ವಿಜಯಪುರ : ವಿಜಯಪುರದಲ್ಲಿ ಘೋರ ದುರಂತ ಒಂದು ನಡೆದಿದ್ದು ಕ್ರಿಕೆಟ್ ಪಂದ್ಯ ಗೆದ್ದ ಸಂಭ್ರಮದಲ್ಲಿ ಇದ್ದಾಗ ಕುಸಿದು ಬಿದ್ದು ಪಟ್ಟಣ ಪಂಚಾಯತ್ ಸದಸ್ಯ ಒಬ್ಬರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಕೋಲಾರ ಪಟ್ಟಣದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನ ತೌಸಿಫ್ ಗಿರಗಾವಿ ಎಂದು ತಿಳಿದುಬಂದಿದೆ.
ಕೋಲಾರ ಪಟ್ಟಣ ಪಂಚಾಯಿತಿ 16ನೇ ವಾರ್ಡಿನ ಸದಸ್ಯ ಆಗಿರುವ ತೌಸಿಫ್ ಗಿರಾಗಾವಿ ತಲೆ ಸುತ್ತಿ ಏಕಾಏಕಿ ಮೈದಾನದಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದರೆ. ಕೋಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.








