ಧಾರವಾಡ : ಧಾರವಾಡದಲ್ಲಿ ವಿಚಿತ್ರವಾದಂತಹ ಘಟನೆ ಒಂದು ನಡೆದಿದ್ದು, ಇಬ್ಬರು ಮಹಿಳೆಯರು ಪರಪುರುಷರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಹೆತ್ತ ಮಕ್ಕಳನ್ನೇ ಕಿಡ್ನ್ಯಾಪ್ ಮಾಡಿ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.ಇದೀಗ ಬೆಂಗಳೂರಿನಲ್ಲಿ ಮಕ್ಕಳ ಸಮೇತ ಇಬ್ಬರು ತಾಯಂದಿರು ಹಾಗೂ ಅವರ ಪ್ರಿಯಕರರು ಪತ್ತೆಯಾಗಿದ್ದು, ಪೊಲೀಸರು 6 ಮಕ್ಕಳು ರಕ್ಷಣೆ ಮಾಡಿ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ರೇಷ್ಮಾ ಮತ್ತು ಪ್ರಿಯಾಂಕ ಎಂಬವರಿಂದ ಕಿಡ್ನ್ಯಾಪ್ ನಡೆದಿದೆ ಎಂದು ತಿಳಿದುಬಂದಿದೆ. ಮಕ್ಕಳನ್ನು ಹಾಸ್ಟೆಲಿಗೆ ಸೇರಿಸುವುದಾಗಿ ಕರೆದೋಯ್ದಿದ್ದರು. ನವೆಂಬರ್ 7 ರದ್ದು ಇಬ್ಬರು ತಾಯಂದಿರು ಹಾಗೂ 6 ಮಕ್ಕಳು ನಾಪತ್ತೆಯಾಗುತ್ತಾರೆ. ಈ ಕುರಿತಂತೆ ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗುತ್ತದೆ.
ಇದೀಗ ವಿದ್ಯಾಗಿರಿ ಠಾಣೆಯ ಪೊಲೀಸರು ನಾಪತ್ತೆಯಾಗಿದ್ದ 6 ಮಕ್ಕಳ ರಕ್ಷಣೆ ಮಾಡಿದ್ದಾರೆ. ರೇಷ್ಮಾ, ಪ್ರಿಯಾಂಕಾ ಸಾಂಬ್ರಾಣಿ ಎಂಬುವುದರಿಂದ ಈ ಒಂದು ಅಪಹರಣ ಕೃತ್ಯ ನಡೆದಿದೆ. ಅನ್ಯ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಮುತ್ತುರಾಜ್ ಸುನಿಲ್ ಎಂಬಾತರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಪ್ರಿಯಕರರ ಜೊತೆಗೆ ಮಕ್ಕಳ ಸಮೇತ ಮಹಿಳೆಯರು ನಾಪತ್ತೆಯಾಗಿದ್ದರು.
ಬಳಿಕ ಕುಟುಂಬಸ್ಥರಿಗೆ ಫೋನ್ ಮಾಡಿ 10 ಲಕ್ಷಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಹಣಕ್ಕೆ ಬೇಡಿಕೆ ಬರುತ್ತಿದ್ದಂತೆ ಪೊಲೀಸರು ಕೇಸ್ ದಾಖಲಿಸಿದ್ದರು.ಕೇಸ್ ದಾಖಲಾದ ಬಳಿಕ ವಿದ್ಯಾಗಿರಿ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ ಬಳಿಕ ಹೆತ್ತ ತಾಯಿಯಂದಿರೆ 6 ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಪ್ರಿಯಕರ ಜೊತೆಗೆ ಪರಾರಿಯಾಗಿ ಕುಟುಂಬಸ್ಥರಿಗೆ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಬಳಿಕ ಇಬ್ಬರು ತಾಯಂದಿರು ಪ್ರಿಯಕರ ಸಮೇತ ಹಾಗೂ ಮಕ್ಕಳ ಸಮೇತ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ ಸದ್ಯ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.