ಉಡುಪಿ : ಉಡುಪಿಯಲ್ಲಿ ಘೋರ ಘಟನೆ ನಡೆದಿದ್ದು, ಮರದಲ್ಲಿ ಮಾವಿನಕಾಯಿ ಕೀಳುವಾಗ ವಿದ್ಯುತ್ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಹಿಂಬಾಗದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ಅಲೆವುರು ನಿವಾಸಿ ಸದಾನಂದ ದೇವಾಡಿಗ (55) ಎಂದು ತಿಳಿದು ಬಂದಿದೆ. ಗ್ರಾಮ ಸಹಾಯಕನಾಗಿ ಸದಾನಂದ ದೇವಾಡಿಗ ಕೆಲಸ ಮಾಡುತ್ತಿದ್ದರು. ಮಾವಿನ ಕಾಯಿ ಕೀಳುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ದುರಂತ ಸಂಭವಿಸಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








