ಬೆಂಗಳೂರು : ಮೊಬೈಲ್ ಬಿಟ್ಟು ಓದಿಕೋ ಎಂದು ತಾಯಿ ಬುದ್ದಿಮಾತು ಹೇಳಿದಕ್ಕೆ ಬೇಸರಗೊಂಡ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರಿಶಿಣಕುಂಟೆ ಗ್ರಾಮದಲ್ಲಿ ನಡೆದಿದೆ.
ಆದರ್ಶನಗರ ನಿವಾಸಿ ಪುಷ್ಪಾ ಅವರ ಮಗ ಶಶಾಂಕ (19) ಮೃತ ಯುವಕ, ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಶಶಾಂಕ್ ಗೆ ಪರಿಕ್ಷೆ ಹಿನ್ನೆಲೆಯಲ್ಲಿ ರಜೆ ನೀಡಲಾಗಿತ್ತು. ಓದಿಕೊಳ್ಳದೆ ಮನೆಯಲ್ಲಿ ಮೊಬೈಲ್ ಗೇಮ್ ಆಡಿಕೊಂಡಿದ್ದ ಇದೇ ವಿಚಾರವಾಗಿ ಮಂಗಳವಾರ ರಾತ್ರಿ ತಾಯಿ ಪರೀಕ್ಷೆಗೆ ಓದಿಕೋ ಎಂದು ಬುದ್ದಿ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಶಶಾಂಕ್ ರೂಮ್ ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.ೆ