ನವದೆಹಲಿ: : ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಆರೋಪಿ ಅಫ್ತಾಬ್ ತನ್ನ ಲಿವ್-ಇನ್ ಸಂಗಾತಿಯ ಮುಖವನ್ನು ಸುಟ್ಟುಹಾಕಿದ್ದಾನೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಮೊದಲು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ನಂತರ ಗುರುತಿಸಲಾಗದ ರೀತಿಯಲ್ಲಿ ಅವಳ ಮುಖವನ್ನು ಸುಟ್ಟಿದ್ದ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
“ವಿಚಾರಣೆಯ ಸಮಯದಲ್ಲಿ, ಅಫ್ತಾಬ್ ಈ ಎಲ್ಲದರ ಬಗ್ಗೆ ಅಂತರ್ಜಾಲದಲ್ಲಿ ತಿಳಿದುಕೊಂಡಿದ್ದೇನೆ ಮತ್ತು ಶವವನ್ನು ಯಾರ ಕೈಗೆಟುಕದಂತೆ ಹೇಗೆ ಮರೆಮಾಡುವುದು ಎಂಬುದರ ಬಗ್ಗೆಯೂ ತಿಳಿದುಕೊಂಡಿದ್ದೇನೆ ಎಂದು ಬಹಿರಂಗಪಡಿಸಿದ್ದಾನೆ” ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಪೂರ್ವ ದೆಹಲಿ ಪೊಲೀಸರು ಈ ವರ್ಷದ ಜೂನ್ನಲ್ಲಿ ರಾಷ್ಟ್ರ ರಾಜಧಾನಿಯ ಪಾಂಡವ್ ನಗರ ಪೊಲೀಸ್ ಠಾಣೆ ಪ್ರದೇಶದ ತ್ರಿಲೋಕ್ಪುರಿ ಪ್ರದೇಶದಲ್ಲಿ ಕತ್ತರಿಸಿದ ತಲೆ ಮತ್ತು ಕೈಯನ್ನು ಪತ್ತೆಹಚ್ಚಿದ್ದರು, ಇದು ಶ್ರದ್ಧಾ ಕೊಲೆಯಾದ ಸುಮಾರು ಒಂದು ತಿಂಗಳ ನಂತರ (ಮೇ 18 ರಂದು) ಆಗಿತ್ತು ಎನ್ನಲಾಗಿದೆ.