ಕೆಎನ್ ಎನ್ ನ್ಯೂಸ್ ಡೆಸ್ಕ್ : ಮನೆಯ ಅತಿಥಿಗಳೆಲ್ಲ ಸೇರಿಕೊಂಡು ಈಜುಕೊಳದಲ್ಲಿ ಪಾರ್ಟಿ ಮಾಡುತ್ತಿದ್ದರು. ಸಿಂಕ್ಹೋಲ್ ತೆರೆದಿರುವುದರಿಂದ ವ್ಯಕ್ತಿಯೊಬ್ಬ ಅದರ ಒಳಗೆ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಇನ್ನುಳಿದವರು ಕಾಣೆಯಾಗಿದ್ದಾರೆ.
ಸುಮಾರು 43 ಅಡಿ ಆಳದ ರಂಧ್ರದಿಂದ ವ್ಯಕ್ತಿ ಸಿಲುಕಿಕೊಂಡಿದ್ದಾನೆ. ಇಸ್ರೇಲ್ ನ ಕಾರ್ಮಿ ಯೋಸೆಫ್ ಎಂಬ ನಗರದಲ್ಲಿ ಈ ಘಟನೆ ನಡೆದಿದೆ.
ಸಿಂಕ್ಹೋಲ್ ತೆರೆದು 43 ಅಡಿ ಆಳಕ್ಕೆ ವ್ಯಕ್ತಿಯೊಬ್ಬ ಮುಳುಗಿದ್ದಾನೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಟ್ವಿಟ್ಟರ್ ನಲ್ಲಿ ಅನೇಕರು ವಿಡಿಯೋ ಶೇರ್ ಮಾಡಿದ್ದಾರೆ. ಈ ಘಟನೆ ನಡೆದಾಗ ಈಜುಕೋಳದಲ್ಲಿ ಒಟ್ಟು ೬ ಜನರು ಇದ್ದರು. ಅದರಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ, ಕೆಲ ವ್ಯಕ್ತಿಗೆ ಗಾಯವಾಗಿದ್ದು, ಇನ್ನುಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಳದ ಹೆಚ್ಚಿನ ನೀರನ್ನು ಸೆಕೆಂಡುಗಳಲ್ಲಿ ಹೀರುತ್ತದೆ. ಒಬ್ಬ ಮನುಷ್ಯನು ಸಿಂಕ್ಹೋಲ್ ಕಡೆಗೆ ಜಾರುವುದನ್ನು ಕಾಣಬಹುದು, ಆದರೆ ಇತರ ವ್ಯಕ್ತಿಗಳು ಅವನನ್ನು ಬೇಗನೆ ಹಿಂದೆ ಎಳೆಯುತ್ತಾರೆ.
“One man has been injured and another is missing after a sinkhole opened up in a inground pool at a home in central Israel.
The incident occurred during a pool party." pic.twitter.com/S9cByAFebx
— natureismetal (@NIMactual) July 21, 2022