ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾಕೆ ನಿನ್ನೆ ಸಾಹಿತಿ ಬಾನು ಮುಷ್ತಾಕ್ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಇದೀಗ ಚಾಮುಂಡಿ ಬೆಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದ ಅರ್ಚಕರೊಬ್ಬರು ಹೃದಯಘಾತದಿಂದ ಸಾವನಪ್ಪಿದ್ದಾರೆ.
ಹೌದು ಮೈಸೂರಿನ ಚಾಮುಂಡಿ ಬೆಟ್ಟದ ಅರ್ಚಕ ಇದೀಗ ನಿಧನರಾಗಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತಿದ್ದ ರಾಜು ಎನ್ನುವ ಅರ್ಚಕರು ದೇವಸ್ಥಾನದಲ್ಲಿ ಶಿವಾರ್ಚಕರಾಗಿದ್ದರು. ಹೃದಯಾಘಾತದಿಂದ ಅರ್ಚಕ ರಾಜು ಸಾವನಪ್ಪಿದ್ದಾರೆ. ಸದ್ಯ ಗರ್ಭಗುಡಿಗೆ ತೆರೆ ಎಳೆದು ಉತ್ಸವ ಮೂರ್ತಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಇಂದು ರಾತ್ರಿಯವರೆಗೂ ಮೂಲ ವಿಗ್ರಹದ ದರ್ಶನಕ್ಕೆ ನಿಷೇಧಿಸಲಾಗಿದೆ.