ಬೆಂಗಳೂರು: ಮುಂದಿನ ಚುನಾವಣೆಗೆ ( Karnataka Assembly Election 2023 ) ಕ್ಷೇತ್ರ ಹುಡುಕಲು ಇಷ್ಟೊಂದು ಕಸರತ್ತು ನಡೆಸುತ್ತಿರುವ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಅವರ ಪರಿಸ್ಥಿತಿ ನೋಡಿದರೆ, ಯಾವ ಕ್ಷೇತ್ರದಲ್ಲಿ ನಿಂತರೂ ಡಿಕೆಶಿ ( DKS ) ಸೋಲಿಸುತ್ತಾರೆ ಎಂಬ ಭಯ ಕಾಡುತ್ತಿರುವ ಹಾಗಿದೆ ಎಂದು ಬಿಜೆಪಿ ಕರ್ನಾಟಕ ( BJP Karnataka ), ವಲಸೆ ರಾಮಯ್ಯ ಎಂಬುದಾಗಿ ವ್ಯಂಗ್ಯ ಮಾಡಿದೆ.
ಮುಂದಿನ ಚುನಾವಣೆಗೆ ಕ್ಷೇತ್ರ ಹುಡುಕಲು ಇಷ್ಟೊಂದು ಕಸರತ್ತು ನಡೆಸುತ್ತಿರುವ ಪ್ರತಿಪಕ್ಷ ನಾಯಕ @siddaramaiah ಅವರ ಪರಿಸ್ಥಿತಿ ನೋಡಿದರೆ, ಯಾವ ಕ್ಷೇತ್ರದಲ್ಲಿ ನಿಂತರೂ ಡಿಕೆಶಿ ಸೋಲಿಸುತ್ತಾರೆ ಎಂಬ ಭಯ ಕಾಡುತ್ತಿರುವ ಹಾಗಿದೆ.#ವಲಸೆರಾಮಯ್ಯ
— BJP Karnataka (@BJP4Karnataka) November 13, 2022
ಈ ಕುರಿತಂತೆ ಸರಣಿ ಟ್ವಿಟ್ ( Twitter ) ಮಾಡಿದ್ದು, ಕಳೆದ ಚುನಾವಣೆಯಲ್ಲಿ ಗೆಲ್ಲಿಸಿ ಮಾನ ಕಾಪಾಡಿದ ಬಾದಾಮಿ ಕ್ಷೇತ್ರದ ಜನತೆಗೆ ಕೈ ಕೊಡುವುದು ಜನನಾಯಕನ ಲಕ್ಷಣವೇ? ರಾಜಕೀಯ ಸಂದಿಗ್ಧ ಕಾಲದಲ್ಲಿ ಮಾನ ಕಾಪಾಡಿದ ಜನತೆಗಿಂತ ಮುಂದಿನ ಚುನಾವಣೆ ಗೆಲ್ಲುವುದೇ ಸಿದ್ಧರಾಮಯ್ಯ ಅವರಿಗೆ ಮುಖ್ಯವಾಯಿತೇ? ಎಂದು ಪ್ರಶ್ನಿಸಿದೆ.
ಕಳೆದ ಚುನಾವಣೆಯಲ್ಲಿ ಗೆಲ್ಲಿಸಿ ಮಾನ ಕಾಪಾಡಿದ ಬಾದಾಮಿ ಕ್ಷೇತ್ರದ ಜನತೆಗೆ ಕೈ ಕೊಡುವುದು ಜನನಾಯಕನ ಲಕ್ಷಣವೇ?
ರಾಜಕೀಯ ಸಂದಿಗ್ಧ ಕಾಲದಲ್ಲಿ ಮಾನ ಕಾಪಾಡಿದ ಜನತೆಗಿಂತ ಮುಂದಿನ ಚುನಾವಣೆ ಗೆಲ್ಲುವುದೇ @siddaramaiah ಅವರಿಗೆ ಮುಖ್ಯವಾಯಿತೇ?#ವಲಸೆರಾಮಯ್ಯ
— BJP Karnataka (@BJP4Karnataka) November 13, 2022
ಸಿದ್ದರಾಮಯ್ಯ ಅವರೇ, ನೀವು ನಿಜವಾದ ಜನಪರ ನಾಯಕರಾದರೆ ಬಾದಾಮಿಯಿಂದಲೇ ಸ್ಪರ್ಧಿಸಿ ಆ ಜನರ ಋಣ ತೀರಿಸಿ. ಬಾದಾಮಿ ಮತದಾರರ ಮೇಲೆ ಅನುಮಾನ ಪಟ್ಟು ಅವರಿಗೆ ಅವಮಾನ ಮಾಡುತ್ತಿರುವುದು ಎಷ್ಟು ಸರಿ? ಎಂದು ಕೇಳಿದೆ.
ಸಿದ್ದರಾಮಯ್ಯ ಅವರೇ, ನೀವು ನಿಜವಾದ ಜನಪರ ನಾಯಕರಾದರೆ ಬಾದಾಮಿಯಿಂದಲೇ ಸ್ಪರ್ಧಿಸಿ ಆ ಜನರ ಋಣ ತೀರಿಸಿ.
ಬಾದಾಮಿ ಮತದಾರರ ಮೇಲೆ ಅನುಮಾನ ಪಟ್ಟು ಅವರಿಗೆ ಅವಮಾನ ಮಾಡುತ್ತಿರುವುದು ಎಷ್ಟು ಸರಿ?#ವಲಸೆರಾಮಯ್ಯ
— BJP Karnataka (@BJP4Karnataka) November 13, 2022