ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಿದೆ. ವಾತಾವರಣ ಬದಲಾಗಿದ್ದು, ಹಲವು ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ. ಇದರಲ್ಲಿ ಈಗ ಜನರು ಡೆಂಗ್ಯೂ ಜ್ವರದಿಂದಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಡೆಂಗ್ಯೂ ವೈರಸ್ ಸೊಳ್ಳೆಗಳ ಮೂಲಕ ಜನರಿಗೆ ತಗುಲುತ್ತದೆ. ಸೊಳ್ಳೆಗಳು ಕಚ್ಚಿದಾಗ ಡೆಂಗ್ಯೂ ಜ್ವರ ಬಾಧಿಸುತ್ತದೆ. ಮತ್ತು ಅನಾರೋಗ್ಯಕ್ಕೆ ಕಾರಣ ಆಗುತ್ತದೆ. ಎಲ್ಲರಿಗೂ ಗೊತ್ತಿರುವಂತೆ ಡೆಂಗ್ಯೂ ಜ್ವರವು ಪ್ಲೇಟ್ಲೆಟ್ ಗಳ ಸಂಖ್ಯೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ ಜನರು ತಮ್ಮ ಆಹಾರ ಪದ್ಧತಿಯ ಬಗ್ಗೆ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗಿದೆ.
ಅಮ್ಮಂದಿರೇ ಗಮನಿಸಿ : ಮೈ ನಡುಗುವ ಚಳಿಗೆ ‘ಮಕ್ಕಳ ಆರೈಕೆ’ಗಾಗಿ, ಈ ವಿಧಾನಗಳನ್ನು ಅನುಸರಿಸಿ | Child Care in Winter
ಡೆಂಗ್ಯೂ ಜ್ವರ ಬಂದು ಗುಣವಾದ ವ್ಯಕ್ತಿ ಸೇವಿಸಬೇಕಾದ ಆಹಾರಗಳು ಹಲವು. ಈ ಆಹಾರಗಳು ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ.
ಇತ್ತೀಚಿನ ದಶಕಗಳಲ್ಲಿ ಡೆಂಗ್ಯೂ ಜ್ವರ ಒಂದು ಪ್ರಮುಖ ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿ ಮಾರ್ಪಟ್ಟಿದೆ. ಇದು ಬಿಸಿ ಪ್ರದೇಶಗಳಲ್ಲಿ ಹೆಚ್ಚು ಹರಡುತ್ತದೆ. ಪಬ್ಮೆಡ್ ಸೆಂಟ್ರಲ್ ವರದಿ ಪ್ರಕಾರ ಪ್ರತಿ ವರ್ಷ ಅಂದಾಜು 50 ರಿಂದ 100 ಮಿಲಿಯನ್ ಡೆಂಗ್ಯೂ ಜ್ವರ ಪ್ರಕರಣಗಳು ಉಂಟಾಗುತ್ತವೆ ಎಂದು ಹೇಳಿದೆ.
ಅಮ್ಮಂದಿರೇ ಗಮನಿಸಿ : ಮೈ ನಡುಗುವ ಚಳಿಗೆ ‘ಮಕ್ಕಳ ಆರೈಕೆ’ಗಾಗಿ, ಈ ವಿಧಾನಗಳನ್ನು ಅನುಸರಿಸಿ | Child Care in Winter
ಸೋಂಕಿತ ಈಡಿಸ್ ಈಜಿಪ್ಟೈ ಸೊಳ್ಳೆ ಕಚ್ಚಿದರೆ ಡೆಂಗ್ಯೂ ಜ್ವರ ಹರಡುತ್ತದೆ. ಸೋಂಕಿತ ಸೊಳ್ಳೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದ ಸುಮಾರು 7 ದಿನಗಳ ನಂತರ ರೋಗದ ಮೊದಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
ಡೆಂಗ್ಯೂ ಜ್ವರದಿಂದ ಚೇತರಿಸಿಕೊಳ್ಳಲು ಯಾವ ಆಹಾರ ಸೇವಿಸಬೇಕು?
ಪಪ್ಪಾಯಿ ಎಲೆ ರೋಗದ ವಿರುದ್ಧ ಹೋರಾಡಬಲ್ಲದು ಎಂದು ಡೆಂಗ್ಯೂ ಸಂಶೋಧನೆಗಳು ಹೇಳಿವೆ. ಈ ಅಪಾಯಕಾರಿ ಕಾಯಿಲೆಯ ವಿರುದ್ಧ ಹೋರಾಡುವಲ್ಲಿ ಪಪ್ಪಾಯಿ ಎಲೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅನೇಕ ಸಂಶೋಧಕರು ಹೇಳಿದ್ದಾರೆ.
ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ನೀಡಲು ನೀರಿನಲ್ಲಿ ಸಾರವನ್ನು ತಯಾರಿಸಿ, ರೋಗಿಗೆ ದಿನಕ್ಕೆ ಎರಡು ಬಾರಿ ಅಂದ್ರೆ ಬೆಳಿಗ್ಗೆ ಮತ್ತು ಸಂಜೆ ಪಪ್ಪಾಯಿ ಎಲೆಗಳ ನೀರಿನ ಸಾರವನ್ನು ಐದು ದಿನಗಳವರೆಗೆ ಕುಡಿಸಬೇಕು ಎಂದು ಸಂಶೋಧನೆಯೊಂದು ಹೇಳಿದೆ. ಪ್ಲೇಟ್ಲೆಟ್ ಎಣಿಕೆ ಹೆಚ್ಚಿಸುತ್ತದೆ.
ಅಮ್ಮಂದಿರೇ ಗಮನಿಸಿ : ಮೈ ನಡುಗುವ ಚಳಿಗೆ ‘ಮಕ್ಕಳ ಆರೈಕೆ’ಗಾಗಿ, ಈ ವಿಧಾನಗಳನ್ನು ಅನುಸರಿಸಿ | Child Care in Winter
ಡೆಂಗ್ಯೂಗೆ ತೆಂಗಿನ ನೀರಿನ ಎಲೆಕ್ಟ್ರೋಲೈಟ್ಸ್ ಪರಿಣಾಮಕಾರ
ಬಿಪ್ಲಬ್ ಗಿರಿ, ಮೃನ್ಮೋಯ್ ಸರ್ಕಾರ್ ಮತ್ತು ಸಂದೀಪ್ ಕುಮಾರ್ ದಾಸ್ ಅವರು ಜರ್ನಲ್ ಆಫ್ ಡ್ರಗ್ ಡೆಲಿವರಿ ಮತ್ತು ಥೆರಪ್ಯೂಟಿಕ್ಸ್ನಲ್ಲಿ ಸಂಶೋಧನೆಯನ್ನು ಪ್ರಕಟಿಸಿದ್ದಾರೆ.ಇದರ ಪ್ರಕಾರ ಡೆಂಗ್ಯೂ ರೋಗಿಗಳಿಗೆ ತೆಂಗಿನ ನೀರು ಕೊಡಲಾಗಿತ್ತು.
ತೆಂಗಿನ ನೀರು ನೈಸರ್ಗಿಕ ನೀರಿನ ಮೂಲವಾಗಿದೆ. ಇದರಲ್ಲಿರುವ ಅಗತ್ಯ ಖನಿಜ ಮತ್ತು ಎಲೆಕ್ಟ್ರೋಲೈಟ್ಗಳು ಡೆಂಗ್ಯೂ ರೋಗಿಗಳಲ್ಲಿ ದ್ರವವನ್ನು ಮರುಪೂರಣಗೊಳಿಸುತ್ತವೆ ಎಂದು ಕಂಡು ಬಂದಿದೆ. ದಾಳಿಂಬೆ ಮತ್ತು ನಿಂಬೆ ರಸದ ಜೊತೆ ಇದನ್ನು ಸೇವಿಸಿದರೆ ಇದು ಹೆಚ್ಚು ಪ್ರಯೋಜನ ನೀಡುತ್ತದೆ.
ಡೆಂಗ್ಯೂಗೆ ಅರಿಶಿನ ಕರ್ಕ್ಯುಮಿನ್ ಪರಿಣಾಮಕಾರಿ
ಡೆಂಗ್ಯೂ ಜ್ವರದ ಕುರಿತ ಸಂಶೋಧನಾ ಲೇಖನ ಆಂಟಿವೈರಲ್ ರೇಸ್ ಜರ್ನಲ್ನಲ್ಲಿ ಪ್ರಕಟವಾಗಿದೆ. ಇದರ ಪ್ರಕಾರ ಅರಿಶಿನದಲ್ಲಿರುವ ಕರ್ಕ್ಯುಮಿನ್ ಸೋಂಕಿನಿಂದ ದೇಹದಲ್ಲಿನ ಅಡ್ಡ ಪರಿಣಾಮ ಕಡಿಮೆ ಮಾಡುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ.
ಅಮ್ಮಂದಿರೇ ಗಮನಿಸಿ : ಮೈ ನಡುಗುವ ಚಳಿಗೆ ‘ಮಕ್ಕಳ ಆರೈಕೆ’ಗಾಗಿ, ಈ ವಿಧಾನಗಳನ್ನು ಅನುಸರಿಸಿ | Child Care in Winter
ಡೆಂಗ್ಯೂಗೆ ಮೆಂತ್ಯ ಎಲೆಗಳು ಪರಿಣಾಮಕಾರಿ
ಸಂಶೋಧನಾ ಲೇಖನದ ಪ್ರಕಾರ, ಡೆಂಗ್ಯೂ ಜ್ವರದಲ್ಲಿ ರೋಗಿಯು ಮೆಂತ್ಯ ಎಲೆಗಳನ್ನು ಸೇವಿಸಬೇಕು. ಮೆಂತ್ಯ ಎಲೆಗಳು ರೋಗಿಯ ನೋವು ಕಡಿಮೆ ಮಾಡುತ್ತವೆ. ಉತ್ತಮ ನಿದ್ರೆಗೆ ಸಹಕಾರಿ. ಇದು ರೋಗಿಯ ರಕ್ತದೊತ್ತಡ ಮತ್ತು ಹೃದಯ ಬಡಿತ ಕಡಿಮೆ ಮಾಡುತ್ತದೆ.
ಕಿತ್ತಳೆಯಲ್ಲಿರುವ ಫ್ಲೇವನಾಯ್ಡ್ಗಳು ಪರಿಣಾಮಕಾರಿ
ಒಂದು ಅಧ್ಯಯನದ ಪ್ರಕಾರ, ಕಿತ್ತಳೆಯಲ್ಲಿರುವ ಫ್ಲೇವನಾಯ್ಡ್ಗಳು ಡೆಂಗ್ಯೂ ಜ್ವರದ ನಿರ್ಜಲೀಕರಣ ತಡೆಯಲು ಸಹಕಾರಿ. ವಿಟಮಿನ್ ಸಿ ಸಮೃದ್ಧ ಹಣ್ಣುಗಳಲ್ಲಿ ಕಿತ್ತಳೆ ಒಂದು. ಇದು ನಿರ್ಜಲೀಕರಣ ತಡೆದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಅಮ್ಮಂದಿರೇ ಗಮನಿಸಿ : ಮೈ ನಡುಗುವ ಚಳಿಗೆ ‘ಮಕ್ಕಳ ಆರೈಕೆ’ಗಾಗಿ, ಈ ವಿಧಾನಗಳನ್ನು ಅನುಸರಿಸಿ | Child Care in Winter