ಕಲಬುರ್ಗಿ : ಇತ್ತೀಚಿನ ದಿನಗಳಲ್ಲಿ ಯುವತಿಯರ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಆದರೆ ಇದೀಗ ಚಲಿಸುತ್ತಿರುವ ಕೆಎಸ್ಆರ್ಟಿಸಿ ಬಸ್ ನಲ್ಲಿ ಯುವಕನೊಂದಿಗೆ ವ್ಯಕ್ತಿ ಒಬ್ಬ ಅಸಭ್ಯವಾಗಿ ವರ್ತನೆ ತೋರಿರುವ ಘಟನೆ ಗುಲ್ಬರ್ಗದಿಂದ ವಿಜಯಪುರಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಈ ಒಂದು ಘಟನೆ ನಡೆದಿದೆ.
ಘಟನೆ ಕುರಿತು ಯುವಕ ವಿಡಿಯೋ ಮಾಡಿದ್ದು, ವ್ಯಕ್ತಿಯನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾನೆ. ತನ್ನ ಇನ್ಸ್ಟಾಗ್ರಾಮ್ ಖಾತೆ __saqlain_103__ ಎಂಬ ಈ ಒಂದು ವಿಡಿಯೋ ಪೋಸ್ಟ್ ಮಾಡಿರುವ ಯುವಕ, ಇದನ್ನ ನೋಡಿ, ನಾನು ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅವನ ತಲೆ ನಿದ್ರೆಯಲ್ಲಿ ನನ್ನ ಕಡೆಗೆ ಇತ್ತು. ನಿಮ್ಮ ಮನೆಯ ಹೆಂಗಸರು ಮತ್ತು ಹುಡುಗಿಯರು ರಾತ್ರಿಯಲ್ಲಿ ಪ್ರಯಾಣಿಸುವುದನ್ನು ತಡೆಯಲು ಎಲ್ಲರೂ ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕೆಂದು ನಾನು ವಿನಂತಿಸುತ್ತೇನೆ.
ಆ ವ್ಯಕ್ತಿ ಗುಲ್ಬರ್ಗದಿಂದ ಬಿಜಾಪುರಕ್ಕೆ ಹೋಗುವ ಬಸ್ ಹತ್ತಿದ್ದ. ಈ ಜಗತ್ತಿನಲ್ಲಿ ಹುಡುಗರು ಅಥವಾ ಹುಡುಗಿಯರು ಇಬ್ಬರೂ ಸುರಕ್ಷಿತವಾಗಿಲ್ಲ ಎಂದು ಎಲ್ಲರಿಗೂ ತಿಳಿಯಬೇಕೆಂದು ನಾನು ಈ ವೀಡಿಯೊವನ್ನು ಪೋಸ್ಟ್ ಮಾಡುತ್ತಿದ್ದೇನೆ. ಎಲ್ಲಾ ಸಹೋದರ ಸಹೋದರಿಯರೇ, ನಿಮ್ಮ ಬಗ್ಗೆ ಕಾಳಜಿ ವಹಿಸಿ ಮತ್ತು ಸಾಧ್ಯವಾದಷ್ಟು ಹಂಚಿಕೊಳ್ಳಿ ಎಂದು ಯುವಕ ಬರೆದುಕೊಂಡಿದ್ದಾನೆ.
https://www.instagram.com/reel/DY770gRSt_F/?igsh=MWxmZ2VrdHZhOGo2cQ==








