ದಾವಣಗೆರೆ : ಮನೆಯಲ್ಲಿ ನೀರು ತುಂಬುವ ವೇಳೆ ತಾಯಿ ಮೋಟರ್ ಆನ್ ಮಾಡಿದ್ದಾಳೆ, ಈ ವೇಳೆ ವಿದ್ಯುತ್ ಶಾಕ್ ತಗುಲಿ ಒಂದುವರೆ ವರ್ಷದ ಮಗು ದಾರುಣವಾಗಿ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ನಡೆದಿದೆ
ಹೌದು ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಒಂದುವರೆ ವರ್ಷದ ಮಗು ಮಂಜು ಎನ್ನುವ ಬಾಲಕ ಮೃತಪಟ್ಟಿದ್ದಾನೆ. ಮನೆಯಲ್ಲಿ ಆಟವಾಡುತ್ತಾ ನೀರಿನ ಮೋಟಾರ್ ಹಿಡಿದು ಸಾವನ್ನಪ್ಪಿದ್ದಾನೆ. ತಾಯಿ ಮೋಟರ್ ಆನ್ ಮಾಡಿ ನೀರು ತುಂಬಿಸುವಾಗ ಈ ಒಂದು ಘೋರ ದುರಂತ ಸಂಭವಿಸಿದೆ. ಮಗು ಸಾವಿನಿಂದ ನಿಂದ ಇದೀಗ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.