ಉತ್ತರ ಪ್ರದೇಶದ ಕನ್ನೌಜ್ನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ತಂಗಿಯನ್ನು ಮದುವೆಯಾಗಬೇಕು ಎಂದು ಟವರ್ ಏರಿದ ಘಟನೆ ನಡೆದಿದೆ.
ಆ ವ್ಯಕ್ತಿಯನ್ನು ರಾಜ್ ಸಕ್ಸೇನಾ ಎಂದು ಗುರುತಿಸಲಾಗಿದ್ದು, ಅವರು 2021 ರಲ್ಲಿ ಮೊದಲು ಮಹಿಳೆಯನ್ನು ಮದುವೆಯಾಗಿದ್ದರು. ಮದುವೆಯಾದ ಒಂದು ವರ್ಷದ ನಂತರ ಸಕ್ಸೇನಾ ಅವರ ಮೊದಲ ಪತ್ನಿ ಅನಾರೋಗ್ಯದಿಂದ ನಿಧನರಾದರು ಮತ್ತು ನಂತರ ಅವರು ಆಕೆಯ ಸಹೋದರಿಯನ್ನು ವಿವಾಹವಾಗಿದ್ದರು. ಎರಡನೇ ಮದುವೆಯಾದ ರಾಜ್ ಸಕ್ಸೇನಾ ಬಳಿಕ ಹೆಂಡತಿಯ ಕೊನೆ ತಂಗಿ ಮೇಲೂ ಕಣ್ಣು ಹಾಕಿದ್ದಾನೆ. ಎರಡು ವರ್ಷಗಳಿಗೂ ಹೆಚ್ಚು ಕಾಲ, ಸಕ್ಸೇನಾ ತನ್ನ ಹೆಂಡತಿಯ ತಂಗಿಯನ್ನು ಪ್ರೀತಿಸುತ್ತಿದ್ದನು ಮತ್ತು ಅವಳನ್ನು ಮದುವೆಯಾಗಬೇಕೆಂದು ಒತ್ತಾಯಿಸಿದನು ಎಂದು ವರದಿಯಾಗಿದೆ.
ಮದುವೆಯಾಗಲು ಒತ್ತಾಯಿಸಿ, ಆ ಯುವಕ ರಸೂಲ್‌ಪುರ ಗ್ರಾಮದ ಹೊಲದಲ್ಲಿರುವ HT ಲೈನ್ ಟವರ್ ಹತ್ತಿದನು. ಅವನು ಟವರ್ ಹತ್ತಿ ಆರು ಗಂಟೆಗಳ ಕಾಲ ನಿಂತು ಹಠ ಹಿಡಿದಿದ್ದಾನೆ. ನಂತರ ತನ್ನ ಹೆಂಡತಿಯ ತಂಗಿಯನ್ನು ಸ್ಥಳದಲ್ಲೇ ಕರೆಸಲಾಯಿತು, ಮತ್ತು ಅವರಿಂದ ಮದುವೆಯ ಭರವಸೆ ಪಡೆದ ನಂತರ, ಅವನು ಟವರ್‌ನಿಂದ ಕೆಳಗೆ ಬಂದನು.
ಪ್ರದೇಶದ ಕಲ್ಯಾಣಪುರ ಗ್ರಾಮದ ನಿವಾಸಿ ಲಾಲ್ಮನ್ ಸಕ್ಸೇನಾ ಅವರ ಮಗ 22 ವರ್ಷದ ನವಲ್ ಕಿಶೋರ್ ಸಕ್ಸೇನಾ ಗುರುವಾರ ಬೆಳಿಗ್ಗೆ 9 ಗಂಟೆಗೆ ರಸೂಲ್‌ಪುರ ಗ್ರಾಮದ ಹೊಲಗಳ ಮಧ್ಯದಲ್ಲಿರುವ HT ಲೈನ್ ಟವರ್ ಹತ್ತಿದನು. ಅವನು ಟವರ್‌ನ ಮೇಲ್ಭಾಗದಲ್ಲಿ ಕುಳಿತನು. ನವಲ್ ಕಿಶೋರ್ ಅವರ ವೀರುಗಿರಿಯನ್ನು ನೋಡಿ, ಸ್ಥಳದಲ್ಲಿ ಜನಸಮೂಹ ಜಮಾಯಿಸಿತು. ಮಾಹಿತಿ ಪಡೆದ ಎಸ್‌ಐ ದಯಾಶಂಕರ್ ಪಾಂಡೆ ಕೂಡ ಸ್ಥಳಕ್ಕೆ ಬಂದರು. ಪೊಲೀಸರು ಮತ್ತು ಗ್ರಾಮಸ್ಥರು ನವಲ್ ಕಿಶೋರ್‌ಗೆ ಕೆಳಗಿಳಿಯುವಂತೆ ಮನವಿ ಮಾಡುತ್ತಲೇ ಇದ್ದರು, ಬಳಿಕ ಯುವತಿಯನ್ನು ಕರೆಸಿ ಮದುವೆಯಾಗು ಭರವಸೆ ನೀಡಿದ ಬಳಿಕ ಟವರ್ ನಿಂದ ಕೆಳಗಿಳಿದಿದ್ದಾನೆ.
*कन्नौज : साली से शादी करने की जिद पर अड़ा जीजा*..
शादी की जिद में जीजा एचटी टावर पर चढ़ा
टावर पर चढ़कर युवक का हाईवोल्टेज ड्रामा,
साली से शादी की जिद पर पत्नी से विवाद,
मौके पर पुलिस युवक को उतारने में जुटी,
छिबरामऊ कोतवाली के रसूलपुर का मामला,@kannaujpolice @adgzonekanpur pic.twitter.com/MKP17N5XSt— Shubham Pathak (@Shubham80638646) August 28, 2025