್ತೇನೆ. ಒಂದು ವೇಳೆ ಬರೆದಿದ್ದರೆ ಎಸ್ ಪಿ ಹುಡುಕಿ ಕೊಡಿ ಎಂದು ದೂರು ಕೊಡಬೇಕಾಗುತ್ತದೆ ಎಂದು ಮೈಸೂರಿನಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.