Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ವಿಚಾರಕ್ಕೆ ಸಿಎಂ, ಡಿಸಿಎಂ ನಡುವೆ ಪೈಪೋಟಿ ನಡೀತಿದೆ : ಮೋದಿ ಲೇವಡಿ

Vijay 5

‘ಡ್ರಗ್ಸ್ ಮುಕ್ತ’ ತಮಿಳುನಾಡು ನಮ್ಮ ಮೊದಲ ಸಂಕಲ್ಪ: ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಕಠಿಣ ಸಂದೇಶ !

Vijay 5

ನಿಮ್ಮ ಒಂದು ರೂಪಾಯಿಯನ್ನು ಲೂಟಿ ಹೊಡೆಯಲು ಬಿಡಲ್ಲ : ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಜಯ್ ಮೊದಲ ಭಾಷಣ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ‘ಡ್ರಗ್ಸ್’ ದಾಸನಾದ ಮಗ : ಇವನ್ನ ಜೈಲಿಗೆ ಹಾಕಿ, ಇಲ್ಲ ನನಗೆ ಕೊಲ್ಲಲು ಅನುಮತಿ ಕೊಡಿ ಎಂದ ತಾಯಿ!
KARNATAKA

SHOCKING : ‘ಡ್ರಗ್ಸ್’ ದಾಸನಾದ ಮಗ : ಇವನ್ನ ಜೈಲಿಗೆ ಹಾಕಿ, ಇಲ್ಲ ನನಗೆ ಕೊಲ್ಲಲು ಅನುಮತಿ ಕೊಡಿ ಎಂದ ತಾಯಿ!

By kannadanewsnow05

ತುಮಕೂರು : ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠ ಶಾಲೆ ಎಂದು ನಾವು ಚಿಕ್ಕವರಿಂದ ನಮ್ಮ ಗುರು ಹಿರಿಯರು ಹೇಳಿ ಕೊಟ್ಟ ದಾರಿಯಲ್ಲಿ ನಡೆದು ಬಂದಿದ್ದೇವೆ. ಆದರೆ ಇಲ್ಲೊಂದು ಘಟನೆಯಲ್ಲಿ ಮಗನೊಬ್ಬ ಡ್ರಗ್ಸ್ ಗೆ ಸಂಪೂರ್ಣವಾಗಿ ದಾಸನಾಗಿದ್ದ ಇದರಿಂದ ಬೇಸತ್ತ ತಾಯಿ ಒಬ್ಬರು ಇವನನ್ನು ಜೈಲಿಗೆ ಕಳುಹಿಸಿ ಇಲ್ಲವಾದರೆ ಇವನನ್ನು ಕೊಲ್ಲಲು ನನಗೆ ಅನುಮತಿ ಆದರೂ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.

ಹೌದು ಮಾದಕ ವಸ್ತುಗಳಿಗೆ ತುಮಕೂರಿನ ರೇಣುಕಮ್ಮ ಎನ್ನುವವರ ಮಗ ಅಭಿ ಎನ್ನುವ ಯುವಕ ಡ್ರಗ್ಸ್ ವ್ಯಸನಿಯಾದ ಹಿನ್ನೆಲೆಯಲ್ಲಿ ಬೇಸತ್ತ ತಾಯಿಯೊಬ್ಬರು, ದಯಮಾಡಿ ಪುತ್ರನನ್ನು ಜೈಲಿಗೆ ಹಾಕಿ, ಇಲ್ಲವೇ ಅವನನ್ನು ಸಾಯಿಸಲು ನನಗೆ ಅನುಮತಿ ಕೊಡಿ ಎಂದು ಪೊಲೀಸರನ್ನು ಬೇಡಿಕೊಂಡಿರುವುದು ತುಮಕೂರು ಜಿಲ್ಲೆಯ ತುರುವೇಕರೆಯಲ್ಲಿ ನಡೆದಿದೆ.

ಸಾರ್ ನನ್ ಮಗ ಸರಿಯಿಲ್ಲ. ಗಾಂಜಾ ಹೊಡೀತಾನೆ, ಡ್ರಗ್ಸ್ ತಗೋತಾನೆ, ಸಿಕ್ಕ ಸಿಕ್ಕವರ ಮೇಲೆ ಹೊಡೆದಾಟಕ್ಕೆ ಹೋಗ್ತಾನೆ. ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತಾಡ್ತಾನೆ. ಕೀಟಲೆ ಮಾಡ್ತಾನೆ. ಜನರ ಕೈಲಿ ಒದೆ ತಿಂತಾನೆ. ಅದನ್ನು ನಾನು ನೋಡಕ್ಕೆ ಆಗಲ್ಲ. ಕೈ ಕಾಲು ಮುರಿದು ಹಾಕ್ತಾರೆ. ಜನಗಳು ನಮ್ ಮನೆ ಮುಂದೆ ಬಂದು ಗಲಾಟೆ ಮಾಡ್ತಾರೆ. ಮರ್ಯಾದೆ ಹೋಗ್ತಾ ಇದೆ. ದಯಮಾಡಿ ನನ್ ಮಗನ್ನ ಜೈಲಿಗೆ ಹಾಕಿ. ಇಲ್ಲಾಂದ್ರೆ ನನಗೆ ಅವನನ್ನು ಸಾಯಿಸಕ್ಕೆ ಪರ್ಮಿಷನ್ ಕೊಡಿ. ಇದು ಆ ತಾಯಿಯ ಸಂಕಟದ ಮಾತಾಗಿದೆ.

ಶನಿವಾರ ಮಧ್ಯಾಹ್ನ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕೆಲವು ಬಾಲಕಿಯರನ್ನು ಯುವಕ ಅಭಿ ಚುಡಾಯಿಸಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹೀಗಾಗಿ ಅಲ್ಲೇ ಇದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಭಿಯನ್ನು ಹಿಡಿದು ಚೆನ್ನಾಗಿ ಥಳಿಸಿ, ಪೋಲಿಸರಿಗೆ ಒಪ್ಪಿಸಿದ್ದಾರೆ. ಈ ನಡುವೆ ಇದೇ ಅಭಿ, ಈ ಹಿಂದೆ ಪಟ್ಟಣದಲ್ಲಿ ಯುವತಿಗೆ ಜೀವ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೋಲಿಸ್‌ ಠಾಣೆಗೆ ತೆರಳಿದ್ದ ತಾಯಿ ರೇಣುಕಮ್ಮಗೆ ಧೈರ್ಯ ತುಂಬಿರುವ ಸಬ್ ಇನ್ಸ್ ಪೆಕ್ಟರ್ ಪಾಂಡು ಅವರು, ಯುವಕ ವ್ಯಸನಮುಕ್ತವಾಗಲು ಸಹಕಾರ ನೀಡುತ್ತೇವೆ. ಆತನಿಗೆ ನಿಮ್ಹಾನ್ಸ್ ನಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲು ನೆರವು ನೀಡುವುದಾಗಿ ರೇಣುಕಮ್ಮಗೆ ಭರವಸೆ ನೀಡಿದ್ದಾರೆ. ಸದ್ಯ ಯುವಕನನ್ನು ತುರುವೇಕೆರೆ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ವಿಚಾರಕ್ಕೆ ಸಿಎಂ, ಡಿಸಿಎಂ ನಡುವೆ ಪೈಪೋಟಿ ನಡೀತಿದೆ : ಮೋದಿ ಲೇವಡಿ

1 Min Read
ಸಚಿವ ಡಿ. ಸುಧಾಕರ್ ನಿಧನ ರಾಜ್ಯದಲ್ಲಿ ಮೂರು ದಿನ ಅಧಿಕೃತ ಶೋಕಾಚರಣೆ ಮತ್ತು ಚಿತ್ರದುರ್ಗ ಜಿಲ್ಲೆಯಾದ್ಯಂತ ನಾಳೆ ರಜೆ ಘೋಷಣೆ

ಸಚಿವ ಡಿ. ಸುಧಾಕರ್ ನಿಧನ: ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಣೆ, ಚಿತ್ರದುರ್ಗ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ

2 Mins Read

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

1 Min Read
Recent News

BREAKING : ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ವಿಚಾರಕ್ಕೆ ಸಿಎಂ, ಡಿಸಿಎಂ ನಡುವೆ ಪೈಪೋಟಿ ನಡೀತಿದೆ : ಮೋದಿ ಲೇವಡಿ

Vijay 5

‘ಡ್ರಗ್ಸ್ ಮುಕ್ತ’ ತಮಿಳುನಾಡು ನಮ್ಮ ಮೊದಲ ಸಂಕಲ್ಪ: ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಕಠಿಣ ಸಂದೇಶ !

Vijay 5

ನಿಮ್ಮ ಒಂದು ರೂಪಾಯಿಯನ್ನು ಲೂಟಿ ಹೊಡೆಯಲು ಬಿಡಲ್ಲ : ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಜಯ್ ಮೊದಲ ಭಾಷಣ

ಪ್ರಧಾನಿ ಮೋದಿ ಅಭಿನಂದನೆ ಸಿ ಜೋಸೆಫ್ ವಿಜಯ್ - PM Modi Congratulates C Joseph Vijay

ಪ್ರಧಾನಿ ನರೇಂದ್ರ ಮೋದಿಯಿಂದ ತಮಿಳುನಾಡು ನೂತನ CM ಸಿ. ಜೋಸೆಫ್ ವಿಜಯ್‌ಗೆ ಅಭಿನಂದನೆ : ಅಭಿವೃದ್ಧಿಗೆ ಕೇಂದ್ರದ ಸಹಕಾರದ ಭರವಸೆ !

State News
KARNATAKA

BREAKING : ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ವಿಚಾರಕ್ಕೆ ಸಿಎಂ, ಡಿಸಿಎಂ ನಡುವೆ ಪೈಪೋಟಿ ನಡೀತಿದೆ : ಮೋದಿ ಲೇವಡಿ

By kannadanewsnow05 KARNATAKA 1 Min Read

ಬೆಂಗಳೂರು : ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ (BJP) ಐತಿಹಾಸಿಕ ವಿಜಯ ಸಾಧಿಸಿದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ…

ಸಚಿವ ಡಿ. ಸುಧಾಕರ್ ನಿಧನ ರಾಜ್ಯದಲ್ಲಿ ಮೂರು ದಿನ ಅಧಿಕೃತ ಶೋಕಾಚರಣೆ ಮತ್ತು ಚಿತ್ರದುರ್ಗ ಜಿಲ್ಲೆಯಾದ್ಯಂತ ನಾಳೆ ರಜೆ ಘೋಷಣೆ

ಸಚಿವ ಡಿ. ಸುಧಾಕರ್ ನಿಧನ: ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಣೆ, ಚಿತ್ರದುರ್ಗ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಸಾಧಿಸಿದ ಬೆಳಗಾವಿಯ ಪ್ರತಿಭೆ ಬಸವರಾಜ ಕೆಂಪವಾಡ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.