ಬೆಳಗಾವಿ : ಬೆಳಗಾವಿಯಲ್ಲಿ ಘೋರ ಘಟನೆಯೊಂದು ನಡೆದಿದ್ದು, ಪ್ರೀತಿ ನಿರಾಕರಿಸಿದ ನರ್ಸ್ ಮೇಲೆ ಪಾಗಲ್ ಪ್ರೇಮಿಯೊಬ್ಬ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಖಾಸಗಿ ಆಸ್ಪತ್ರೆಯ ನರ್ಸ್ ನ ಮೇಲೆ ಪಾಗಲ್ ಪ್ರೇಮಿ ಪ್ರಕಾಶ್ ಜಾಧವ್ ಎಂಬಾತ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಪ್ರಕಾಶ್ ಜಾಧವ್ ಪ್ರೀತಿಸುವಂತೆ ನರ್ಸ್ ಹಿಂದೆ ಬಿದ್ದಿದ್ದ. ಆದರೆ ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕೈಚೀಲದಲ್ಲಿ ಮಚ್ಚು ಇಟ್ಟುಕೊಂಡು ಬಂದು ಆಸ್ಪತ್ರೆಗೆ ನುಗ್ಗಿ ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಆರೋಪಿ ಪ್ರಕಾಶ್ ಜಾಧವ್ ಆಸ್ಪತ್ರೆ ಬಳಿಯ ಕಾಲೋನಿಯ ನಿವಾಸಿಯಾಗಿದ್ದು, ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅ. 30 ರಂದು ಘಟನೆ ನಡೆದಿದೆ. ಘಟನೆ ಸಂಬಂಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.