ಕೆಎನ್ಎನ್ ಡಿಜಿಟಲ್ ಡೆಸ್ಕ್ : ಡೇಂಗ್ಯೂ, ಮಲೇರಿಯಾ, ಚಿಕನ್ಗುನ್ಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ತಗುಲಿದಾಗ ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಗುತ್ತದೆ. ಅಲ್ಲದೆ ಪ್ಲೇಟ್ ಲೇಟ್ಗಳು ಕಡಿಮೆಯಾದಾಗ ದೇಹದಲ್ಲಿ ಶಕ್ತಿ ಇಲ್ಲದಂತಾಗುತ್ತದೆ. ಹೀಗಾಗಿ ಡೇಂಗ್ಯೂದಂತಹ ಮಾರಕ ಕಾಯಿಲೆಗಳಿಂದ ಗುಣಮುಖವಾದ ಬಳಿಕ ದೇಹವನ್ನು ಶಕ್ತಿಯುತವಾಗಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
BREAKING NEWS : ಸೆ. 2ರಂದು ‘ ಪ್ರಧಾನಿ ಮೋದಿ ‘ ಆಗಮನ : ಮಂಗಳೂರಿನ ‘ ಶಾಲಾ – ಕಾಲೇಜುಗಳಿಗೆ ರಜೆ’ ಘೋಷಣೆ
ಪಪ್ಪಾಯ ಎಲೆಗಳು : ಪಪ್ಪಾಯ ಎಲೆಯ ರಸವು ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಆದರೆ ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದು ಒಳ್ಳೆಯದು. ಮುಖ್ಯವಾಗಿ ಡೇಂಗ್ಯೂ ಜ್ವರದಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಹೀಗಾಗಿ ಡೇಂಗ್ಯೂ ಕಾಯಿಲೆಗೆ ಒಳಗಾದ ರೋಗಿಗಳಿಗೆ ಪ್ರತಿನಿತ್ಯ 2 ಚಮಚದಷ್ಟು ಪಪ್ಪಾಯ ಎಲೆಗಳ ರಸವನ್ನು ಸೇವನೆ ಮಾಡಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ.
ಆಯುರ್ವೇದ ವೈದ್ಯರಾದ ಡಾ. ದೀಕ್ಷಾ ಬವಾಸರ್ ಕೂಡ ಕೆಲವು ಪಪ್ಪಾಯಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ರಸ ತೆಗೆದು, ಈ ಕಹಿ ರಸವನ್ನು ದಿನಕ್ಕೆ 2 ಬಾರಿ 2 ಟೇಬಲ್ಸ್ಪೂನ್ ಕುಡಿಯಿರಿ ಎಂದು ಸಲಹೆ ನೀಡುತ್ತಾರೆ. ಬಿ ವಿಟಮಿನ್ ಅದು ರಕ್ತ ಕಣಗಳಿಗೆ ಅವಶ್ಯಕವಾಗಿದೆ. ಇದು ಅನೇಕ ಆಹಾರ ಪದಾರ್ಥಗಳಲ್ಲಿ ಕಂಡುಬರುತ್ತದೆ. ಇದನ್ನು ಫೋಲಿಕ್ ಆಮ್ಲ ಎಂದೂ ಕರೆಯುತ್ತಾರೆ. ಇದಕ್ಕಾಗಿ, ನೀವು ಕಡಲೆಕಾಯಿ, ಬೀನ್ಸ್, ಕಿತ್ತಳೆ, ಕಿತ್ತಳೆ ರಸ ಇತ್ಯಾದಿಗಳ ಸೇವನೆಯನ್ನು ಹೆಚ್ಚಿಸಬಹುದು. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಫೋಲಿಕ್ ಆಸಿಡ್ಯುಕ್ತ ಆಹಾರವನ್ನು ಹೆಚ್ಚು ಸೇವನೆ ಮಾಡಬೇಕು ಎನ್ನುತ್ತಾರೆ. ಆದರೆ ದೇಹದಲ್ಲಿ ಪ್ಲೇಟ್ಲೆಟ್ ಕಡಿಮೆಯಾದಾಗಲೂ ಕೂಡ ವಿಟಮಿನ್ ಬಿಯುಕ್ತ ಆಹಾರವನ್ನು ಹೆಚ್ಚು ಸೇವನೆ ಮಾಡಬೇಕಾಗುತ್ತದೆ.