ಮೆಲ್ಪೋರ್ನ್: ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ 2026ರಲ್ಲಿ ನಡೆಯಲಿರುವಂತ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ( Commonwealth Games ) ಶೂಟಿಂಗ್ ( Shooting ) ಸ್ಪರ್ಧೆಯನ್ನು ಮರು ಸೇರ್ಪಡೆಗೊಳಿಸಲಾಗಿದೆ. ಆದ್ರೇ ಭಾರತಕ್ಕೆ ಅತ್ಯಧಿಕ ಪದಕ ತಂದುಕೊಡಬಲ್ಲ ಕ್ರೀಡೆಗಳಾದಂತ ಕುಸ್ತಿ, ಅರ್ಚರಿ ಕ್ರೀಡೆಗಳನ್ನು ಕೈಬಿಡಲಾಗಿದೆ.
ಈ ಸಂಬಂಧ ಕಾಮನ್ ವೆಲ್ತ್ ಗೇಮ್ಸ್ ಫೆಡರೇಷನ್( Commonwealth Games Federation- CGF) ಮತ್ತು ಕಾಮನ್ ವೆಲ್ತ್ ಗೇಮ್ಸ್ ಆಸ್ಟ್ರೇಲಿಯಾ 2026ರ ಕಾಮನ್ ವೆಲ್ತ್ ಕ್ರೀಢಾಕೂಟಕ್ಕಾಗಿ 20 ಕ್ರೀಡೆಗಳು ಮತ್ತು ಒಂಭತ್ತು ಸಂಪೂರ್ಣ ಸಂಯೋಜಿತ ಪ್ಯಾರಾ ಕ್ರೀಡೆಗಳ ಪಟ್ಟಿಯನ್ನು ಪ್ರಕಟಿಸಿದೆ.
ಸಿಜಿಎಫ್ ಪ್ರಕಟಿಸಿದಂತ ಪಟ್ಟಿಯಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಕ್ರೀಡಾಕೂಟದಿಂದ ಕೈಬಿಡಲಾದಂತ ಶೂಟಿಂಗ್ ಕ್ರೀಡೆಯನ್ನು ಈಗ ಮರು ಸೇರ್ಪಡೆ ಮಾಡಲಾಗಿದೆ. ಈ ಹಿಂದೆ ಶೂಟಿಂಗ್ ಕೈಬಿಟ್ಟಿದ್ದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತ ಪಡಿಸಿತ್ತು.
ಅಂದಹಾಗೇ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಶೂಟಿಂಗ್ ಭಾರತದ ಪ್ರಬಲ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿಯೇ ಈವರೆಗೆ 63 ಚಿನ್ನ, 44 ಬೆಳ್ಳಿ, 28 ಕಂಚು ಸೇರಿದಂತೆ ಒಟ್ಟು 135 ಪದಕಗಳು ಭಾರತಕ್ಕೆ ಬಂದಿವೆ. ಆದ್ರೇ 114 ಪದಕಗಳನ್ನು ತಂದುಕೊಟ್ಟ ಕುಸ್ತಿಯನ್ನು ಕೈಬಿಡಲಾಗಿದೆ.