Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: ‘ಕೇಂದ್ರ ಸರ್ಕಾರಿ ನೌಕರ’ರಿಗೆ ಸಿಹಿ ಸುದ್ದಿ: ಶೇ.2ರಷ್ಟು ತುಟ್ಟಿಭತ್ಯೆ ಹೆಚ್ಚಳ, ಅಧಿಕೃತ ಆದೇಶ | DA Hike

22/04/2026 10:35 PM

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಸಾಗರ ಶಾಸಕ ಬೇಳೂರು: ದೆಹಲಿ ಭೇಟಿ ಸಕ್ಸಸ್; ಹೈಕಮಾಂಡ್‌ನಿಂದ ಪಾಸಿಟಿವ್ ಸಿಗ್ನಲ್!

22/04/2026 10:22 PM

BIG NEWS: ಜೈವಿಕ ತಂದೆಯಲ್ಲದಿದ್ದರೇ ಮಗುವಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

22/04/2026 10:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಸ್ಕಾಂನಿಂದ EV ಮೂಲ ಸೌಕರ್ಯಕ್ಕಾಗಿ ದೇಶದ ಮೊದಲ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌ ಬಿಡುಗಡೆ
KARNATAKA

ಬೆಸ್ಕಾಂನಿಂದ EV ಮೂಲ ಸೌಕರ್ಯಕ್ಕಾಗಿ ದೇಶದ ಮೊದಲ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌ ಬಿಡುಗಡೆ

By kannadanewsnow0913/01/2026 6:16 PM

ಬೆಂಗಳೂರು: ರಾಜ್ಯದಲ್ಲಿ ಹಸಿರು ಚಲನಶೀಲತೆ ಉಪಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಬೆಸ್ಕಾಂ ದೇಶದಲ್ಲೇ ಮೊದಲ ಬಾರಿಗೆ ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆ ಹಾಗೂ ತ್ವರಿತ ವಿದ್ಯುತ್‌ ಸಂಪರ್ಕಕ್ಕೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಹೊಂದಿರುವ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್ ಅನ್ನು ಬಿಡುಗಡೆಮಾಡಿದೆ. ಈ ಡಿಜಿಟಲ್ ವೇದಿಕೆ ರಾಜ್ಯಾದ್ಯಂತ ಇವಿ ಮೂಲಸೌಕರ್ಯದ ಅಭಿವೃದ್ಧಿಗೆ ವೇಗ ನೀಡುವ ಜೊತೆಗೆ ಸ್ವಚ್ಛ ಚಲನಶೀಲತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಇತ್ತೀಚೆಗೆ ಬೆಸ್ಕಾಂ ನಿಗಮ ಕಚೇರಿಯಲ್ಲಿ ಈ ವಿಶಿಷ್ಟ ಪೋರ್ಟಲ್‌ಗೆ ಚಾಲನೆ ನೀಡಿದರು. ಖಾಸಗಿ ಭೂಮಾಲೀಕರು, ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಹಾಗೂ ಚಾರ್ಜ್ ಸ್ಟೇಷನ್‌ ಆಪರೇಟರ್‌ಗಳು ರಾಜ್ಯಾದ್ಯಂತ ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಹಾಗೂ ಬೆಸ್ಕಾಂನಿಂದ ವಿದ್ಯುತ್‌ ಸಂಪರ್ಕವನ್ನು ತ್ವರಿತವಾಗಿ ಪಡೆಯಲು ಏಕ ಗವಾಕ್ಷಿ ವ್ಯವಸ್ಥೆಯನ್ನು ಪೋರ್ಟಲ್‌ ನಲ್ಲಿ ಕಲ್ಪಿಸಲಾಗಿದೆ.

ನಗರ ಹಾಗೂ ಹೆದ್ದಾರಿ ಪ್ರದೇಶಗಳಲ್ಲಿ ಸಾರ್ವಜನಿಕ ಇವಿ ಮೂಲಸೌಕರ್ಯಗಳನ್ನು ಅತ್ಯಂತ ತ್ವರಿತಗತಿಯಲ್ಲಿ ಸ್ಥಾಪಿಸಲು ಭೂಮಾಲೀಕರು ಮತ್ತು ಚಾರ್ಜಿಂಗ್ ಆಪರೇಟರ್‌ಗಳಿಗೆ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌ ನೆರವಾಗಲಿದೆ. ಇವಿ ಹಬ್‌ಗಳ ನಿರ್ಮಾಣವನ್ನು ಉತ್ತೇಜಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ, ಇವಿ ವಿಭಾಗ (NHEV) ಈ ಉಪಕ್ರಮದಲ್ಲಿ ಬೆಸ್ಕಾಂ ಜೊತೆ ಕೈಜೋಡಿಸಿದೆ. ಸ್ವಚ್ಛ ಚಲನಶೀಲತೆ, ಸಾರ್ವಜನಿಕ–ಖಾಸಗಿ ಸಹಭಾಗಿತ್ವ ಮತ್ತು ವಿಸ್ತರಣೆಗೆ ಅನುಕೂಲಕರವಾದ ಇವಿ ಮೂಲಸೌಕರ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಪೋರ್ಟಲ್‌ ಮೂಲಕ ಭೂಮಾಲೀಕರು ತಮ್ಮ ಭೂಮಿಯನ್ನು ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಆದಾಯ ಹಂಚಿಕೆ ಆಧಾರದ ಮೇಲೆ ಬಾಡಿಗೆಗೆ ಅಥವಾ ಭೋಗ್ಯಕ್ಕೆ ನೀಡಲು ಅವಕಾಶ ಇದೆ. ಅದೇ ರೀತಿ ವಿತರಕರು ಮತ್ತು ಚಾರ್ಜ್ ಪಾಯಿಂಟ್ ಆಪರೇಟರ್‌ಗಳು ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ, ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ವಹಿಸಿಕೊಳ್ಳಬಹುದು. ಏಕ-ಗವಾಕ್ಷಿ ಡಿಜಿಟಲ್ ಡ್ಯಾಶ್‌ಬೋರ್ಡ್ ಮೂಲಕ ವಿದ್ಯುತ್ ಸಂಪರ್ಕವನ್ನು ಸಮಯಕ್ಕೆ ಸರಿಯಾಗಿ ಒದಗಿಸಿ, ವಿಳಂಬವನ್ನು ಕಡಿಮೆ ಮಾಡುವುದರ ಜೊತೆಗೆ ಎಲ್ಲಾ ಹಿತಾಸಕ್ತಿದಾರರ ನಡುವೆ ಸಮನ್ವಯ ಸಾಧಿಸಲು ನೆರವಾಗಲಿದೆ.

ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್, ಕರ್ನಾಟಕದಲ್ಲಿ ಬಲಿಷ್ಠ ಮತ್ತು ಭವಿಷ್ಯದ ಇವಿ ಪರಿಸರ ವ್ಯವಸ್ಥೆ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ. ಭೂ ಸಂಗ್ರಾಹಕ ಹಾಗೂ ವಿದ್ಯುತ್ ಪೂರೈಕೆ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಈ ಉಪಕ್ರಮವು ರಾಜ್ಯದ ಬದಲಾವಣೆಗೆ ಸಹಕಾರಿಯಾಗಿರುವ ಕಡಿಮೆ ಕಾರ್ಬನ್ ಆರ್ಥಿಕತೆಯತೆಯನ್ನು ಸಾಧಿಸಲಿದೆ ಹಾಗೂ ಸ್ಥಳೀಯ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಿ, ಗ್ರಾಹಕರಿಗೆ ಇವಿ ಬಳಕೆಯನ್ನು ಉತ್ತೇಜಿಸಲಿದೆ.

ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್ ಬಿಡುಗಡೆಯು ಭವಿಷ್ಯದ ಇವಿ ಮೂಲಸೌಕರ್ಯ ನಿರ್ಮಾಣದತ್ತ ಮಹತ್ವದ ಮೈಲಿಗಲ್ಲಾಗಿದೆ. ಇದು ಸ್ವಚ್ಛ ಚಲನಶೀಲತೆಯನ್ನು ಉತ್ತೇಜಿಸುವುದರ ಜೊತೆಗೆ ಸಾರ್ವಜನಿಕ–ಖಾಸಗಿ ಸಹಭಾಗಿತ್ವವನ್ನು ಬಲಪಡಿಸಿ, ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ. ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಯನ್ನು ಸುಲಭಗೊಳಿಸುವ ಮೂಲಕ, ಈ ಉಪಕ್ರಮವು ಕರ್ನಾಟಕವನ್ನು ಕಡಿಮೆ ಕಾರ್ಬನ್ ಆರ್ಥಿಕತೆಯತ್ತ ಮುನ್ನಡೆಸಲು ಸಹಕಾರಿಯಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿದರು.

ಪೋರ್ಟಲ್‌ನ ಪ್ರಮುಖ ಉದ್ದೇಶಗಳು

 ಇವಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಭೂಮಿಯನ್ನು ಬಾಡಿಗೆಗೆ ನೀಡುವ ಅವಕಾಶಗಳಿಗೆ ಉತ್ತೇಜನ.
 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹಾಗೂ ಅನುಮೋದನಾ ಪ್ರಕ್ರಿಯೆ ಪ್ರಗತಿ ಪರಿಶೀಲನೆ
 ಭೂಮಾಲೀಕರು ಸುಲಭವಾಗಿ ನೋಂದಣಿ ಮಾಡಿಕೊಂಡು ತಮ್ಮ ಭೂಮಿಯನ್ನು ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳಿಗೆ ನೀಡುವ ವ್ಯವಸ್ಥೆ
 ವೆಂಡರ್ಸ್‌ ಹಾಗೂ ಚಾರ್ಜ್ ಸ್ಟೇಷನ್‌ ಆಪರೇಟರ್‌ಗಳು ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿ ಹಾಗೂ ಅದರ ಕಾರ್ಯಾಚರಣೆಯನ್ನು ನಿರ್ವಹಿಸಬಹುದು
 ಪೋರ್ಟಲ್ ಮೂಲಕ ಬೆಸ್ಕಾಂ, ಚಾರ್ಜ್ ಸ್ಟೇಷನ್‌ ಆಪರೇಟರ್‌ಗಳೊಂದಿಗೆ ಸಂಪರ್ಕಿಸಿ ಇವಿ ಚಾರ್ಜಿಂಗ್ ಅಥವಾ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಸಹಕಾರ ನೀಡಲಿದೆ
 ಭೂ ಮಾಲೀಕರು ಹಾಗೂ ಚಾರ್ಜ್ ಸ್ಟೇಷನ್‌ ಆಪರೇಟರ್‌ ಗಳು ಸ್ಥಳವನ್ನು ಅಂತಿಮಗೊಳಿಸಿ ಕಾರ್ಯಸಾಧನಾ ವರದಿಯನ್ನು ಪಡೆದ ನಂತರ, ಚಾರ್ಜಿಂಗ್‌ ಸ್ಟೇಷನ್‌ ಆಪರೇಟರ್‌ ಗಳು ಪೋರ್ಟ್‌ಲ್‌ ನ ಏಕ ಗವಾಕ್ಷಿ ಡ್ಯಾಶ್‌ ಬೋರ್ಡ್‌ ಮೂಲಕ ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು. ಯಾವುದೇ ವಿಳಂಬವಿಲ್ಲದೆ, ವಿದ್ಯುತ್‌ ಸಂಪರ್ಕ ದೊರೆಯಲಿದೆ. ಅರ್ಜಿದಾರರು ಪೋರ್ಟಲ್‌ ಮೂಲಕ ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು.

ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌, ಖಾಸಗಿ ಭೂಮಾಲಿಕರು, ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳು ತಮ್ಮ ಭೂಮಿಯನ್ನು ನೀಡಲು ಹಾಗೂ ಚಾರ್ಜಿಂಗ್ ಸ್ಟೇಷನ್‌ ಆಪರೇಟರ್‌ಗಳು ರಾಜ್ಯಾದ್ಯಂತ ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಒಂದೇ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಆದಾಯ ಹಂಚಿಕೆ ಮಾದರಿಯಲ್ಲಿ ಭೂಮಿಯನ್ನು ಬಾಡಿಗೆಗೆ ನೀಡಲು ಇದು ಅವಕಾಶ ಕಲ್ಪಿಸುತ್ತದೆ.-

ಕೆ.ಜೆ. ಜಾರ್ಜ್ , ಇಂಧನ ಸಚಿವ..

Share. Facebook Twitter LinkedIn WhatsApp Email

Related Posts

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಸಾಗರ ಶಾಸಕ ಬೇಳೂರು: ದೆಹಲಿ ಭೇಟಿ ಸಕ್ಸಸ್; ಹೈಕಮಾಂಡ್‌ನಿಂದ ಪಾಸಿಟಿವ್ ಸಿಗ್ನಲ್!

22/04/2026 10:22 PM2 Mins Read

BREAKING: ಗೋಲ್ಡ್ ಸ್ಮಗ್ಲಿಂಗ್ ಕೇಸ್: ಒಂದು ವರ್ಷದ ಬಳಿಕ ನಟಿ ರನ್ಯಾ ರಾವ್ ಜೈಲಿನಿಂದ ಬಿಡುಗಡೆ

22/04/2026 8:35 PM2 Mins Read

BIG NEWS: ನಾಳೆ ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಶಾಲಾ ಪರೀಕ್ಷೆ, ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿ

22/04/2026 8:28 PM1 Min Read
Recent News

BIG BREAKING: ‘ಕೇಂದ್ರ ಸರ್ಕಾರಿ ನೌಕರ’ರಿಗೆ ಸಿಹಿ ಸುದ್ದಿ: ಶೇ.2ರಷ್ಟು ತುಟ್ಟಿಭತ್ಯೆ ಹೆಚ್ಚಳ, ಅಧಿಕೃತ ಆದೇಶ | DA Hike

22/04/2026 10:35 PM

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಸಾಗರ ಶಾಸಕ ಬೇಳೂರು: ದೆಹಲಿ ಭೇಟಿ ಸಕ್ಸಸ್; ಹೈಕಮಾಂಡ್‌ನಿಂದ ಪಾಸಿಟಿವ್ ಸಿಗ್ನಲ್!

22/04/2026 10:22 PM

BIG NEWS: ಜೈವಿಕ ತಂದೆಯಲ್ಲದಿದ್ದರೇ ಮಗುವಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

22/04/2026 10:03 PM

ಆನ್‌ಲೈನ್ ಗೇಮರ್‌ಗಳಿಗೆ ಶಾಕ್: ಮೇ 1 ರಿಂದ ದೇಶದಲ್ಲಿ ಹೊಸ ಗೇಮಿಂಗ್ ನಿಯಮಗಳು ಜಾರಿ!

22/04/2026 9:57 PM
State News
KARNATAKA

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಸಾಗರ ಶಾಸಕ ಬೇಳೂರು: ದೆಹಲಿ ಭೇಟಿ ಸಕ್ಸಸ್; ಹೈಕಮಾಂಡ್‌ನಿಂದ ಪಾಸಿಟಿವ್ ಸಿಗ್ನಲ್!

By kannadanewsnow0922/04/2026 10:22 PM KARNATAKA 2 Mins Read

ಶಿವಮೊಗ್ಗ: “ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಹಾಗೂ ಸಚಿವ ಸ್ಥಾನದ ಕುರಿತು ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ನಡೆಸಿದ ಮಾತುಕತೆ ಅತ್ಯಂತ…

BREAKING: ಗೋಲ್ಡ್ ಸ್ಮಗ್ಲಿಂಗ್ ಕೇಸ್: ಒಂದು ವರ್ಷದ ಬಳಿಕ ನಟಿ ರನ್ಯಾ ರಾವ್ ಜೈಲಿನಿಂದ ಬಿಡುಗಡೆ

22/04/2026 8:35 PM

BIG NEWS: ನಾಳೆ ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಶಾಲಾ ಪರೀಕ್ಷೆ, ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿ

22/04/2026 8:28 PM

ಬಿಸಿಲಿನಿಂದ ಸುರಕ್ಷಿತರಾಗಿರಲು ಈ ಕ್ರಮಗಳನ್ನು ತಪ್ಪದೆ ಅನುಸರಿಸಿ!

22/04/2026 8:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.