ಕೆಎನ್ಎನ್ಡಿಜಿಟಲ್ಡೆಸ್ಕ್: ಜನರು ಕಚೇರಿ ಹೊರತುಪಡಿಸಿ ಮದುವೆಗಳು ಅಥವಾ ಇತರ ಕಾರ್ಯಕ್ರಮಗಳಿಗೆ ಹೋಗಲು ಸುಗಂಧ ದ್ರವ್ಯವನ್ನು ಬಳಸುತ್ತಾರೆ. ಅದರೆ ಇಲ್ಲೊಬ್ಬರು ಸುಗಂಧ ದ್ರವ್ಯವನ್ನು ತಯಾರು ಮಾಡಲು ಮನುಶ್ಯನ ಮೂತ್ರವನ್ನು ಬಳಕೆ ಮಾಡುತ್ತಿದ್ದರು ಎನ್ನುವ ಆಘಾತಕಾರಿ ಘಟನೆ ಹೊರಗೆ ಬಂದಿದೆ. ಹೌದು, ನಕಲಿ ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದ ಕೆಲವು ಜನರನ್ನು ಪೊಲೀಸರು ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಬಂಧಿಸಿದ್ದಾರೆ.
ಸಿಟಿ ಆಫ್ ಲಂಡನ್ ಪೊಲೀಸರ ಬೌದ್ಧಿಕ ಆಸ್ತಿ ಅಪರಾಧ ಘಟಕ (ಸಿಬಿಎಟಿಯುಟಿ) ಮಂಗಳವಾರ ಮ್ಯಾಂಚೆಸ್ಟರ್ನ ಎರಡು ವಾಣಿಜ್ಯ ಆಸ್ತಿಗಳ ಮೇಲೆ ದಾಳಿ ನಡೆಸಿ ಸುಮಾರು 400 ನಕಲಿ ಸುಗಂಧ ದ್ರವ್ಯ ಬಾಟಲಿಗಳನ್ನು ವಶಪಡಿಸಿಕೊಂಡಿದೆ ಎಂದು ಡೈಲಿ ಸ್ಟಾರ್ ಸುದ್ದಿ ವೆಬ್ಸೈಟ್ ವರದಿ ಮಾಡಿದೆ. ನಕಲಿ ಸುಗಂಧ ದ್ರವ್ಯಗಳು ನೈಜವಾಗಿ ಕಾಣುತ್ತವೆ, ಆದರೆ ಪ್ರಯೋಗಾಲಯ ಪರೀಕ್ಷೆಗಳು ಸೈನೈಡ್ನಂತಹ ಅನೇಕ ವಿಷಕಾರಿ ರಾಸಾಯನಿಕಗಳು ಅವುಗಳಲ್ಲಿ ಕಂಡುಬಂದಿವೆ ಎಂದು ಪೊಲೀಸರು ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ, ಕೆಲವು ಸುಗಂಧ ದ್ರವ್ಯಗಳಲ್ಲಿ ಮಾನವ ಮೂತ್ರದ ಕಣಗಳು ಸಹ ಕಂಡುಬಂದಿವೆಯಂತೆ.