ಬೆಂಗಳೂರು : ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಪಡೆದುಕೊಂಡು ಬಿಡುಗಡೆಯಾದ ತಕ್ಷಣ ಅತ್ಯಾಚಾರ ಪ್ರಕಾರದಲ್ಲಿ ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆ ಪೋಲಿಸರು ಮತ್ತೆ ಅರೆಸ್ಟ್ ಮಾಡಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಪೋಟಕ ವಾದಂತಹ ಮಾಹಿತಿ ಹೊರ ಬಿದ್ದಿದ್ದು, ಅದರಲ್ಲೂ ಮುನಿರತ್ನ ಮಾಡಿದ್ದ ಪ್ಲ್ಯಾನ್ ಗಳನ್ನ ಕೇಳಿದರೆ ಎಂಥವರಿಗೆ ಆದರೂ ಎದೆ ನಡುಗುತ್ತದೆ.
ಅದರಲ್ಲೂ ತಮ್ಮದೇ ಪಕ್ಷದಲ್ಲಿದ್ದ ವ್ಯಕ್ತಿಗಳ ಜೀವನವನ್ನೇ ಹಾಳು ಮಾಡುವ ಹುನ್ನಾರ ಶಾಸಕ ಮುನಿರತ್ನ ಮಾಡಿದ್ದಾರೆ ಎನ್ನಲಾಗಿದೆ. ಹೌದು ವಿಪಕ್ಷ ನಾಯಕರಾದ ಆರ್ ಅಶೋಕ್ ಅವರಿಗೆನೆ ಬಿಜೆಪಿ ಶಾಸಕ ಮುನಿರತ್ನ ಏಡ್ಸ್ ರಕ್ತದ ಇಂಜೆಕ್ಟ್ ಮಾಡಲು ಹೋಗಿದ್ರಂತೆ.
ಈ ಒಂದು ವಿಷಯ ತಿಳಿದು ತಕ್ಷಣನಾಯಕ ಆರ್ ಅಶೋಕ್ ಸಹಜವಾಗಿ ಬೆಚ್ಚಿಬಿದ್ದಿದ್ದಾರೆ.
ಈ ವಿಚಾರವಾಗಿ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಮುನಿರತ್ನ ಅವರನ್ನ ನಾವ್ಯಾರು ಬೆಂಬಲಿಸಲ್ಲ. ಉಪ್ಪು ತಿಂದವ ನೀರು ಕುಡಿಯಲೇಬೇಕು. ಈ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ಆಗ ಸತ್ಯಾಸತ್ಯತೆ ಹೊರಗೆ ಬರುತ್ತದೆ. ರಾಜಕೀಯದಲ್ಲಿ ಈ ರೀತಿಯ ಘಟನೆಗಳು ನಡೆದರೆ ಯಾವ ರಾಜಕಾರಣಿಯೂ ಬದುಕುವುದಿಲ್ಲ. ನಮ್ಮ ಪಕ್ಷಕ್ಕೆ ಮುನಿರತ್ನ ಅವರು ಬಂದು ಐದು ವರ್ಷಗಳಾಗಿವೆ. ಕಾಂಗ್ರೆಸ್ ನಲ್ಲಿ 30 ವರ್ಷವಿದ್ದರು. ನಾವೂ ಮಂತ್ರಿಗಳಾಗಿ, ಶಾಸಕರಾಗಿ ಕೆಲಸ ಮಾಡಲು ಭಯವಾಗುತ್ತಿದೆ ಎಂದರು.
ಅಶೋಕ್ ಗೆ ಶಾಕ್!
ವಿಪಕ್ಷ ನಾಯಕ ಆರ್ ಅಶೋಕ್ ಅವರ ಹುಟ್ಟುಹಬ್ಬಕ್ಕೆ ಹೂಗುಚ್ಛ ನೀಡುವ ಪ್ಲ್ಯಾನ್ ಮಾಡಿಕೊಂಡಿದ್ದವ, ಕೈಗೆ ಗ್ಲೌಸ್ ಹಾಕಿಕೊಂಡು, ಅದರಲ್ಲಿ ಬ್ಲೇಡ್ ಅಳವಡಿಸಿಕೊಂಡು, ಆ ಗ್ಲೌಸ್ ನಲ್ಲಿ ಹೆಚ್‌ಐವಿ ಸೋಂಕಿತನ ರಕ್ತದ ಟ್ಯೂಬ್ ಇಟ್ಟುಕೊಂಡು, ಆ ರಕ್ತವನ್ನು ಆರ್ ಅಶೋಕ್ ಅವರಿಗೆ ಇಂಜೆಕ್ಟ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿದ್ದರಂತೆ. ಈ ವಿಚಾರ ಕೇಳಿ ಆರ್ ಅಶೋಕ್ ಅವರಿಗೆ ದಿಗಿಲು ಬಡಿದಂತಾಗಿದೆ.