ದಾವಣಗೆರೆ : ರಾಜ್ಯಾದ್ಯಂತ ಸೆಪ್ಟೆಂಬರ್ 22 ರಿಂದ ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಆರಂಭಿಸಲಾಗಿದ್ದು, ಈಗಾಗಲೇ ಜಾತಿಗಣಿತಿ ವೇಳೆ ಹೃದಯಾಘಾತದಿಂದ ಶಿಕ್ಷಕರು ಮೃತಪಟ್ಟಿರುವ ಒಂದೆರಡು ಪ್ರಕರಣಗಳು ನಡೆದಿದ್ದುz ಇದೀಗ ದಾವಣಗೆರೆಯಲ್ಲಿ ಶಿಕ್ಷಕರೊಬ್ಬರಿಗೆ ಜಾತಿಗಣಿತಿ ವೇಳೆ ಹೃದಯಘಾತವಾಗಿದೆ. ಅದೃಷ್ಟವಶಾತ್ ಸ್ಥಳೀಯರ ಸಮಯ ಪ್ರಜ್ಞೆಯಿಂದ ಶಿಕ್ಷಕನ ಜೀವ ಉಳಿದಿದೆ.
ಹೌದು ಜಾತಿ ಗಣತಿ ವೇಳೆ ದಾವಣಗೆರೆ ತಾಲ್ಲೂಕಿನ ಹಳೆಕಡ್ಲೆಬಾಳು ಶಾಲೆಯ ಶಿಕ್ಷಕರೊಬ್ಬರಿಗೆ ಹೃದಯಾಘಾತವಾಗಿದೆ. ಶಿಕ್ಷಕ ಪ್ರಕಾಶ್ ನಾಯಕ್ (44)ಗೆ ಹೃದಯಾಘಾತವಾಗಿದ್ದು, ತಕ್ಷಣ ಚಿಕಿತ್ಸೆಗಾಗಿ ದಾವಣಗೆರೆ ನಗರದ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿ ಸ್ಟೆಂಟ್ ಅಳವಡಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಶಿಕ್ಷಕ ಪ್ರಕಾಶ್ ನಾಯಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾವಣಗೆರೆ ಡಿಸಿ ಜಿಎಂ ಗಂಗಾಧರ ಸ್ವಾಮಿ ಫೋನ್ ಮೂಲಕ ಪ್ರಕಾಶ್ ನಾಯಕ್ಗೆ ಧೈರ್ಯ ತುಂಬಿದರು. ಸಮೀಕ್ಷೆ ವೇಳೆ ಸಿಬ್ಬಂದಿ ಸಾಕಷ್ಟು ಕಿರುಕುಳ ಎದುರಿಸುತ್ತಿದ್ದಾರೆ. ಇದರಿಂದಾಗಿ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಪ್ರಕಾಶ್ ನಾಯಕ್ ಜತೆಗಿದ್ದವರು ಡಿಸಿ ಜಿಎಂ ಗಂಗಾಧರ ಸ್ವಾಮಿ ಬಳಿ ಫೋನ್ನಲ್ಲಿ ದೂರುತ್ತಿರುವುದೂ ಕಂದುಬಂದಿದೆ.