ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದ್ದು, ಮಹಿಳೆಯರು ಒಂಟಿಯಾಗಿ ಓಡಾಡದೆ ಇರೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಮಳಿಗೆಯ ಶೌಚಗೃಹದಲ್ಲಿ ರಹಸ್ಯ ಕ್ಯಾಮರಾ ಇಟ್ಟು ಮಹಿಳೆಯರ ವಿಡಿಯೋ ಚಿತ್ರೀಕರಿಸಿದ್ದ ಮಳಿಗೆಯ ಸ್ವಚ್ಛತಾ ಕೆಲಸಗಾರನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೌದು ಬೆಂಗಳೂರಿನ ಪ್ರತಿಷ್ಠಿತ ಸಿಹಿ ತಿನಿಸು ಮಾರಾಟ ಮಳಿಗೆಯ ಶೌಚಗೃಹದಲ್ಲಿ ರಹಸ್ಯ ಕ್ಯಾಮರಾ ಇಟ್ಟು ಮಹಿಳೆಯರ ವಿಡಿಯೋ ಚಿತ್ರೀಕರಿಸಿದ್ದ ಹಿನ್ನೆಲೆಯಲ್ಲಿ ಇದೀಗ ಕೋರಮಂಗಲ ನಿವಾಸಿ ಅಮೋದ್(32) ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಬಂಧಿತ ಆರೋಪಿ ಬಿಹಾರ್ ಮೂಲದವನು ಎಂದು ತಿಳಿದುಬಂದಿದೆ.
ಏ.25ರಂದು ಸಂಜೆ ಕೋರಮಂಗಲದ 60 ಅಡಿ ರಸ್ತೆಯ ಸಿಹಿ ತಿನಿಸು ಮಾರಾಟ ಮಳಿಗೆಗೆ ಬಂದಿದ್ದ ದೂರುದಾರ ಮಹಿಳೆಯು ಮಳಿಗೆಯ ಮೊದಲ ಮಹಡಿಯಲ್ಲಿನ ಮಹಿಳಾ ಶೌಚ ಗೃಹಕ್ಕೆ ಹೋದಾಗ ರಹಸ್ಯ ಕ್ಯಾಮೆರಾ ಇರುವುದು ಕಂಡು ಬಂದಿತ್ತು.ಅಲ್ಲದೆ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಎಚ್ಚರಿಕೆ ನೀಡಿದ್ದರು.
ಸಂತ್ರಸ್ತೆ ಶೌಚಗೃಹ ಪ್ರವೇಶಿಸಿದಾಗ ಅದರ ಮುಂಭಾಗದ ಗೋಡೆಯು ಗಟ್ಟಿಯಾಗಿಲ್ಲದಿರುವುದು ಗಮನಕ್ಕೆ ಬಂದಿದೆ. ಗೋಡೆಯ ಮೇಲ್ಭಾಗದಲ್ಲಿ ಫೈಬರ್ ಗಾಜಿನ ಫಲಕ ಮತ್ತು ಮುಖದ ಎತ್ತರಕ್ಕೆ ಮರದ ಹಲಗೆಗಳು ಇರುವುದನ್ನು ಸಂತ್ರಸ್ತೆ ಗಮನಿಸಿದ್ದಾರೆ. ಆದ್ದರಿಂದ ಅನುಮಾನಗೊಂಡ ಅವರು ಗೋಡೆಯ ಹಲಗೆಗಳನ್ನು ಪರಿಶೀಲಿಸಿದಾಗ ಮತ್ತೂಂದು ಬದಿಯಲ್ಲಿ ಮೊಬೈಲ್ ಇರುವುದು ಗೊತ್ತಾಗಿದೆ. ಮೊಬೈಲ್ ಅಲುಗಾಡುತ್ತಿರು ವುದನ್ನು ಕಂಡು ಪರಿಶೀಲಿಸಿದಾಗ ವಿಡಿಯೋ ಚಿತ್ರೀಕರಿಸುತ್ತಿರುವುದು ದೃಢಪಟ್ಟಿದೆ.
ಆ ನಂತರ ಸಂತ್ರಸ್ತೆಯು ಸ್ನೇಹಿತೆಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಮಳಿಗೆಯ ಸಿಬ್ಬಂ ದಿಯನ್ನು ಪ್ರಶ್ನಿಸಿದ್ದಾರೆ. ಬಳಿಕ ಅಲ್ಲಿನ ಸಿಬ್ಬಂದಿ ಮಳಿಗೆಯ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀ ಲಿಸಿದಾಗ ಭದ್ರತಾ ಸಿಬ್ಬಂದಿಯೊಬ್ಬ ಶೌಚಗೃಹ ಪ್ರವೇಶಿಸಿರುವುದು ಗೊತ್ತಾಗಿದೆ. ಜತೆಗೆ, ಹಿಂಬಾಗಿಲಿನಿಂದ ಮತ್ತೂಬ್ಬ ಉದ್ಯೋಗಿ ಹೊರ ಬರುತ್ತಿರುವ ದೃಶ್ಯ ಇದೆ. ಈ ಸಂಬಂಧ ಸಂತ್ರಸ್ತೆಯಿಂದ ದೂರು ನೀಡಿದ್ದರು.