ಗದಗ : ನಮ್ಮ ಭಾರತೀಯ ಆಹಾರ ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಊಟ ಆದ ಮೇಲೆ ಬಾಳೆಹಣ್ಣು, ಅಥವಾ ಎಲೆ ಅಡಿಕೆ ತಿನ್ನುವ ರೂಢಿ ಇದೆ ಏಕೆಂದರೆ, ಊಟ ಆದ ನಂತರ ಬಾಳೆಹಣ್ಣು ಅಥವಾ ಎಲೆ ಅಡಿಕೆ ತಿಂದರೆ ಚಯಾಪಚಯ ಕ್ರಿಯೆ ಸುಲಭವಾಗಿ ಆಗಿ ಯಾವುದೇ ರೀತಿಯಾದ ಗ್ಯಾಸ್ಟ್ರಿಕ್ ಸಮಸ್ಯೆ ಇರುವುದಿಲ್ಲ ಎನ್ನುವುದು ನಮ್ಮ ಹಿರಿಯರು ಮಾಡಿಕೊಂಡು ಬಂದಂತಹ ಸಂಪ್ರದಾಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಒಂದು ಅಡಿಕೆಗಳಲ್ಲೂ ಕೂಡ ಕೆಮಿಕಲ್ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು ಗದಗದಲ್ಲಿ ಅಡಿಕೆಗಳಿಗೆ ಕೆಂಪು ಕಲರ್ ಕೆಮಿಕಲ್ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಹೌದು ಊಟ ಆದ್ಮೇಲೆ ಎಲೆ ಅಡಿಕೆ ಹಾಕೋಣ ಅನ್ನೋರಿಗೆ ಶಾಕ್ ಎದುರಾಗಿದ್ದು, ಬೀಡಾ, ಎಲೆ ಅಡಿಕೆ ತಿನ್ನೋರು ಈ ಸುದ್ದಿ ಒಮ್ಮೆ ನೋಡಲೇಬೇಕು. ಈ ಅಡಿಕೆ ತಿಂದರೆ ನಿಮ್ಮ ಪ್ರಾಣಕ್ಕೆ ಕುತ್ತು ಬರೋದು ಗ್ಯಾರಂಟಿ. ಬಾಯಿ ಕೆಂಪಾಗಿಸುವ ಈ ಅಡಿಕೆ ತಿಂದರೆ ಜೀವಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಅಡಿಕೆ ಕೆಂಪು ಸುಂದರಿಂತೆ ಕಾಣುವುದಕ್ಕೆ ಕಲರ್ ಮಿಕ್ಸ್ ಮಾಡಲಾಗುತ್ತಿದೆ. ಗದಗ ನಗರದಲ್ಲಿ ರಾಜಾರೋಷವಾಗಿ ಅಡಿಕೆಗಳಿಗೆ ಕಲರ್ ಮಿಕ್ಸ್ ಮಾಡುತ್ತಿದ್ದಾರೆ.
ಕೆಮಿಕಲ್ ಕಲರ್ ಮಿಶ್ರಿತ ಅಡಕೆ ತಿಂದರೆ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಕಳಪೆ ಅಡಿಕೆಗೆ ಕೆಮಿಕಲ್ ಕೆಂಪು ಕಲರ್ ಹಾಕಿ ಸೇಲ್ ಮಾಡಲಾಗುತ್ತಿದೆ. ಲಕಲಕ ಹೊಳೆಯೋ ಅಡಿಕೆಗೆ ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ್ ಇದೆ. ಕ್ವಾಲಿಟಿ ಕೂಡ ಚೆನ್ನಾಗಿರುತ್ತೆ ಅಂತ ಅಡಿಕೆ ತಿನ್ನುವವರು ತೆಗೆದುಕೊಳ್ಳುತ್ತಾರೆ ಆಕರ್ಷಕವಾಗಿ ಈ ಅಡಿಗೆ ಇದ್ದು ಹಾಗಾಗಿ ಜನರು ಇದನ್ನು ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿಸುತ್ತಿದ್ದು, ಗದಗದಲ್ಲಿ ಅಡಿಕೆಯಲ್ಲಿ ಕಲರ್ ಮಿಕ್ಸಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಲೈಸೆನ್ಸ್ ಪರವಾನಿಗೆ ಪಡೆಯದೆ ಅಕ್ರಮವಾಗಿ ಅಡಿಕೆ ಮಾರಾಟ ಮಾಡುತ್ತಿದ್ದು ಬೆಳಕಿಗೆ ಬಂದಿದೆ.