ತುಮಕೂರು : ಶಿಕ್ಷಕರ ನಿರ್ಲಕ್ಷಕ್ಕೆ ವಿದ್ಯಾರ್ಥಿನಿಯ ಬೆರಳು ಕಟ್ ಆಗಿದ್ದು ಒಂದನೇ ತರಗತಿ ವಿದ್ಯಾರ್ಥಿನಿ ಎರಡು ಕೈ ಬೆರಳು ಕಳೆದುಕೊಂಡಿರುವ ಘಟನೆ ತುಮಕೂರು ತಾಲೂಕಿನ ಗೂಳೂರು ಶಾಲೆಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ಶಿಕ್ಷಕರ ನಿರ್ಲಕ್ಷಕ್ಕೆ ಬಾಲಕಿ ಚಿನ್ಮಯಿ ದೇವಿ ಬಲಗೈನ ಎರಡು ಬೆರಳುಗಳು ಕಟ್ ಆಗಿವೆ. ಸರ್ಕಾರಿ ಶಾಲಾ ಶಿಕ್ಷಕರ ಬೇಜವಾಬ್ದಾರಿ ಆರೋಪ ಕೇಳಿ ಬಂದಿದೆ. ಬಿಸಿ ಊಟ ನೀಡುವ ಬೆಳೆ ಕ್ಯೂ ನಲ್ಲಿ ವಿದ್ಯಾರ್ಥಿನಿ ನಿಂತಿದ್ದಾಳೆ. ಬಾಗಿಲಿಗೆ ಕೈಯಿಟ್ಟುಕೊಂಡು ಬಾಲಕಿ ಚಿನ್ಮಯಿ ದೇವಿ ನಿಂತಿದ್ದಾಳೆ. ಈ ವೇಳೆ ಮೂರನೇ ತರಗತಿಯ ಬಾಲಕಿಯಿಂದ ಬಾಗಿಲು ತಳ್ಳಿದ ಆರೋಪ ಕೇಳಿ ಬಂದಿದೆ.
ಈ ವೇಳೆ ಚಿನ್ಮಯಿ ದೇವಿ ಬಲಗೈನ ಎರಡು ಬೆರಳುಗಳು ಕಟ್ಟಾಗಿವೆ. ಕಟ್ಟಾಗಿದ್ದ ಬೆರಳುಗಳು ಇದ್ದಿದ್ದರೆ ಅದನ್ನು ಜೋಡಿಸಬಹುದಾಗಿತ್ತು ಎಂದು ವೈದ್ಯರು ಪರಿಶೀಲನೆ ಮಾಡಿದ ಮೇಲೆ ಹೇಳಿದ್ದಾರೆ. ಕಟ್ ಆಗಿ ಬಿದ್ದ ಬೆರಳುಗಳನ್ನು ಗುಡಿಸಿ ಬಿಸಾಕಿದ ಆರೋಪ ಇದೀಗ ಕೇಳಿ ಬರುತ್ತಿದೆ. ಬೆರಳು ಕಟ್ ಆದ ಜಾಗಕ್ಕೆ ನೀರು ಸುರಿದು ಬ್ಯಾಂಡೇಜ್ ಸುತ್ತಲಾಗಿದೆ. ನಾಮಕಾವಾಸ್ತೆ, ಚಿಕಿತ್ಸೆ ನೀಡಿ ಬ್ಯಾಂಡೇಜ್ ಹಾಕಿದ ಆರೋಪ ಕೇಳಿ ಬರುತ್ತಿದೆ. ಸೂಕ್ಷ್ಮ ಚಿಕಿತ್ಸೆ ಕೊಡಿಸದೆ ಶಿಕ್ಷಕರು ಪೋಷಕರಿಗೆ ಕರೆ ಮಾಡಿದ್ದಾರೆ ಬ್ಯಾಂಡೇಜ್ ಕಟ್ಟಿದ್ದು, ಬಾಲಕಿಯನ್ನ ಪೋಷಕರ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ.








