Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮನೆಯ ಮೇಲಿನ ನೀರಿನ ಟ್ಯಾಂಕ್‌ ನಲ್ಲಿ 27 ಹಾವಿನ ಮರಿಗಳು ಪತ್ತೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

BIG NEWS : ‘ಕಾಕ್ರೋಚ್’ ಬೆನ್ನಲ್ಲೇ ‘ಇಷ್ಕ್ ಕರೋ ಪಾರ್ಟಿ’ ಸ್ಥಾಪಿಸಿದ ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಮಾರ್ಕಂಡೇಯ ಕಾಟ್ಜು | Ishq Karo Party

Rah-Veer scheme : ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಬಂದರೆ ₹25,000 ಬಹುಮಾನ: ‘ರಹಾ-ವೀರ್’ ಯೋಜನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದ ‘ಗುತ್ತಿಗೆ ಭೂ ಮಾಪಕ’ರಿಗೆ ಶಾಕಿಂಗ್ ನ್ಯೂಸ್: ‘ಖಾಯಂ ಅಸಾಧ್ಯ’ವೆಂದ ಸಚಿವ ಕೃಷ್ಣ ಬೈರೇಗೌಡ
KARNATAKA

BIG NEWS: ರಾಜ್ಯದ ‘ಗುತ್ತಿಗೆ ಭೂ ಮಾಪಕ’ರಿಗೆ ಶಾಕಿಂಗ್ ನ್ಯೂಸ್: ‘ಖಾಯಂ ಅಸಾಧ್ಯ’ವೆಂದ ಸಚಿವ ಕೃಷ್ಣ ಬೈರೇಗೌಡ

By ವಸಂತ ಬಿ ಈಶ್ವರಗೆರೆ

ಬೆಳಗಾವಿ ಸುವರ್ಣಸೌಧ : ಪರವಾನಗಿ ಭೂ ಮಾಪಕರನ್ನು ಖಾಯಂಗೊಳಿಸುವುದು ಅಸಾಧ್ಯ. ಆದರೆ, ಅವರ ಮೇಲೆ ಸರ್ಕಾರಕ್ಕೆ ಸಹಾನುಭೂತಿ ಇದ್ದು, ಅವರ ಕಲ್ಯಾಣಕ್ಕೆ ಹಾಗೂ ಘನತೆಯ ಜೀವನಕ್ಕೆ ಉದಾರ ಮನಸ್ಸಿನೀಂದ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಮಂಗಳವಾರ ವಿಧಾನ ಪರಿಷತ್ನಲ್ಲಿ ಸದಸ್ಯರಾದ ಶಿವಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಪರವಾನಗಿ ಭೂ ಮಾಪಕರನ್ನು ಖಾಲಿ ಹುದ್ದೆಗಳನ್ನು ತುಂಬಿಸುವುದಕ್ಕಾಗಿ ಸರ್ಕಾರ ನೇಮಕ ಮಾಡಿಲ್ಲ. ಬದಲಾಗಿ ಗುತ್ತಿಗೆ ಆಧಾರದಲ್ಲಿ ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ಸರ್ವೇ ಇಲಾಖೆಯಲ್ಲಿ ಖಾಲಿ ಹುದ್ದೆಗಳೇ ಇಲ್ಲದ ಮೇಲೆ ಗುತ್ತಿಗೆ ನೌಕರರನ್ನು ಖಾಯಂ ಮಾಡುವುದು ಹೇಗೆ..?” ಎಂದು ಮರು ಪ್ರಶ್ನೆ ಹಾಕಿದರು.

“ಅಸಲಿಗೆ ಇಲಾಖೆಯಲ್ಲಿ 750 ಸರ್ಕಾರಿ ಹುದ್ದೆ ಖಾಲಿ ಇದೆ. ಆದರೆ, ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಏಕೆಂದರೆ ನಾವು ಗುತ್ತಿಗೆ ನೌಕರರನ್ನು ಖಾಯಂ ಮಾಡಲು ಮುಂದಾದರೆ ತುಂಬಾ ಪ್ರಚಲಿತದಲ್ಲಿರುವ ಉಮಾದೇವಿ ಪ್ರಕರಣ ಎದುರಾಗುತ್ತದೆ. ಈ ಪ್ರಕರಣದಲ್ಲಿ ಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಅವಕಾಶ ಇಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಅಡ್ಡ ಬರುತ್ತದೆ. ಇದಲ್ಲದೆ, ಈ ಹಿಂದೆ ಪರವಾನಗಿ ಭೂ ಮಾಪಕರು ತಮ್ಮನ್ನು ಖಾಯಂಗೊಳಿಸುವಂತೆ ಕೆಐಟಿ ಯಲ್ಲಿ ಅರ್ಜಿ ಹಾಕಿದ್ದರು. ವಾದ-ವಿವಾದ ಆಲಿಸಿದ ಕೆಐಟಿ ಸಹ ಖಾಯಂಗೊಳಿಸಲು ಬರೋದಿಲ್ಲ ಎಂದು ಆ ಮನವಿಯನ್ನೇ ತಿರಸ್ಕಾರ ಮಾಡಿದೆ. ಹೀಗಾಗಿ ಪರವಾನಗಿ ಭೂ ಮಾಪಕರನ್ನು ಖಾಯಂ ನೌಕರರಾಗಿ ನೇಮಕ ಮಾಡುವುದು ಕಾನೂನಿನ ಅಡಿಯಲ್ಲಿ ಅಸಾಧ್ಯ” ಎಂದು ವಿವರಿಸಿದರು.

“ಪರವಾನಗಿ ಭೂ ಮಾಪಕರ ಜೀವನಕ್ಕೂ ಅನುಕೂಲ ಮಾಡಿಕೊಡಬೇಕು ಎಂಬ ಸಹಾನುಭೂತಿ ಸರ್ಕಾರಕ್ಕೆ ಇದೆ. ಇದೇ ಕಾರಣಕ್ಕೆ ಅವರಿಗೆ ದರ್ಖಾಸ್ತು ಪೋಡಿ ಮಾಡಲು ಅನುಕೂಲ ಮಾಡಿಕೊಟ್ಟಿದ್ದೇವೆ. ಈ ಹಿಂದೆ ಸರ್ವೇ ಮಾಡಿದರೆ ಸರ್ವೇ ಶುಲ್ಕವನ್ನು ರೈತರು ಪಾವತಿಸುತ್ತಿದ್ದರು. ಆದರೆ, ದರ್ಖಾಸ್ತು ಪೋಡಿ ವಿಚಾರದಲ್ಲಿ ನಾವೇ ರೈತರ ಮನೆ ಬಾಗಿಲಿಗೆ ಹೋಗಿ ಸರ್ವೇ ಕೆಲಸ ಮುಗಿಸಿ ಪೋಡಿ ಮಾಡಿಕೊಡುತ್ತಿರುವ ಕಾರಣ ಅವರಿಂದ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಮಾಡಿಕೊಡುತ್ತಿದ್ದೇವೆ. ಹೀಗಾಗಿ ಸರ್ಕಾರವೇ ಪರವಾನಗಿ ನೌಕರರಿಗೆ ಆ ಶುಲ್ಕವನ್ನು ನೀಡುತ್ತಿದೆ. ಕೆರೆ ಅಳತೆ ಮಾಡಿದ್ರೂ ಸಹ ಸರ್ಕಾರಿ ಸರ್ವೇಯರ್ಗಳ ಸಂಭಾವನೆಗೆ ಸಮಾಂತರವಾಗಿ ಗೌರವ ಧನ ನೀಡುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.

“ಸರ್ಕಾರಿ ಕೆಲಸ ಮಾಡಿದ್ರೆ ಪರವಾನಗಿ ನೌಕರರಿಗೂ ಸಂಭಾವನೆ ಸಿಗಬೇಕು ಎಂದು ನಿರ್ಧಾರ ಮಾಡಿದ್ದು ಸಹ ನಾವೆ. ಮೊದಲು ಇದಕ್ಕೆ ಪ್ರಾವಿಷನ್ ಇರಲಿಲ್ಲ, ಅವರು ತಮ್ಮ ಕೆಲಸವನ್ನು ಉಚಿತವಾಗಿ ಮಾಡಬೇಕಿತ್ತು. ಆದರೆ, ನಾನು ಕಳೆದ ಏಪ್ರಿಲ್ನಲ್ಲಿ ಲೆಕ್ಕಹಾಕಿ ಉತ್ತಮವಾಗಿ ಕೆಲಸ ಮಾಡಿದವರಿಗೆ ಒಂದು ಲಕ್ಷದ ವರೆಗೆ ಹಣ ನೀಡಿದ್ದೇನೆ” ಎಂದು ತಿಳಿಸಿದರು.

ಬಾಂದ್ ಜವಾನರ ಬಗ್ಗೆಯೂ ಗಮನ ಸೆಳೆದ ಸಚಿವರು, “ಬಾಂದ್ ಜವಾನರೆಂದರೆ ಹಿಂದನ ಕಾಲದಲ್ಲಿ ಸರ್ವೇಯರ್ ಹಿಂದೆ ಸರ್ವೇ ಸಾಮಗ್ರಿಗಳನ್ನು ಎತ್ತಿಕೊಂಡು ಓಡಾಡುವವರು. ಇದು ಒಪ್ಪುವಂತಹ ಘನತೆಯ ಕೆಲಸ ಅಲ್ಲ. ಕಾಲ ಬದಲಾದಂತೆ ಎಲ್ಲರೂ ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕು. ಯಾರೂ ಯಾರಿಗೂ ಜವಾನರಾಗಿ ಬದುಕಬಾರದು. ಆ ಕೆಲಸದ ಹೆಸರೇ ಜವಾನ ಅಂತ, ಇಲ್ಲಿ ಯಾರೂ ಜವಾನರಾಗಿ ಬ್ಯಾಗು ಹೊತ್ಕೋಂಡು ಬಾಗಿಲು ಕಾಯೋ ಜವಾನತನ ಸರಿಯಲ್ಲ. ಹೀಗಾಗಿಯೇ ನಾವು ಇಂದು ಎಲ್ಲಾ ಸರ್ವೇಯರ್ಗಳಿಗೆ ಆಧುನಿಕ ತಂತ್ರಜ್ಞಾನ ನಿರ್ಮಿತ ರೋವರ್ ನೀಡುತ್ತಿದ್ದೇವೆ. ಇದು ಡಿಜಿಟಲ್ ಸರ್ವೇ ಯಂತ್ರೋಪಕರಣವಾಗಿದ್ದು, ಸರ್ವೇ ಕೆಲಸ ಮಾಡುವವರಿಗೂ ಘನತೆ ನೀಡಿದೆ” ಎಂದು ಸಂತಸ ವ್ಯಕ್ತಪಡಿಸಿದರು

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ಸಾರ್ವಜನಿಕರ ಸುರಕ್ಷತೆಗೆ ರೌಡಿಸಂಗೆ ಅಂಕುಶ : ಸರ್ಕಾರದಿಂದ ವಿಶೇಷ ರೌಡಿ ನಿಗ್ರಹ ಪಡೆ ರಚನೆ!

2 Mins Read

BREAKING : ಬೆಳಗಾವಿಯಲ್ಲಿ 1400 ಕೋಟಿ ರೂ.ವಂಚನೆ ಕೇಸ್ : ಸ್ಯಾಂಡಲ್ ವುಡ್ ನಟ, ನಟಿಯರಿಗೆ ‘CID’ ಶಾಕ್!

2 Mins Read

BREAKING : ಕೊಪ್ಪಳದಲ್ಲಿ ಹೀನ ಕೃತ್ಯ : ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!

1 Min Read
Recent News

SHOCKING : ಮನೆಯ ಮೇಲಿನ ನೀರಿನ ಟ್ಯಾಂಕ್‌ ನಲ್ಲಿ 27 ಹಾವಿನ ಮರಿಗಳು ಪತ್ತೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

BIG NEWS : ‘ಕಾಕ್ರೋಚ್’ ಬೆನ್ನಲ್ಲೇ ‘ಇಷ್ಕ್ ಕರೋ ಪಾರ್ಟಿ’ ಸ್ಥಾಪಿಸಿದ ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಮಾರ್ಕಂಡೇಯ ಕಾಟ್ಜು | Ishq Karo Party

Rah-Veer scheme : ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಬಂದರೆ ₹25,000 ಬಹುಮಾನ: ‘ರಹಾ-ವೀರ್’ ಯೋಜನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

BIG NEWS : ರಾಜ್ಯದಲ್ಲಿ ಸಾರ್ವಜನಿಕರ ಸುರಕ್ಷತೆಗೆ ರೌಡಿಸಂಗೆ ಅಂಕುಶ : ಸರ್ಕಾರದಿಂದ ವಿಶೇಷ ರೌಡಿ ನಿಗ್ರಹ ಪಡೆ ರಚನೆ!

State News
KARNATAKA

BIG NEWS : ರಾಜ್ಯದಲ್ಲಿ ಸಾರ್ವಜನಿಕರ ಸುರಕ್ಷತೆಗೆ ರೌಡಿಸಂಗೆ ಅಂಕುಶ : ಸರ್ಕಾರದಿಂದ ವಿಶೇಷ ರೌಡಿ ನಿಗ್ರಹ ಪಡೆ ರಚನೆ!

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರೌಡಿಸಂ ಹಾಗೂ ಸಮಾಜವಿರೋಧಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ…

BREAKING : ಬೆಳಗಾವಿಯಲ್ಲಿ 1400 ಕೋಟಿ ರೂ.ವಂಚನೆ ಕೇಸ್ : ಸ್ಯಾಂಡಲ್ ವುಡ್ ನಟ, ನಟಿಯರಿಗೆ ‘CID’ ಶಾಕ್!

BREAKING : ಕೊಪ್ಪಳದಲ್ಲಿ ಹೀನ ಕೃತ್ಯ : ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ನೋಂದಣಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.