Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಫಿಫಾ ವಿಶ್ವಕಪ್ 2026: ಫುಟ್ಬಾಲ್ ಅಭಿಮಾನಿಗಳಿಗೆ ಬಿಗ್ ಶಾಕ್: ಕ್ರೀಡಾಂಗಣದಲ್ಲಿ ನೀರಿನ ಬಾಟಲಿಗಳಿಗೆ ನಿಷೇಧ !

​ಅಪ್ಪುಗೆಯಲ್ಲೇ ಪ್ರಾಣಬಿಟ್ಟ ದಂಪತಿ, ಕಣ್ಣೀರು ತರಿಸುವ ದೃಶ್ಯ: ದೆಹಲಿ ಹೋಟೆಲ್ ದುರಂತದ ಕರಾಳ ಮುಖ!

​ಇರಾನ್ ವಿರುದ್ಧದ ಯುದ್ಧದ ಅಧಿಕಾರಕ್ಕೆ ಕಡಿವಾಣ: ಅಮೆರಿಕ ಸಂಸತ್ತಿನ ಕೆಳಮನೆಯಲ್ಲಿ ನಿರ್ಣಯ ಅಂಗೀಕಾರ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಾದ್ಯಂತ ಬಿಸಿಲ ತಾಪಮಾನ ಹೆಚ್ಚಳ : ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಮಾರ್ಗಸೂಚಿ ಪ್ರಕಟ.!
KARNATAKA

ರಾಜ್ಯಾದ್ಯಂತ ಬಿಸಿಲ ತಾಪಮಾನ ಹೆಚ್ಚಳ : ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಮಾರ್ಗಸೂಚಿ ಪ್ರಕಟ.!

By kannadanewsnow57

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ತಾಪ ಹೆಚ್ಚುತ್ತಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಾಸನ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯು ‘ಸಾರ್ವಜನಿಕ ಆರೋಗ್ಯ ಸಲಹೆ’ಗಳನ್ನು ಬಿಡುಗಡೆ ಮಾಡಿದೆ. ಬಿಸಿಗಾಳಿ ಹಾಗೂ ಅತಿಯಾದ ಉಷ್ಣತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ.

ಸಾರ್ವಜನಿಕರಿಗೆ ಪ್ರಮುಖ ಸೂಚನೆಗಳು (ಏನು ಮಾಡಬೇಕು?):

ಹೆಚ್ಚು ನೀರು ಕುಡಿಯಿರಿ: ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಕುಡಿಯುತ್ತಿರಬೇಕು. ಪ್ರಯಾಣದ ಸಮಯದಲ್ಲಿ ಕುಡಿಯುವ ನೀರನ್ನು ಜೊತೆಯಲ್ಲಿಟ್ಟುಕೊಳ್ಳಿ.

ಪೌಷ್ಟಿಕ ದ್ರವಾಹಾರ: ಮನೆಯಲ್ಲಿ ತಯಾರಿಸಿದ ಮಜ್ಜಿಗೆ, ಲಸ್ಸಿ, ನಿಂಬೆ ಹಣ್ಣಿನ ಶರಬತ್ತು, ಎಳನೀರು ಮತ್ತು ಹಣ್ಣಿನ ಜ್ಯೂಸ್‌ಗಳನ್ನು ಸೇವಿಸಿ. ಓ.ಆರ್.ಎಸ್ (ORS) ದ್ರಾವಣದ ಬಳಕೆ ಉತ್ತಮ.

ಉಡುಗೆ-ತೊಡುಗೆ: ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಬಿಸಿಲಿನಲ್ಲಿ ಹೋಗುವಾಗ ಛತ್ರಿ, ಟೋಪಿ ಅಥವಾ ತಲೆಗೆ ಪಂಚೆ/ಟವೆಲ್ ಬಳಸುವುದನ್ನು ಮರೆಯಬೇಡಿ.

ಆಹಾರ ಕ್ರಮ: ಕಲ್ಲಂಗಡಿ, ಕರ್ಬೂಜ, ಕಿತ್ತಳೆ, ದ್ರಾಕ್ಷಿ, ಸೌತೆಕಾಯಿ ಹಾಗೂ ಹೆಚ್ಚು ನೀರಿನಾಂಶವಿರುವ ತರಕಾರಿಗಳನ್ನು ಹೆಚ್ಚಾಗಿ ಬಳಸಿ.

ಏನು ಮಾಡಬಾರದು? (ಮುನ್ನೆಚ್ಚರಿಕೆ):

ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ.

ಮಧ್ಯಾಹ್ನದ ಸಮಯದಲ್ಲಿ ಕಠಿಣ ಶ್ರಮದಾಯಕ ಕೆಲಸಗಳನ್ನು ಮಾಡಬೇಡಿ.

ಖಾಲಿ ಕಾಲಿನಲ್ಲಿ ಹೊರಗೆ ಹೋಗಬೇಡಿ; ಕಡ್ಡಾಯವಾಗಿ ಪಾದರಕ್ಷೆ ಧರಿಸಿ.

ಮದ್ಯಪಾನ, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ಪಾನೀಯಗಳನ್ನು (ತಂಪು ಪಾನೀಯ) ಅವಾಯ್ಡ್ ಮಾಡಿ, ಇವು ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ.

ವಾಹನಗಳ ಒಳಗೆ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಟ್ಟು ಹೋಗಬೇಡಿ.

ಉದ್ಯೋಗದಾತರು ಮತ್ತು ಕಾರ್ಮಿಕರಿಗೆ ಸೂಚನೆ:

ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿ. ಪ್ರತಿ ೨೦ ನಿಮಿಷಕ್ಕೊಮ್ಮೆ ನೀರು ಕುಡಿಯಲು ಕಾರ್ಮಿಕರಿಗೆ ಸೂಚಿಸಬೇಕು.

ಹೊರಾಂಗಣ ಕೆಲಸ ಮಾಡುವವರಿಗೆ ಪ್ರತಿ ಒಂದು ಗಂಟೆಗೆ ೫ ನಿಮಿಷಗಳ ವಿಶ್ರಾಂತಿ ನೀಡಬೇಕು.

ಕಠಿಣ ಕೆಲಸಗಳನ್ನು ಬೆಳಿಗ್ಗೆ ಅಥವಾ ಸಂಜೆಯ ಅವಧಿಯಲ್ಲಿ ನಿರ್ವಹಿಸುವಂತೆ ವೇಳಾಪಟ್ಟಿ ಸಿದ್ಧಪಡಿಸಿ.

4. ತಾಪಾಘಾತದ (Heatstroke) ಲಕ್ಷಣಗಳು ಕಂಡರೆ ಕೂಡಲೇ ಎಚ್ಚೆತ್ತುಕೊಳ್ಳಿ:

ಒಂದು ವೇಳೆ ವ್ಯಕ್ತಿಯಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಅದು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿರುತ್ತದೆ:

ಅತಿಯಾದ ಜ್ವರ (104°F ಅಥವಾ ಅದಕ್ಕಿಂತ ಹೆಚ್ಚು).

ತಲೆತಿರುಗುವಿಕೆ, ಪ್ರಜ್ಞೆ ತಪ್ಪುವುದು ಅಥವಾ ಗೊಂದಲಕ್ಕೊಳಗಾಗುವುದು.

ವಾಂತಿ ಅಥವಾ ವಾಕರಿಕೆ.

ತೀವ್ರ ತಲೆನೋವು ಮತ್ತು ಸ್ನಾಯು ಸೆಳೆತ.

ತುರ್ತು ಕ್ರಮ: ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಕರೆದೊಯ್ಯಿರಿ, ಒದ್ದೆ ಬಟ್ಟೆಯಿಂದ ಮೈ ಒರೆಸಿ ಮತ್ತು ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ.

Rising temperatures across the state: Health Department issues important guidelines to the public!
Share. Facebook Twitter LinkedIn WhatsApp Email

Related Posts

ಜಮೀರ್‌ಗೆ ಡಿಸಿಎಂ ಸ್ಥಾನಕ್ಕಾಗಿ ಪಟ್ಟು: ಮಂಡ್ಯದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ

2 Mins Read

ಚಾಮರಾಜನಗರದಲ್ಲಿ ಉಡ ಮಾರಾಟ, ಸಾಗಾಣಿಕೆಗೆ ಯತ್ನಿಸಿದ ಇಬ್ಬರ ಬಂಧನ

1 Min Read

ಗಮನಿಸಿ: ಈ ರೈಲುಗಳ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ, ಭಾಗಶಃ ರದ್ದು

2 Mins Read
Recent News

​ಫಿಫಾ ವಿಶ್ವಕಪ್ 2026: ಫುಟ್ಬಾಲ್ ಅಭಿಮಾನಿಗಳಿಗೆ ಬಿಗ್ ಶಾಕ್: ಕ್ರೀಡಾಂಗಣದಲ್ಲಿ ನೀರಿನ ಬಾಟಲಿಗಳಿಗೆ ನಿಷೇಧ !

​ಅಪ್ಪುಗೆಯಲ್ಲೇ ಪ್ರಾಣಬಿಟ್ಟ ದಂಪತಿ, ಕಣ್ಣೀರು ತರಿಸುವ ದೃಶ್ಯ: ದೆಹಲಿ ಹೋಟೆಲ್ ದುರಂತದ ಕರಾಳ ಮುಖ!

​ಇರಾನ್ ವಿರುದ್ಧದ ಯುದ್ಧದ ಅಧಿಕಾರಕ್ಕೆ ಕಡಿವಾಣ: ಅಮೆರಿಕ ಸಂಸತ್ತಿನ ಕೆಳಮನೆಯಲ್ಲಿ ನಿರ್ಣಯ ಅಂಗೀಕಾರ!

ಜಮೀರ್‌ಗೆ ಡಿಸಿಎಂ ಸ್ಥಾನಕ್ಕಾಗಿ ಪಟ್ಟು: ಮಂಡ್ಯದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ

State News
KARNATAKA

ಜಮೀರ್‌ಗೆ ಡಿಸಿಎಂ ಸ್ಥಾನಕ್ಕಾಗಿ ಪಟ್ಟು: ಮಂಡ್ಯದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಸಚಿವ ಸಂಪುಟ ಕಸರತ್ತು ತೀವ್ರಗೊಂಡಿದ್ದು, ಮಂಡ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ…

ಚಾಮರಾಜನಗರದಲ್ಲಿ ಉಡ ಮಾರಾಟ, ಸಾಗಾಣಿಕೆಗೆ ಯತ್ನಿಸಿದ ಇಬ್ಬರ ಬಂಧನ

ಗಮನಿಸಿ: ಈ ರೈಲುಗಳ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ, ಭಾಗಶಃ ರದ್ದು

ಮುಂದಿನ 6 ದಿನ ಕರ್ನಾಟಕದಾದ್ಯಂತ ಭಾರೀ ಮಳೆ: ಯೆಲ್ಲೋ, ಆರೇಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.