ಬೆಂಗಳೂರು : ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿಯ ಜೊತೆಗೆ ಮನೆಯ ಸದಸ್ಯರು ಎಷ್ಟಿದ್ದಾರೋ ಅಷ್ಟು ದುಡ್ಡನ್ನು ಪಡಿತರ ಅಕೌಂಟಿಗೆ ಹಾಕುತ್ತಿತ್ತು. ಇದೀಗ ಕಳೆದ ಮೂರು ತಿಂಗಳಿನಿಂದ ದುಡ್ಡು ಅಕೌಂಟಿಗೆ ಬಂದಿಲ್ಲ.ಈ ಕುರಿತಂತೆ ಬಿಜೆಪಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿದೆ.
ಹಾಗಾಗಿ ರಾಜ್ಯ ಬಿಜೆಪಿಯು ಟ್ವೀಟ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದೆ.ರಾಜ್ಯದ ಜನತೆಗೆ 10 ಕೆಜಿ ಅಕ್ಕಿ ಬೇಕೋ ಬೇಡ್ವೋ ಎಂದು ಕಿವಿಯ ಮೇಲೆ ಹೂವಿಟ್ಟಿದ್ದ ಸಿಎಂ ಸಿದ್ದರಾಮಯ್ಯ ಅವರು, ಈಗ ಜನತೆಯ ತಲೆ ಮೇಲೆ ಹೂವಿನ ಕುಂಡವನ್ನೇ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ಸೋಲು ಖಚಿತ-ನಿಶ್ಚಿತ-ಖಂಡಿತವೆಂದ ತಕ್ಷಣ ಗ್ಯಾರಂಟಿಗಳಿಗೆ ಲಭಿಸಿದೆ ಸಂಚಕಾರ.10 ಕೆಜಿ ಅಕ್ಕಿಯೂ ಇಲ್ಲ, ಅಕ್ಕಿಯ ಬದಲು ದುಡ್ಡು ಇಲ್ಲ, ಇದೊಂದು ರೀತಿ ಉಂಡು ಹೋದ ಕೊಂಡು ಹೋದದ ಅಪರಾವತಾರ.ಸಿಎಂ ಸಿದ್ದರಾಮಯ್ಯ ಅವರೇ, 3 ತಿಂಗಳಿನಿಂದ ಅಕ್ಕಿ ದುಡ್ಡು ಬಂದಿಲ್ಲ, ದುಡ್ಡು ಕೊಡ್ತಿರೋ ಇಲ್ವೋ ಅನ್ನೊದನ್ನ ಹೇಳ್ಬಿಡಿ.
ಸೋಲು ಖಚಿತ-ನಿಶ್ಚಿತ-ಖಂಡಿತವೆಂದ ತಕ್ಷಣ ಗ್ಯಾರಂಟಿಗಳಿಗೆ ಲಭಿಸಿದೆ ಸಂಚಕಾರ.
ರಾಜ್ಯದ ಜನತೆಗೆ 10 ಕೆಜಿ ಅಕ್ಕಿ ಬೇಕೋ ಬೇಡ್ವೋ ಎಂದು ಕಿವಿಯ ಮೇಲೆ ಹೂವಿಟ್ಟಿದ್ದ ಸಿಎಂ @siddaramaiah ಅವರು, ಈಗ ಜನತೆಯ ತಲೆ ಮೇಲೆ ಹೂವಿನ ಕುಂಡವನ್ನೇ ಇಟ್ಟಿದ್ದಾರೆ.
10 ಕೆಜಿ ಅಕ್ಕಿಯೂ ಇಲ್ಲ, ಅಕ್ಕಿಯ ಬದಲು ದುಡ್ಡು ಇಲ್ಲ, ಇದೊಂದು ರೀತಿ ಉಂಡು ಹೋದ ಕೊಂಡು… pic.twitter.com/XZuAbhmAy3
— BJP Karnataka (@BJP4Karnataka) May 26, 2024