Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವೈದ್ಯಕೀಯ ಲೋಕದಲ್ಲಿ ಹೊಸ ಕ್ರಾಂತಿ: ವಿಶ್ವದ ಮೊದಲ ‘AI ವಿನ್ಯಾಸಿತ’ ಲಸಿಕೆ ಮಾನವರ ಮೇಲೆ ಯಶಸ್ವಿ ಪ್ರಯೋಗ!

​ಪತ್ನಿಯ ಅಗಲಿಕೆ ಬೆನ್ನಲ್ಲೇ ವಿಶ್ವ ಪರ್ಯಟನೆ ಕನಸು ತ್ಯಾಗ: ತಮಗಾಗಿ ಇಟ್ಟಿದ್ದ ₹25 ಲಕ್ಷ ಭವಿಷ್ಯ ನಿಧಿಯನ್ನು ಭಾರತೀಯ ಸೇನೆಗೆ ದೇಣಿಗೆ ನೀಡಿದ ನಿವೃತ್ತ ಬ್ಯಾಂಕ್ ಅಧಿಕಾರಿ!

`CET’ ಅಭ್ಯರ್ಥಿಗಳಿಗೆ ಬಿಗ್ ಅಪ್ ಡೇಟ್ : ವೆರಿಫಿಕೇಷನ್ ಸ್ಲಿಪ್ ಡೌನ್ ಲೋಡ್ ಪ್ರಕ್ರಿಯೆ ಆರಂಭ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ 4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶ ಸೃಷ್ಟಿ
KARNATAKA

ರಾಜ್ಯದಲ್ಲಿ 4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶ ಸೃಷ್ಟಿ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ರಾಮನಗರ ಸೇರಿದಂತೆ 13 ಜಿಲ್ಲೆಗಳಾದ್ಯಂತ 37 ಹೊಸ ಕೈಗಾರಿಕೆಗಳು ಮತ್ತು ಹೆಚ್ಚುವರಿ ಹೂಡಿಕೆಯ 2 ಯೋಜನೆಗಳ ಒಟ್ಟು ₹4,824.31 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಶುಕ್ರವಾರ ನಡೆದ 158ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ʼಐಟಿ ಮೂಲಸೌಲಭ್ಯ, ಸಕ್ಕರೆ ಕಾರ್ಖಾನೆ, ಟೆಕ್ನಿಕಲ್‌ ಟೆಕ್ಸ್‌ಟೈಲ್‌, ಕಂಪ್ರೆಸ್ಡ್‌ ಗ್ಯಾಸ್‌, ವೈಮಾಂತರಿಕ್ಷ, ಚಿನ್ನಾಭರಣ ತಯಾರಿಕೆ,ಎಲೆಕ್ಟ್ರಾನಿಕ್ಸ್‌, ಸಾಫ್ಟ್‌ವೇರ್‌ ಹಾಗೂ ಪಂಚತಾರಾ ಹೋಟೆಲ್‌ ನಿರ್ಮಾಣ ಯೋಜನೆಗಳಿಗೆ ನೀಡಿರುವ ಅನುಮೋದನೆಗಳಿಂದ ರಾಜ್ಯದಲ್ಲಿ ಹೊಸದಾಗಿ 14,525 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆʼ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ.

ಈ ಯೋಜನೆಗಳಲ್ಲಿ ಬಾಗ್ಮನೆ ಕನ್‌ಸ್ಟ್ರಕ್ಷನ್‌ ಪ್ರೈವೇಟ್‌ ಲಿಮಿಟೆಡ್‌ನ ₹494.65 ಕೋಟಿ ಮೊತ್ತದ ಐಟಿ ಮೂಲಸೌಲಭ್ಯ ಅಭಿವೃದ್ಧಿ, ಕರ್ನಾಟಕ ಬಂಗಾರು ಷುಗರ್ಸ್‌ನ ₹443.50 ಕೋಟಿಯ ಸಕ್ಕರೆ ಕಾರ್ಖಾನೆ, ಕ್ಲೆನೆ ಪ್ಯಾಕ್ಸ್‌ನ ₹376 ಕೋಟಿಯ ಟೆಕ್ನಿಕಲ್‌ ಟೆಕ್ಸ್‌ಟೈಲ್‌ ಘಟಕ, ತ್ರಿಶೂಲ್‌ ಬಿಲ್ಡ್‌ಟೆಕ್‌ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ನ ₹ 300 ಕೋಟಿ ವೆಚ್ಚದ ಪಂಚತಾರಾ ಹೋಟೆಲ್‌, ಮುಧೋಳದಲ್ಲಿ ಟ್ರೌಲ್ಟ್‌ ಗ್ರಾಸ್‌ನ ₹ 257.77 ಕೋಟಿ ವೆಚ್ಚದ ಕಂಪ್ರೆಸ್ಡ್‌ ಗ್ಯಾಸ್‌ ಘಟಕ, ತ್ಸುಯೊ ಮ್ಯಾನುಫ್ಯಾಕ್ಚರಿನ್‌ನ ₹ 250 ಕೋಟಿ ವೆಚ್ಚದಲ್ಲಿನ ವಿದ್ಯುತ್‌ಚಾಲಿತ ವಾಹನಗಳ ಮೋಟರ್‌ ಹಾಗೂ ಕಂಟ್ರೋಲರ್‌ ತಯಾರಿಕೆ ಘಟಕಗಳು ಪ್ರಮುಖವಾಗಿವೆʼ ಎಂದು ಸಚಿವರು ತಿಳಿಸಿದ್ದಾರೆ.

ʼ ₹ 50 ಕೋಟಿಗೂ ಹೆಚ್ಚು ಹೂಡಿಕೆಯ 22 ಪ್ರಮುಖ ದೊಡ್ಡ ಮತ್ತು ಮಧ್ಯಮ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿರುವುದರಿಂದ ರಾಜ್ಯದಲ್ಲಿ ₹ 3908.68 ಕೋಟಿ ಹೂಡಿಕೆ ಆಗಲಿದೆ. 12,475 ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ.

₹ 15 ಕೋಟಿಗಳಿಂದ ₹50 ಕೋಟಿ ಒಳಗಿನ ಹೂಡಿಕೆಯ 15 ಹೊಸ ಯೋಜನೆಗಳಿಗೆ ನೀಡಿರುವ ಅನುಮೋದನೆ ಫಲವಾಗಿ ₹350.60 ಕೋಟಿ ಹೂಡಿಕೆ ಆಗಲಿದ್ದು, 1,750 ಜನರಿಗೆ ಉದ್ಯೋಗಾವಕಾಶಗಳು ಸಿಗಲಿವೆ.

ʼಹೆಚ್ಚುವರಿ ಹೂಡಿಕೆಯ 2 ಯೋಜನೆಗಳಿಗೆ ನೀಡಿರುವ ಅನುಮೋದನೆಯಿಂದ ₹565.03 ಕೋಟಿ ಹೂಡಿಕೆಯಾಗಲಿದ್ದು, 300 ಜನರಿಗೆ ಉದ್ಯೋಗಾವಕಾಶ ಸಿಗಲಿವೆʼ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್‌. ಸೆಲ್ವಕುಮಾರ್‌, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾಗಿರುವ ಶ್ರೀಮತಿ ಗುಂಜನ್‌ ಕೃಷ್ಣ , ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಹಾಗೂ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

BIG NEWS: ರಾಜ್ಯದಲ್ಲೊಂದು ಅಮಾನುಷ ಘಟನೆ: ವಿದ್ಯಾರ್ಥಿ ಮೇಲೆ ‘ಮೂವರು ಶಿಕ್ಷಕ’ರು ಹಲ್ಲೆ

Share. Facebook Twitter LinkedIn WhatsApp Email

Related Posts

`CET’ ಅಭ್ಯರ್ಥಿಗಳಿಗೆ ಬಿಗ್ ಅಪ್ ಡೇಟ್ : ವೆರಿಫಿಕೇಷನ್ ಸ್ಲಿಪ್ ಡೌನ್ ಲೋಡ್ ಪ್ರಕ್ರಿಯೆ ಆರಂಭ

1 Min Read

BREAKING : ಬೆಂಗಳೂರಲ್ಲಿ ಬರ್ಬರ ಹತ್ಯೆ: ಮದುವೆ ನಿರಾಕರಿಸಿದ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಕೊಂದ ಯುವಕ.!

1 Min Read

Gold Loan : 10 ಗ್ರಾಂ ಚಿನ್ನಕ್ಕೆ ಎಷ್ಟು `ಲೋನ್’ ಸಿಗುತ್ತೆ..? ಬ್ಯಾಂಕುಗಳ ಹೊಸ ಲೆಕ್ಕಾಚಾರ ಇಲ್ಲಿದೆ..!

2 Mins Read
Recent News

ವೈದ್ಯಕೀಯ ಲೋಕದಲ್ಲಿ ಹೊಸ ಕ್ರಾಂತಿ: ವಿಶ್ವದ ಮೊದಲ ‘AI ವಿನ್ಯಾಸಿತ’ ಲಸಿಕೆ ಮಾನವರ ಮೇಲೆ ಯಶಸ್ವಿ ಪ್ರಯೋಗ!

​ಪತ್ನಿಯ ಅಗಲಿಕೆ ಬೆನ್ನಲ್ಲೇ ವಿಶ್ವ ಪರ್ಯಟನೆ ಕನಸು ತ್ಯಾಗ: ತಮಗಾಗಿ ಇಟ್ಟಿದ್ದ ₹25 ಲಕ್ಷ ಭವಿಷ್ಯ ನಿಧಿಯನ್ನು ಭಾರತೀಯ ಸೇನೆಗೆ ದೇಣಿಗೆ ನೀಡಿದ ನಿವೃತ್ತ ಬ್ಯಾಂಕ್ ಅಧಿಕಾರಿ!

`CET’ ಅಭ್ಯರ್ಥಿಗಳಿಗೆ ಬಿಗ್ ಅಪ್ ಡೇಟ್ : ವೆರಿಫಿಕೇಷನ್ ಸ್ಲಿಪ್ ಡೌನ್ ಲೋಡ್ ಪ್ರಕ್ರಿಯೆ ಆರಂಭ

​ಬೆಂಗಳೂರಿನಲ್ಲಿ ಸಿಜೆಪಿ ಪ್ರತಿಭಟನೆ: ಕಣಕ್ಕಿಳಿಯಲಿರುವ ನಟ ಪ್ರಕಾಶ್ ರಾಜ್; ‘ವೈಫಲ್ಯಗಳಿಗೆ ಸರ್ಕಾರವನ್ನೇ ಹೊಣೆ ಮಾಡಿ’ ಎಂದು ಕರೆ!

State News
KARNATAKA

`CET’ ಅಭ್ಯರ್ಥಿಗಳಿಗೆ ಬಿಗ್ ಅಪ್ ಡೇಟ್ : ವೆರಿಫಿಕೇಷನ್ ಸ್ಲಿಪ್ ಡೌನ್ ಲೋಡ್ ಪ್ರಕ್ರಿಯೆ ಆರಂಭ

By kannadanewsnow57 KARNATAKA 1 Min Read

ಬೆಂಗಳೂರು: ಯುಜಿಸಿಇಟಿ (UGCET) ಮೂಲಕ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿ ಬಯಸುವ ಅಭ್ಯರ್ಥಿಗಳಿಗೆ ಪ್ರಮುಖ ಅಪ್ಡೇಟ್ ಬಂದಿದೆ. ಪ್ರವೇಶ ಪ್ರಕ್ರಿಯೆಗೆ…

BREAKING : ಬೆಂಗಳೂರಲ್ಲಿ ಬರ್ಬರ ಹತ್ಯೆ: ಮದುವೆ ನಿರಾಕರಿಸಿದ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಕೊಂದ ಯುವಕ.!

Gold Loan : 10 ಗ್ರಾಂ ಚಿನ್ನಕ್ಕೆ ಎಷ್ಟು `ಲೋನ್’ ಸಿಗುತ್ತೆ..? ಬ್ಯಾಂಕುಗಳ ಹೊಸ ಲೆಕ್ಕಾಚಾರ ಇಲ್ಲಿದೆ..!

ALERT : `ಆಸ್ತಿ’ ಖರೀದಿಸುವ ಮುನ್ನ ಈ ಪ್ರಮುಖ ದಾಖಲೆಗಳನ್ನು ಮರೆಯದೇ ಚೆಕ್ ಮಾಡಿಕೊಳ್ಳಿ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.