ಕಲಬುರಗಿ : ಕಲಬುರಗಿಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ರಸ್ತೆ ಬದಿ ಮಲಗಿದ್ದ ವೃದ್ಧೆಯನ್ನು ನಾಯಿಗಳು ಕಚ್ಚಿ ಮನಕುಲುಕುವ ಘಟನೆ ನಡೆದಿದೆ.
BIGG NEWS : ರಾಜ್ಯದ ಜನತೆಗೆ ಬಿಗ್ ಶಾಕ್ : `ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್’ ಅಳವಡಿಕೆಗೆ ರಾಜ್ಯ ಸರ್ಕಾರ ಸಿದ್ಧತೆ
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಈ ಘಟನೆ ನಡೆದಿದ್ದು, ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಸಮೀಪ ರಸ್ತೆ ಬದಿ ಮಲಗಿದ್ದ ವೃದ್ಧೆಯನ್ನು ನಾಯಿಗಳು ಕಚ್ಚಿ ತಿಂದಿವೆ. ವೃದ್ಧೆ ಮಾನಸಿಕ ಅಸ್ವಸ್ಥಳಾಗಿದ್ದು, ಸಂಬಂಧಿಕರು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದರು.
ವೃದ್ಧೆಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಗಾಯಗೊಂಡಿದ್ದ ವೃದ್ಧೆಯನ್ನು ಗೂಡ್ಸ್ ವಾಹನ ಚಾಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಸಿದ್ದನು. ಗಾಯಾಳು ವೃದ್ಧೆ ಕಳೆದ ರಾತ್ರಿ ರಸ್ತೆ ಬದಿ ಮಲಗಿದಾಗ ನಾಯಿಗಳು ವೃದ್ದೆಯನ್ನು ತಿಂದಿವೆ. ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.